ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನನ್ನದೇನಿದೆಯೊ ದೇವ ನಿನ್ನದೆ ಎಲ್ಲವೂ ಪ ಪನ್ನಗಾಸನ ಧೊರೆಯೆ ಸನ್ನುತಾಂಘ್ರಿಯ ಹರಿಯೆ ಅ.ಪ. ಅವನಿಯೊಳು ಪುಟ್ಟಿಸುವ ಭವದೊಳಗೆ ನೂಕುವವಕಿವಿ ಮೂಗು ಕಣ್ಣಿವದನವ ತ್ವಚೇಂದ್ರಿಯದಿ ಅವಿತು ವ್ಯಾಪ್ತತನಾಗಿ ವ್ಯವಹರಿಸುವವ ನೀನೇಅವಸರದಿ ಕಾಯುವ ದೇವ ನೀನೆಯೊ 1 ತಿಳಿಯುವವ ನೀನೆಯೊ ತಿಳಿಸುವವ ನೀನೆಯೊಗಳಿಸುವವ ನೀನೆಯೊ ಬಳಸುವವ ನೀನೆಯೊಬೆಳಿಸುವವ ನೀನೆಯೊ ಕಳೆಯುವವ ನೀನೆಯೊಕೊಳುವವನು ನೀನೆಯೊ ಕಸಿಯುವವ ನೀನೆಯೊ 2 ಅಂತರಂಗದಿ ಅಡಗಿನಿಂತು ಪ್ರೇರಿಸುವನಂತದ್ವಂದ್ವದ ನಟನೆ ಸ್ವಂತತನವೆನಗೆಲ್ಲಿಸಂತರನು ಉದ್ಧರಿಸಲಿಂತು ಭೂಮಿಗೆ ಬಂದುನಿಂತ ಗದುಗಿನ ವೀರನಾರಾಯಣನು ನೀನೆ 3
--------------
ವೀರನಾರಾಯಣ
ಆನಂದಮೆಂದಿದಕೆ ಹೆಸರಿಟ್ಟೀ ಪಾಪಿ ಪ ಮನಬಂದತೆರ ಸೇಂದಿ ಸೆರೆಕುಡಿದು ಉಬ್ಬಿ ಅ.ಪ ಕೊಡ ಪಡಗ ಹೆಂಡವನು ಕುಡಿದು ಎಚ್ಚರದಪ್ಪಿ ತಡೆಯದಲೆ ಮಲಮೂತ್ರ ಬಿಡುತದರೋಳುರುಳಿ ಬಡಿಸಿಕೊಂಡಟ್ಟೆಯಿಂ ಒಡನೆ ಎಚ್ಚರವೊಂದಿ ಕೆಡಿಸಿದಾನಂದಮ್ಹಿಡಿ ಕೊಡುವೆ ಶಾಪೆನುವಿ 1 ಅವಸರದಿಂ ಜಿಹ್ವೆಯ ಸವಿರುಚಿ ಲವಲವಿಕೆಯಿಂ ಭವಿಜನುಮಿಗಳು ಎಲ್ಲ ಕವಿದುಬಂದಿಳಿದು ಸವಿಯಬಾರದ್ದು ಸವಿದು ಶಿವನೆನಾವೆಂದೆನುವ ಭವಿಗಳೆಲ್ಲರು ಜಗದಿ ಶಿವನ ಪೋಲುವರೆ2 ಕದ್ದು ಮುಚ್ಚಿಲ್ಲದಲೆ ಮುದ್ದೆ ಮುದ್ದೆ ಗಾಂಜವನು ಸಿದ್ಧಪತ್ರೆಂದೆನುತ ಶುದ್ಧಮತಿಗೆಟ್ಟು ಬದ್ಧರೆಲ್ಲ ಸೇದಿ ನಿಜ ಪದ್ಧಿತಿಯನ್ಹದಗೆಡಿಸಿ ಶುದ್ಧಾತ್ಮರೆನಲು ಪರಿಶುದ್ಧರಾಗುವರೆ 3 ನಾನುನೀನೆಂದೆಂಬ ಖೂನಡಗಿ ಎತ್ತ ತಾನೆ ತಾನೆಂದು ಹೊಳೆವ ಬ್ರಹ್ಮ ಆನಂದ ಸೊಬಗು ಏನೊಂದು ತಿಳಿಯದೆ ಆನಂದವೆಂದೆನುತ ಶ್ವಾನನಂದದಿ ಕೂಗ್ವಿ ಜ್ಞಾನಾಂಧ ಅಧಮ 4 ಹುಚ್ಚುಮನುಜನೆ ನಿನಗೆ ಹೆಚ್ಚಿನ ಗೋಜ್ಯಾಕೆ ನಿಶ್ಚಲಭಕುತಿಂ ಬಚ್ಚಿಟ್ಟು ಮನದಿ ಅಚ್ಯುತ ಶ್ರೀರಾಮನ ಹೆಚ್ಚೆಂದು ದೃಢವಹಿಸಿ ಎಚ್ಚರದಿ ಭಜಿಸಿ ಭವಕಿಚ್ಚಿನಿಂದುಳಿಯೊ 5
--------------
ರಾಮದಾಸರು
ಪ್ರಾಣೇಶಗೆ ಮಂಗಳಂ ಮಂಗಳ ವಾಯುಕುಮಾರನಿಗೆ ಜಯಮಂಗಳ ಅಂಗನೆ ಸುತಗೆ ಮಂಗಳ ಭುಜಗಭೂಷಣ ದೇವಗುರುವಿಗೆ ಮಂಗಳ ಭಾರತಿ ರಮಣನಿಗೆ ಪ ತ್ರೇತಾಯುಗzಲ್ಲಿ ಖ್ಯಾತರಾದ ಸುರರ ಘಾತಿಸಿ ಬಡಿದಂಥಾ ವಾತಾತ್ಮಜ ಭೂತಳದೊಳತಿ ಖ್ಯಾತಿಯ ಪಡೆದಂಥ 1 ದ್ವಾಪರದಲಿ ತಾ ಭೂಪ ಭೀಮನಾಗಿ ಗೋಪಾಲಕನ ನಿಜ ದಾಸನಾಗಿ ಪಾಪಿ ಖೂಳರ ಸಂತಾಪವ ಬಡಿಸುತ ಗೋಪಾಲಸಖನ ಪ್ರತಾಪವ ಪೊಗಳಿದಂಥ 2 ದುರುಳ ಮತಗಳೆಲ್ಲ ಮುರಿಯಲೋಸುಗ ಅವಸರದಿಂದಲಿ ಬಂದು ಕಲಿಯುಗದೀ ಶಿರಿವತ್ಸಾಂಕಿತನಿಗೆ ಪರಮಪ್ರಿಯವಾದ ವರಮಧ್ವಮತವನ್ನು ಧರೆಯೊಳು ತಂದಂಥ 3
--------------
ಸಿರಿವತ್ಸಾಂಕಿತರು
ಮರೆವಾರೆ ಎನ್ನ ರಾಘವೇಂದ್ರ ಗುರುವೆ ಸಂಪನ್ನ ಕರೆದು ಕಾಮಿತಗಳ ಕರವೆ ನಾ ನಿನಗೆಂದು ಪ ದಾರಿಯ ತಪ್ಪಿ ಪೋಗುವ ಧೀರ ಫೋರನ್ನ ದಾರಿಯ ಪಿಡಿಸಿನ್ನು ಪುರವನ್ನೆ ತೋರಿಸೆ ಊರಿನವೊಳಗೆ ಅವನ ಆಗಾ ದೂರ ನೋಡುವರೆ ದೋಷಗಳ ವಿಚಾರಮಾಡುವರೆ ಧೀರರು ಆವ ಪರಿಯಲವನ ಪಾರಗಾಣಿಪರಲ್ಲದೆ 1 ಹಸಿದು ಪರರ ಕೇಳದ ದ್ವಿಜವರಿಯನ್ನ ಶಿಶುವಿನ ನೋಡಿ ದಯದಿಂದ ಕರದಿನ್ನು ಹಸಿದ್ಯಾಕೊ ಎಂದು ಪಾಕವ ಮಾಡಿ ಹಸನಾಗಿ ತಂದು ಬಡಿಸುವ ಅವಸರದಿ ನಿಂದು,ಅವನ ದೋಷ ಪಸರಿಸಿ ಉಣಿಸಿದ ಜನರುಂಟೆ ಧರೆಯೊಳು 2 ಜಲಪಾನಾತುರನಾಗಿ ಜಲವ ಕೇಳಿದ ವಿಪ್ರ- ಕುಲ ತರಳನನು ನೋಡಿ ಕೃಪೆಯಿಂದ ಸುರನದಿ ಜಲವನೀವೆನೆಂದು ಬ್ಯಾಗನೆ ದಿವ್ಯ ಕಲಶವ ತಂದು ಬಾರೆಲೊ ಬಲು ಆಲಸ್ಯವ್ಯಾಕೆಂದು ನಿನ್ನಯ ಪಂಕ ತೊಳಿಯ ಕೊಡುವೆನೆಂದು ತಡವ ಮಾಡುವರೆ 3 ಸುಶರೀರ ತನುವನು ಮನದಲಿ ಬಯಸಿ ತಾ ಉಸರದ ಮುನಿತನಯನ ಕಂಡು ತಾವಾಗಿ ಕುಶಲವ ಕೇಳಿ, ದೇವತ ವೈದ್ಯ ಅಸಮರೆಂದೇಳಿ, ರಸ ಮಾಡೆಂದೇಳಿ, ಅವಗೆ ದಿವ್ಯ ರಸವನು ಪೇಳಿ, ಪಸಿ ನಿನ್ನಲಿದ್ದಾ ಕಿಸರು ಪೋದರೆ ಕೊಡುವೆವೆಂದು ನಿಲುವರೆ 4 ಅರ್ತಿಯ ಭಕುತನ್ನ ನೋಡೀಗ ನಿನ ದಿವ್ಯ ಕೀರ್ತಿಯ ನೋಡಿಕೊ, ವಾಸುದೇವವಿಠಲನ ಮೂರ್ತಿಯ ಭಜಕ ಭಕ್ತರಾಭೀಷ್ಟ ಪೂರ್ತಿಗೆ ಜನಕ ನಿನ್ನಯ ಗುಣ ಸ್ಫೂರ್ತಿಗೆ ಜನಕ, ನಿನ್ನಯ ಗುಣ ಸ್ಫೂರ್ತಿ ಉಳ್ಳನಕ ಪಾಪದ ಲೇಶ ವಾರ್ತಿ ಎನಗೆ ಇಲ್ಲವೆಂದು ನಿಶ್ಚೈಸಿದೆ 5
--------------
ವ್ಯಾಸತತ್ವಜ್ಞದಾಸರು