ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಳವೆ ಯೋಗದಭ್ಯಾಸ ಹರಿಯೇ ಎನ್ನಕೈ ನೀ ಪಿಡಿಯದಿಹುದು ಸರಿಯೇ ಪ ದಿವ್ಯಯೋಗದ ಬಗೆಯ ಪೇಳಿದೈ ಗೋಪಾಲ ಸವ್ಯಸಾಚಿಯ ಧನ್ಯನೆನಿಸಿದೈ ಶ್ರೀಲೋಲ ಭವ್ಯವಾದಾಕೃತಿಯ ತೋರ್ದೆ ಗೋಪಿಬಾಲಾ ಅವ್ಯಯಾನಂದ ಮಾಂಗಿರಿರಂಗ ವಿಠಲ 1 ನಿರ್ಮಮತೆಯೇ ಬೀಜ ಸರ್ವಸೇವೆಯೇ ಬೇರು ಕರ್ಮದೊಳಗುತ್ಸಾಹವಿರಲದೇ ಸುರಿನೀರು ಮರ್ಮವಿಲ್ಲದ ಹೃದಯವೈಶಾಲ್ಯವೇ ಕುಸುಮ ನಿರ್ಮಲತೆಯೇ ಫಲವು ಇದು ಕರ್ಮಯೋಗ 2 ಭಕ್ತಿಯೆಂಬುದೆ ಬೀಜ ಸಮ್ಮತಿಯೆ ತಾಬೇರು ಭಕ್ತಜನರ ಸೇವೆಯೇ ಮೇಲೆರೆವ ನೀರು ಏಕಾಗ್ರಚಿತ್ತವೇ ಸರಸಪರಿಮಳಪುಷ್ಪ ಮುಕ್ತಿಯೇ ಫಲಮಿದೆ ಭಕ್ತಿಯೋಗ3 ಆಸನವೇ ಬೀಜ ಪ್ರಾಣಾಯಾಮವೇ ಬೇರು ಆಸೆಯಿಂ ಗೈವ ದಿನಚರ್ಯೆಯೇ ನೀರು ಮಾಸದಿರುವಾರೋಗ್ಯ ಪುಷ್ಪತಾನೊಮ್ಮನಮೆ ಭಾಸಿಪಾ ಫಲಮಿದೆ ಹಟಯೋಗವಯ್ಯ 4 ಯಮನಿಯಮಗಳೆ ಬೀಜಧಾರಣವೆ ತಾಂಬೇರು ಕ್ರಮಮಾದಘ್ರಣಿದಾನ ಮೇಲೆರೆವ ನೀರು ವಿಮಲಮಾಗಿಹ ಧ್ಯಾನ ಪೂರ್ವಸಂಪ್ರಜ್ಞತಾ ಕ್ರಮಸಮಾಧಿಯೆ ಫಲವು ಇದು ರಾಜಯೋಗ 5 ವರವಿವೇಕ ಬೀಜ ವೈರಾಗ್ಯವೇ ಬೇರು ಗುರುಕರುಣಮೆಂಬುದೇ ಮೇಲೆರೆವ ನೀರು ಪರಬ್ರಹ್ಮ ಜ್ಞಾನವೇ ಪರಿಮಳಿಸುವ ಪುಷ್ಪ ವರಮೊಕ್ಷವೇ ಫಲವು ಇದು ಜ್ಞಾನಯೋಗ 6 ಯೋಗಮಾರ್ಗವ ತಿಳಿದು ಅನುಸಂಧಿಯಿಂ ಸಕಲ ತ್ಯಾಗ ಮಾಡುವ ನಿಯಮವೆನಗಸಾದ್ಯ ಆಗಾಗ ನಿನ್ನ ನಾಮಂಗಳನು ಪೇಳ್ವುದೇ ಯೋಗವೆಂದೆನಿಸುವ ಮಾಂಗಿರಿರಂಗ ನೀಲಾಂಗ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರಸನ್ನ ಶ್ರೀ ನವಗ್ರಹ ಸ್ತುತಿಗಳು ಶ್ರೀ ಸೂರ್ಯದೇವ ಸ್ತೋತ್ರ 88 ಆ ನಮಿಸುವೆ ಘೃಣಿ ಆದಿತ್ಯ ಸೂರ್ಯ ಸೂರಿ ಪ್ರಾಪ್ಯ ಪ ಅಮಿತ ಸ್ವತೇಜದಿ ಝಗಿ ಝಗಿಸುತಿ ಜಗತ್ ಜನ್ಮಾದಿಕರ್ತ ಚೇಷ್ಟಕ ಸ್ಫೂರ್ತಿದಾತ ಅಮಯ ದೂರ ಸುಗುಣ ಗಣಾರ್ಣವ ದೇವ ಶ್ರೀಮನ್ನಾರಾಯಣ ಧ್ಯೇಯ ಧ್ಯಾನಿಪೆ ನಿನ್ನ 1 ಮಕರ ಕುಂಡಲವಾನ್ ಕಿರೀಟಿಯೆ ಅರಿದರ ಧಾರಿ ಅವ್ಯಯಾನಂದ ಚಿತ್ ಚಾಮೀಕರ ವಪು ಶ್ರೀಯುಕ್ ಪದ್ಮದಿ ಇರುತಿಹಿಯೋ ಅರ್ಕಸ್ಥ 2 ಹಿಂಕಾರ ಪ್ರಸ್ತಾವ ಆದಿ ನಮೋ ನಮೋ ಉದ್ಗೀಥ ಪ್ರತಿಹಾರೋಪದ್ರವ ನಿಧನ ಉತ್ಕøಷ್ಟ ಸಾಮ ಪ್ರತಿಪಾದ್ಯ ನಾರಾಯಣ ಋಕ್ ಸಾಮ ವೇದದಿಂ ಸ್ತುತ್ಯ ವಾಗ್ವಾಯ್ವಿಂದ 3 ಭೂತೇಂದ್ರಿಯ ಕರ್ಣಾದಿಗಳಿಗೆ ದೂರ ದ್ಯುಸ್ಥದಿವಃಪರ ತ್ರಿಪಾದ ಜ್ಯೋತಿರ್ಮಯನು ಹಿತಕರನಿವ ಅರ್ಕನೋಳ್ ಜ್ವಲಿಸಿ ಅರ್ಕಗೆ ಒದಗಿಸಿಹ ತನ್ನ ಸೂರ್ಯನೆಂಬೋ ನಾಮ 4 ಸೂರ್ಯದೇವನೆ ದಯಾವಂತನೆ ನಮೋ ನಮೋ ಕಶ್ಯಪಾತ್ಮಜ ನೀ ಎನ್ ಪಾಪ ಪರಿಹರಿಸೋ ಮಹಾದ್ಯುತಿ ತಮೋಘ್ನನೇ ಜ್ಞಾನಾಯುರ್ದಾತ ನೀ ಶ್ರೀಯಃಪತಿ ನಾರಾಯಣನ್ನೊಲಿಸೋ ಎನಗೆ 5 ಸೂರ್ಯ ನೀ ಅಹರಹ ಎನ್ನಸರ್ವಪೀಡೆಗಳ್ ಕಳೆದು ಬೃಹತಿಸಾಸಿರ ಸ್ವರ ವ್ಯಂಜನಾಕ್ಷರ ವಾಚ್ಯ ಶ್ರೀಹರಿಯ ಭಜಿಸಲು ಶತಾಯುಸ್ ಬಲವೀಯೋ 6 ಶರಣು ಪದ್ಮಜಪಿತ ಪ್ರಸನ್ನ ಶ್ರೀನಿವಾಸ ಸೂರ್ಯ ನಿನ್ನ ಪ್ರೀತಿಪಾತ್ರ ಸೂರ್ಯನೊಳಿದ್ದು ನೀ ಜಗತ್ಸರ್ವ ಕಾಯುತ್ತಿ ಕರುಣದಿ ಎನ್ನನು ಎನ್ನವರನು ಕಾಯೋ 7 ಪ
--------------
ಪ್ರಸನ್ನ ಶ್ರೀನಿವಾಸದಾಸರು