ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಗುರು ತಾರಿಸೊ ಶರಣರಕ್ಷಕ ನಮ್ಮ ಕರುಣಾಕರ ದೇವ ಧ್ರುವ ¨Àವಜನ್ಮದಲಿ ಬಂದು ಬಹುಬಳಲಿದೆ ನಾನು ಅವಿದ್ಯದಾಟಕೆ ಐವರು ಕೂಡಿ ತಾ ಜೀವನ ಮುಕ್ತಿಗಾಣಿಸಗೊಡದಿಹರು 1 ಮೂರೊಂದು ಮಂದಿಯು ಸೇರಗೊಡದೆ ಪಥ ಆರುಮಂದಿಯ ಕೂಡಿ ಕಾಡುತಲಿ ಆರು ಮತ್ತೆರಡುಮಂಡೆಯ ಕಾವಲಿಗೆ ನಾನು ಆರೆನಯ್ಯ ಶ್ರೀಗುರುಶಿರೋಮಣಿಯೆ 2 ಹತ್ತು ಹೊಳಿಯು ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತಿವ ತಾರಿಸಿ ಮೂಢsÀಮಹಿಪತಿಯ ಸಂತತ ಸದ್ಗತಿಸುಖ ಈವುದೆನಗಿನ್ನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮೊರೆಯ ಹೊಕ್ಕೆನು ನಿನ್ನಾ | ಚರಣ ಕಮಲಕ ಸಿರಿಪತಿ ಭವರೋಗ ವೈದ್ಯ ನೆಂಬದು ಕೇಳಿ ಪ ಅನ್ಯವಾರ್ತೆಯ ಕೇಳಿ ಕಿವಿಬಧಿರಾಗದೆ ನಿನ್ನ ಕಥಾಶ್ರವಣದ ರಸದೀ ಇನ್ನು ಕೇಳುವ ಪರಿಮಾಡೋ ಅವಿದ್ಯದಾ ಕಣ್ಣಿನ ಪರಿಗೆ ಜ್ಞಾನಾಂಜನವಿಡೋದೇವಾ 1 ವಿಷಯನಂಜಲಿ ತಾಪವೆಡಗೋಂಡದೇಹಕೆ ಅಸಮಸತ್ಸಂಗ ಕಷಾಯಕೊಟ್ಟು ಹುಸಿ ನುಡಿ ಪರನಿಂದೆಯಾಡಿದ ರೋಗದಿ ಹಸಗೆಟ್ಟ ನಾಲಿಗೆ ನಾಮಾಮೃತವ ನೀಡೋ 2 ನಾಸಿಕ ಕೊರಡಾಯಿತಿಭೋಗ ದ್ರವ್ಯದಿ ವಾಸನೆ ಕೊಡು ತುಳಸಿಯಾರ್ಪಿತವಾ ಧ್ಯಾಸತೈಲದಿ ಮನಸಿನ ಕರ್ಮವಾತವಾ ದೋಷಬಿಡಿಸಿ ಕಾಯೋ ಗುರು ಮಹಿಪತಿ ಸ್ವಾಮಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು