ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗ್ಯಾಕೆ ದುರ್ಮತಿ ಎಲೆ ಕೋತಿ ಪ ಅನುದಿನದಿ ನಾನು ನನದೆಂಬ ಅ.ಪ ಮೊದಲಿಂದಲಿ ಅವಿವೇಕದಿಂದ ಮೋಹಪಡುತ ನೀನಿರಲ್ ತುದಿಗೆಯಮನ ಬಾಧೆಯಹುದು ಬಲು 1 ಚಪಲಾತ್ಮರಾದವರಲಿ ಸೇರಿ ಚಾಟು ಮಾತುಗಳಾಡುವೇ ವಿಪರೀತ ಜ್ಞಾನವಿದಲ್ಲವೇ 2 ನಡೆನುಡಿಗಳಾದಿಯಾದ ಎಲ್ಲಕು ನಾಥ ನೀನೆಯೇನಲಾ ದೃಢವಾಗಿ ನಿನ್ನೊಳು ತಿಳಿದು ನೋಡೋ 3 ಸುರರು ಹಿತವಾಗದೆಂದಿಗು ನೀನಲ್ಲ ದೊರೆ 4 ಭಾರ ಗುರುರಾಮವಿಠಲ ಪೊರೆಯುವನು 5
--------------
ಗುರುರಾಮವಿಠಲ
ಶ್ರೀನಿವಾಸ ನಿನ್ನ ಪಾದಧ್ಯಾನವ ಪಾಲಿಸಿ ಎನ್ನ ಮಾನಸಾನಂದಿಸೋ ಶತಭಾನುತೇಜನೆ ಪ ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವ ಕಾನನಾದಹನ ಚಿತ್ರಭಾನು ದನುಜಾರಿಹರಿ ಅ.ಪ ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ ವಂದನೆಯ ಮಾಡುವೆನಯ್ಯಾ ಇಂದುವದನಾ ಇಂದುಧರ ನುತ ಮುಚುಕುಂದವರದನೆ ಗುಣ ಬಂಧುರಾ ಶ್ರೀ ಪುಲಿಗಿರಿ ಮಂದಿರ ಮಂದರಧರ1 ಇಷ್ಟುದಿನ ನಿನ್ನ ಮನಮುಟ್ಟಿ ಭಜಿಸದೆ ಬಲು ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟ ಫಲದಾಯಕ ತ್ರಿವಿಷ್ಣಪಾದಿಪಾನುಬವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಲೋಕಪತಿ ಪಿನಾಕೆಯನ್ನು ವೃಕನೆಂಬ ಭೀಕರಾಸುರನು ಉರಿಹಸ್ತ ಬೇಡಲು ಆಕಪಾಲಿಯಿತ್ತು ಅವಿವೇಕದಿಂದ ಲೋಡುತಿರೆ ಲೋಕ ಮೋಹಿನಿಯ ರೂಪ ಸ್ವೀಕರಿಸಿ ಶಿವನಕಾಯ್ದೆ3 ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ ಕೀರ್ತಿ ಮೂರ್ತಿ ಬೇಡಿಸದಿರು ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ ನೋಡಿ ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ವಾಸುಕಿಶಯನ ಪೀತವಸನ ದಿವ್ಯಭೂಷಣ ವಿ ಭೂಷಿತ ಲಲಿತಶುಭ ವೇಷವಿಪುಲ ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತ ಪೋಷಣ ದುರಿತಗಣ ಶೋಷಣ ಶ್ರೀ ವರದವಿಠಲ5
--------------
ವೆಂಕಟವರದಾರ್ಯರು
ಹಗಲು ಸಮಯದಲಿ ಇರುಳು ನೋಡಿದ ಬಾವಿ ಗುರುಳಬಹುದೇ ನರರು ಈ ಜಗದೊಳು ಪ ಮರುಳು ಮಾಡುವ ಭವದುರುಳು ಬಂಧನದೊಳು ಸಿಗಲು ಬಯಸಬಹುದೇ ಅವಿವೇಕದಿ ಅ.ಪ ಅಡಿ ಐದು ಉದ್ದದ ಒಡಕು ಒಂಭತ್ತಿನ ಕಡು ದುಃಖ ದೇಹಕೆ ಸಿಡಿವುದು ತರವೆ ಪೊಡವೀಶನಾದರೂ ಮಡಿಯಲು ನಿನ್ನಯ ಸಡಗರವೆಲ್ಲವು ಹಿಡಿಯೊಳಗಲ್ಲವೇ 1 ಅನುದಿನದಲಿ ನೀನು ಹಣ ಹಣವೆನ್ನುತ ಕುಣಿಯುವುದನು ನೋಡಿ ಅಣಕಿಸುವರು ನಿನ್ನ ತನುಮನ ಕ್ಲೇಶವನನುಭವಿಸುತ ಸದಾ ಹಣವಗಳಿಸಲದನುಣುವರು ಬೇರಿಹರು 2 ಗೃಹಿಣಿ ಗೃಹಿಗಳೆಲ್ಲ ಕುಹಕವೆಂದರಿಯದೆ ಗೃಹವು ಎನ್ನದು ಎಂದು ಗೃಹಿಣಿ ಎನ್ನವಳೆಂದು ಬಹುವಿಧ ವೈಭವವೆನಗಿಹುದೆನ್ನುವ ಮಹದಾಗ್ರವನ್ನು ಸಹಿಸುವನೇ ಹರಿ 3 ಸಿರಿ ಸಂತತ ಗಳಿಸಲು ಅಂತಕ ತನುವನು ಸೆಳೆಯಲು ಗಳಿಸಿದ ಕಂತೆಗಳೆಲ್ಲವೂ ಎಂತು ನಿಲ್ಲಿಸುವುವು ಚಿಂತಿಸಿ ಮನದೊಳು ಹರಿಯನು ನಿಲಿಸೊ 4 ಊಹಿಸುತೆಲ್ಲವ ಈ ಮಹಿಯೊಳಗಿನ ಮೋಹವ ಜರಿಯುತ ಪಾಹಿ ಎಂದು ಆ ಮಹಾಮಹಿಮ ಪ್ರಸನ್ನ ಹರಿಯ ದಿವ್ಯ ಸ್ನೇಹಸುಜಲದ ಪ್ರವಾಹದೊಳಗೆ ನಲಿಯೊ 5
--------------
ವಿದ್ಯಾಪ್ರಸನ್ನತೀರ್ಥರು