ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕುತಿಯ ಪಾಲಿಸು ಜೀಯಾ ಮುಂದೆ ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ಪ ತನುವೆ ನಿನ್ನಾಧೀನವೆನಿಸು ಇದು ಅನುದಿನ ಕೊಡು ಏಕಪ್ರಕಾರ ಮನಸು ಧನ ವಡವೆಯ ಕಂಡ ಕನಸು ಎಂದು ನಿತ್ಯ ನಿನ್ನಂಘ್ರಿ ನೆನಸು 1 ತತ್ವದ ಮತದೊಳಗಿರುಸು ಪುಶಿ ಉತ್ತರ ಮತವೆಂಬ ಮಾರ್ಗವ ಮೆರೆಸು ಉತ್ತಮರೊಳಗೆನ್ನನಿರಿಸು ಭವ ವತ್ತುವ ನಿನ್ನ ನಾಮಮೃತ ಸುರಿಸು 2 ಶ್ರವಣ ಮನನ ಧ್ಯಾನವೀಯೋ ಎನ್ನ ಅವಗುಣವೆಣಿಸದೆ ಕರುಣಾಳು ಕಾಯೊ ಅವಸಾನದಲಿ ನೀನೆ ಗತಿಯೊ ತ್ರೈ ಭುವನೇಶ ವಿಜಯವಿಠ್ಠಲ ನೀ ದೊರೆಯೋ 3
--------------
ವಿಜಯದಾಸ
ಆವಗಂ ನೆನೆಮನವೆ ಸಕಲ ಚಿಂತೆಯ ಕಡಿದು |ಕಾವುದಿದು ಕೃಷ್ಣನಾಮ ಪ.ಭಾವಿಸಲು ಯಮದೂತ ಮದಕರಿಗೆ ಕೇಸರಿಯು |ಶ್ರೀಕೃಷ್ಣ ದಿವ್ಯನಾಮ ಅಪವರವೇದ - ಶಾಸ್ತ್ರಗಳ ವ್ಯಾಸಮುನಿ ಮಥಿಸಲು ಸುಧೆಯಾದ ಕೃಷ್ಣನಾಮ |ಪರಮಭಕುತರು ಸವಿದು ಉಂಡು ಮುನಿಗಳ ಕಿವಿಗೆ ಎರೆದ ಶ್ರೀ ಕೃಷ್ಣನಾಮ ||ಗುರುದ್ರೋಣ - ಭೀಷ್ಮ - ಅಶ್ವತ್ಥಾಮ - ಜಯದ್ರಥನ ಜಯಿಸಿತೈ ಕೃಷ್ಣನಾಮ |ಕುರುಸೇನೆಶರಧಿಯನು ಪಾಂಡವರ ದಾಟಿಸಿತು ಶ್ರೀ ಕೃಷ್ಣ ದಿವ್ಯನಾಮ 1ದ್ರೌಪದೀ ದೇವಿಯಭಿಮಾನವನು ಕಾಯ್ದುದಿದು ಶ್ರೀಕೃಷ್ಣದಿವ್ಯ ನಾಮ |ಆಪತ್ತು ಪರಿಹರಿಸಿ ಕುಕ್ಷಿಯೊಳು ಪರಿಕ್ಷೀತನ ರಕ್ಷಿಸಿತು ಕೃಷ್ಣನಾಮ ||ಗೋಪವನಿತೆಯರೆಲ್ಲ ಕುಟ್ಟುತಲಿ - ಬೀಸುತಲಿ ಪಾಡುವುದು ಕೃಷ್ಣನಾಮ |ತಾಪಸನು ಸಾಂದೀಪ ಮುಚುಕುಂದರಿಗೆ ಮನೋ - ರಥವು ಶ್ರೀಕೃಷ್ಣನಾಮ 2ಸುಖದ ಅವಸಾನದಲಿ ಈ ನಾಮ ಗಾಯನವು ಶ್ರೀಕೃಷ್ಣದಿವ್ಯನಾಮ |ದುಃಖಾವಸಾನದಲಿ ಈ ನಾಮವೇ ಜಪವು ಶ್ರೀ ಕೃಷ್ಣದಿವ್ಯನಾಮ ||ಸಕಲ ಸುಖಗಳ ಕೊಟ್ಟು ಸದ್ಗತಿಯ ನೀವುದಿದು ಶ್ರೀ ಕೃಷ್ಣದಿವ್ಯನಾಮ ||ಸುಖವನಧಿ ಅರವಿಂದನಾಭ ಪುರಂದರವಿಠಲ ನೊಲುಮೆಯಿದು ದಿವ್ಯನಾಮ 3
--------------
ಪುರಂದರದಾಸರು