ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಪ್ರಕಾರವೆ ಸ್ವಾಮಿ ಮಂದಿಯ ರಕ್ಷಿಸುವುದು ನಿಂದವರ ದೇಹದಲ್ಲಿ ಹಿಂದೆಮುಂದಭಯವನಿತ್ತು ಪ. ಅಪಾರ ಮಹಿಮ ನೀನು ಒಪ್ಪುವ ಹಯಾಸ್ಯನಾಗಿ ಎಪ್ಪತ್ತೆರಡು ಸಾವಿರ ಇಪ್ಪ ನಾಡಿಗಳೊಳಿದ್ದು 1 ಮುಖ ನಾಸ ನೇತ್ರ ಶ್ರೋತ್ರ ತ್ವಕ್ ನಖೇಂದ್ರಿಯ ತದ್ಗೋಳಕ ಸಕಲರೂಪಗಳಲ್ಲಿ ನೀನೆ ಆಧಾರವಾಗಿದ್ದು 2 ಶ್ವಾಸೋಚ್ಛ್ವಾಸ ಚೇಷ್ಟವಿಚÀಕ್ಷಣ ಹಾಸವಿಲಾಸ ಭೂಷಣ ಗ್ರಾಸಾವಾಸಂಗಳಿಗೆ ನಿವಾಸವಾಗಿ ಪ್ರೇರಿಸುವೆ 3 ಅನಂತ ರೂಪಗಳಲ್ಲಿ ನೀನೆ ಆಧಾರವಾಗಿದ್ದು 4 ಪ್ರಾಣೋಪಾನ ರೂಪಿನಿಂದ ವ್ಯಾನೋದಾನರೂಪನಾಗಿ ವ್ಯಾನೋದಾನ ರೂಪಿನಿಂದ ಉದಾನ ಸಮಾನನಾಗಿದ್ದು 5 ಪೂಜಾ ವ್ಯಾಖ್ಯಾನ ಕೀರ್ತನ ಭೋಜನ ಮಜ್ಜನಸುಖ ಭಾಜನೆಗಳಲ್ಲಿದ್ದು ಪೂಜ್ಯನಾಗಿ ಪ್ರೇರಿಸುವ 6 ವಿಶ್ವ ತೇಜಸ್ಸು ಪ್ರಾಜ್ಞಾ ತುರ್ಯಾ ಅವಸ್ಥಾತ್ರಯಂಗಳೆಲ್ಲ ಕೊಡುವೆ ಜಾಗ್ರತ್ಸ್ವಪ್ನ ಸುಷುಪ್ತಿಯಲ್ಲಿ ವಿಶ್ವಪ್ರೇರಕನಾಗಿದ್ದು 7 ಆತ್ಮರೂಪ ಆದ್ಯ ಅನಂತ ಅಂತರಾತ್ಮ ರೂಪನಾಗಿ ಜ್ಞಾ- ನಾತ್ಮ ರೂಪಿನಿಂದ ಪರಮಾತ್ಮರೂಪನಾಗಿ 8 ಅನಿರುದ್ಧ ಸಂಕರ್ಷಣ ಪ್ರದ್ಯುಮ್ನ ಘನ ವಾಸುದೇವ ನೆನೆವರ ಪಾಪ ಪರಿಹರಿಸುವ ನರಹರಿ 9 ನೀನು ನಿನ್ನ ದಾಸರಿಗಾಗಿ ಮನುಷ್ಯಮುಖದಿಂದ ತತ್ವ ತನುಗಳಿಂದ ಕುಡುವ ಅವರವರ ದೇಹ್ಯದೊಳಿದ್ದು 10 ಸರ್ವರೊಳಗೆ ನೀನಿದ್ದು ಅವರವರ ವಿಭಾಗದ ಕರ್ಮ ಪರೀಕ್ಷಿಸಿ ಪ್ರೇರಿಸುವ ವರ ಶ್ರೀಹಯವದನ 11
--------------
ವಾದಿರಾಜ
ವಂದಿಸುವೆನು ನಿತ್ಯದೊಳು ವಂದಿಸುವೆನು ಪ ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ 1 ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯ ಮಾಡಿ ಮೋಹವನು ಹಿಂದುಗಳೆದು ನವವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರ ತ್ರಯದೊಳು 2 ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲು ನಾದಗಳೆಂಬ ಕಹಳೆವಿಡಿದವಗೆ 3 ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ 4 ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ 5 ಪ್ರತ್ಯಾಹಾರದಿಂ ಮಣಿಹಾರಕದ ಮನೆಯ ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು 6 ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು ಮನದೊಳು ಮೂಲ ಬಂಧದಿ ಆರು ಶಕ್ತಿಗಳ ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ- ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ 7 ಖೇಚರಿಯ ಯೋಗದಿಂ ಕರಣ ಚತುಷ್ಟಯದ ನೀಚ ಪ್ರಧಾನಿಗಳ ನೆಗಳವನಿಕ್ಕಿ ಕಾಲ ಕರ್ಮದ ಕಣ್ಣುಗಳ ಕಿತ್ತು ಯೋಚನೆಯ ಮಾಡಿದನು ವೀರಾಸನದೊಳು 8 ಮಾಯಾ ಪ್ರಪಂಚವೆಂಬನ್ಯಾಯ ನಾಯಕರ ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು- ಪಾಯದಿಂದಾರು ವಿಕಾರಗಳ ಕೈಗಟ್ಟಿ ಬಾಯ ಹೊಯ್ದ ಗುರುವಿಗೆರಗುವೆನು ನಾನು 9 ಇಪ್ಪತ್ತೊಂದು ಸಾವಿರವಾರು ನೂರಾದ ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು ಒಪ್ಪುವನು ಅರೆನೇತ್ರದಿಂದ ಬೆಳಗುವನು 10 ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ ವರ್ಣಾಶ್ರಮಂಗಳನು ಏಕವನು ಮಾಡಿಯೆ ನಿರ್ಣಯಿಸಿಕೊಂಡು ತಾ ನೋಡುವವಗೆ 11 ನುತಿಕರ್ಮದಿಂದಷ್ಟ ಆತ್ಮಕರ ಆಸನವ ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ 12 ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು ಕಾದು ಇರುತಿಹ ಹರಿಗಳಾರು ಬಿಂದುವಿನಿಂ ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ ಆದಿ ಕರಣಿಕನನ್ನು ಹಿಡಿದವನಿಗೆ13 ದಾತೃತ್ವದಿಂ ಸತ್ಯಲೋಕವನು ತಾ ಕಂಡು ಕಾತರದಿ ಆಕಾರದುರ್ಗವನು ಹತ್ತಿ ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ ಈ ತೆರದ ಮಹಾದುರ್ಗವನು ಕಂಡವಗೆ 14 ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ ಗುಣನಿಧಿಯು ವರಾಹತಿಮ್ಮಪ್ಪರಾಯನನು ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ 15
--------------
ವರಹತಿಮ್ಮಪ್ಪ
ಶ್ರೀ ವಿಷ್ಣು ತೀರ್ಥ ಅಣು ವಿಜಯ ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ ಚರಣಸರಸೀರುಹದಿ ಶರಣಾದೆ ಸತತ ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ ಪಾದ ಸೇವಿಸಿದ ಫಲವಾಗಿ ಭಾಗೀರಥಿ ಬಾಳಾಚಾರ್ಯರಲಿ ಜನಿಸಿ ವೇಂಕಟರಾಮಾರ್ಯ ಐಜಿಯವರ ಸುಪವಿತ್ರ ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ 1 ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು ಸತ್ಯಸಂಧರಸುತ ಸತ್ಯವರ ತೀರ್ಥರಿಂ ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ 2 ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು ಸೂರಿ ಈರ್ವರಿಗೆ ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ 3 ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ ಭಾಗವತ - ಸಾರೋ ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು 4 ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು ಆಧ್ಯಾತ್ಮ ರಸರಂಜಿನಿ ಅಮೃತಫÉೀಣ ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ ಸಾಧನವಾಗಿಹುದನ್ನು ರಚಿಸಿಹರು ಇವರು 5 ಹದಿನಾರು ಪ್ರಕರಣ ಶೋಡಶಿ ಎಂಬುzರÀಲಿ ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ ಮೋಕ್ಷಾಂತ ಶೋಡಶಿಯಲ್ಲಿಹುದು ಭಕ್ತಿ ಶುಚಿಯಲಿ ಪಠನೀಯ ರಹಸ್ಯವು 6 ಬಂಧಕವು ಬಂಧ ನಿವೃತ್ತಿಯು ಬಿಂಬ ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು ಅವಸ್ಥಾತ್ರಯ ನಿರ್ಮಾಣ ಆರನೆಯದು 7 ಪ್ರಾಣವ್ಯಾಪಾರವು ಭೋಜನ ಪ್ರಕರಣವು ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು ತನು ಅಧಿಷ್ಠಾನ ರಥಾಧಿ ಪ್ರಕರಣವು ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು 8 ಸ್ವಪ್ನವು ಸುಷುಪ್ತಿಯು ಗಮನಾಗಮನವು ಶುಭ ಮೋಕ್ಷ ಪ್ರಕರಣ ಷೋಡಶವು ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ 9 ಜೀವಹೋಮ - ಉಪನಯನ ಸೂರ್ಯಗತಿ ಯಜ್ಞ ಪವಿತ್ರತಮ ವೇದಾಧ್ಯಯನ ಭಿಕ್ಷಾಟನ ವೈಶ್ವಾನರ ಪ್ರಿಯ ಭೋಜನ ಪಾಪಲೇಪ ಜೀವ ಪ್ರಯಾಣ ಮಾರ್ಗವು ನವಮ 10 ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ ಶುದ್ಧಯಜ್ಞ `ಸ್ವರೂಪಯಜ್ಞ' ಸುಲಭಪೂಜಾ ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ ಆದಿತ್ಯಗ ಮಧು ಸುಖ ಪೂರ್ಣ ವಿಷಯ 11 ಯೋಗ್ಯ ಆಧಿಕಾರಿಗೆ ಮಾತ್ರ ಈಸೌ - ಭಾಗ್ಯಪ್ರದ ಜ್ಞಾನ ಪುಷ್ಠಿಕರಣ ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು ಅಯೋಗ್ಯರಿಗೆ ಸರ್ವಥಾ ಕೊಡಕೂಡದು 12 ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್ ಐದಿಹರಿಪುರಲಯವ ಚಿಂತನೆಮಾಡಿ ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು 13 ಮತ್ತೊಂದು ಅಂಶದಿ ವೃಂದಾವನದಿಹರು ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು 14 ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ `ಮಹಿಸಿರಿ' ಶ್ರೀ ಪ್ರಸನ್ನ ಶ್ರೀನಿವಾಸನ ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು 15 ಪ || ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಯೋಗಿಬಿಟ್ಟರೆ ಬಿಡದು ನಾದವುಯೋಗಿಬಿಟ್ಟರೆ ಬಿಡದು ನಾದವುಕೂಗುತಿಹುದು ಸರ್ವಕಾಲದಿಜಾಗಟೆ ಕೊಳಲು, ತಮ್ಮಟೆಚಂಗು ಕೊಂಬು ತಾಳರವಗಳಿಂದಪಮಲಗೆ ಕುಳಿತರೆ ಕೂಗುತಿಹುದುನಿಲಲು ನಡೆಯೆ ಕೂಗುತಿಹುದುಒಲಿದು ಮಾತುಗಳಿರಲಿಕೆಬಲಿದು ಧುಂಧುಂ ಎಂದು ಭೇರಿಯ ಶಬ್ದರವಗಳಿಂದನಿಲದೆ ಮುರಿದು ಮದವಸುಲಭ ಸುಖವ ಸುರಿಸುತ1ಕಣ್ಣು ಮುಚ್ಚಲು ಕೂಗುತಿಹುದುಕಣ್ಣು ತೆರೆಯೆ ಕೂಗುತಿಹುದುಉಣ್ಣುತಲಿ ತಾನು ಇರಲಿಕೆಘಣ್ಣ ಘಣ್ಣ ಘಣ್ಣಲು ಎಂದು ಘಂಟೆ ಶಬ್ದದ ರವಗಳಿಂದಮಣ್ಣಗೂಡಿಸಿಶೋಕಮೋಹವಪುಣ್ಯರವವ ಬೀರುತ2ಸುಮ್ಮನಿರಲು ಕೂಗುತಿಹುದು ಸುಳಿದಾಡೆ ಕೂಗುತಿಹುದುಬಮ್ಮನೊಮ್ಮೆ ಮರೆತು ಇರಲಿಕೆಘಮ್ಮ ಘಮ್ಮ ಘಮ್ಮ ಎಂದು ಶಂಖ ಶಬ್ದದ ರವಗಳಿಂದಹಮ್ಮುವಾಸನ ಕ್ಷಯವಮಾಡಿನಿರ್ಮಲತ್ವವ ತೋರುತ3ಅರುಣಕಾಲದಿ ಅಸ್ತಕಾಲದಿ ಅವಸ್ಥಾತ್ರಯ ಕಾಲದಿಅರಗಳಿಗೆ ಕ್ಷಣ ಮೂಹೂರ್ತದಿಸರಿಗರಿ ಗಮಪ ಎಂದು ಸ್ವರಮಂಡಲರವಗಳಿಂದತರಿದು ಜನನ ಮರಣವನ್ನುತೇಜಬಿಂದು ಸುರಿವುತ4ಇಂತುನಿತ್ಯಕಾಲದಿ ಬಿಡದೆಸಂತತದಲಿ ಹಾಡಿಪಾಡಿನಿಂತು ಚಾಕರಿಯನೆ ಮಾಡುತಚಿಂತಕರನುತಾ ಚಿದಾನಂದನಾಗಿ ತೋರ್ಪ ಯೋಗಿಯನ್ನುಅಂತ್ಯವಿಲ್ಲದಾನಂದಪಡಿಸಿ ಆಶೀರ್ವಾದವ ಪಡೆಯುತ5
--------------
ಚಿದಾನಂದ ಅವಧೂತರು