ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಷ್ಟು ದಿನದ ಪೂಜೆ ಹಿಡಿದೆಣ್ಣಾ ಸತಿಯೆಂಬ ಮಾರಿದಿ- ನ್ನೆಷ್ಟು ದಿನ ಪೂಜೆ ಮಾಡಬೇಕಣ್ಣಾ ಪ ಎಷ್ಟು ದಿನದ ಪೂಜೆ ಹಿಡಿದಿ ನ್ನೆಷ್ಟುದಿನ ಮುಂದೆ ಬಾಕಿ ಉಳಿದಿದೆ ಕಷ್ಟಕಂಜದೆ ಬಿಡದೆ ಅನುದಿನ ನಿಷ್ಠೆಯಿಂದ ಪೂಜೆ ಮಾಡುವಿ ಅ.ಪ ಒಬ್ಬರ ಮನೆ ಮುರಿದು ತರುವಿ ಅವಳಿಗೇನೆ ಹಬ್ಬಮಾಡಿ ಉಣಿಸುತಿರುವಿ ಮತ್ತು ಇನ್ನು ಒಬ್ಬರೈತರ ಬೊಬ್ಬೆ ಹೊಡೆಯುವಿ ದಬ್ಬಿ ಓಡಿಸುವಿ ಹಬ್ಬ ಹುಣ್ಣಿಮೆ ಬರಲು ವೈಭವದುಬ್ಬಿಉಬ್ಬಿವಸ್ತ್ರ ಒಡವೆ ಅಬ್ಬರದಿಂದುಡಿಸಿ ತೊಡಿಸಿ ಮಬ್ಬಿನಿಂದ ಹಿಗ್ಗುತಿರುವಿ 1 ಧನವ ತಂದು ಅವಳಿಗರ್ಪಿಸಿ ಮತ್ತು ನಿನ್ನಯ ಮನವ ಅವಳ ವಶಕೆ ಸಲ್ಲಿಸಿ ಎಂಟುಗೇಣಿನ ತನುವು ಅವಳಾಧೀನದಲ್ಲಿರಿಸಿ ಕುಣಿವಿ ಪಶುವೆನಿಸಿ ಪಾಲಿಸಿ ದಿನಗಳೆಯುವಿ ನೋಡಿಕೊಳ್ಳದೆ 2 ಬಂದಕಾರ್ಯ ಮರೆದುಬಿಟ್ಟ್ಯಲ್ಲ ಹೆಡತಲೆಮೃತ್ಯು ಹಿಂದೆ ನಿಂತು ನಲಿಯುತಾಳಲ್ಲ ಹೇ ಪಾಪಿ ನೀನು ಒಂದೂ ವಿಚಾರ ಮಾಡಿ ಅರೀಲಿಲ್ಲ ಮಂದನಾದೆಲ್ಲ ತಂದೆ ಶ್ರೀರಾಮನ್ನಂತಂಘ್ರಿಗೊಂದಿ ಭಜಿಸಿ ದಾಸನಾಗಿ ಅಂದಮಾದ ನಿತ್ಯಮುಕ್ತಿ ಪಡೆವ ಸುಸಂಧಿ ನಡುವೆ ಹೋಗುತಾದರ್ಲ3
--------------
ರಾಮದಾಸರು
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ ಮುನ್ನೆ ದಾರಿದ್ರತನ ಯೆಣಿಸಿಕೊಳದೆ ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ ನಿತ್ಯ 1 ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು 2 ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ ಪ್ರಖ್ಯಾತ ವೇದವೇದಾಂತ ಪ್ರೌಢ ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ 3 ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ ಹಾದಿಯನು ಹಿಡಿದು ಸಮೀಪ ಬರಲು ಪಾದಕಾದರು ಬಿದ್ದು ಮಾತಾಡುವೆನೆಂಬೊ ಮೋದವನು ತಾಳಿ ಏಕಾಂತ ಹುಡುಕುವೆ 4 ಅಂಧಕ ಮೂಕಿ ಬಧಿರೆ ಹೀನಾಂಗ ಅವರೋತ್ತಮ ಜಾತಿ ವಿಧಿ ನಿಷೇಧವನು ಚಿಂತಿಸದೆ ತೀವರದಿಂದ ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು 5 ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ ಉರು ಕುಚ ಕಚ ನೋಳ್ಪ ಆಶೆಯಲ್ಲಿ ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ 6 ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ ಸನ್ನ ಮೂರುತಿ ಯೆನ್ನ ಸಾಧನವೇನೊ ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು 7
--------------
ವಿಜಯದಾಸ
ಶ್ರೀದ ನರಹರಿ ವಿಠಲ | ಕಾದುಕೊ ಇವಳಾ ಪ ಸಾಧು ವಂದಿಯ ಹರಿಯೆ | ವೇದಗೋಚರನೆಅ.ಪ. ವಾಹನ ಹರಿಯ | ನಿರ್ಧಾರವನು ಸರಿಸಿಬದ್ದೆಳೆನಿಸಿಹೆ ದಾಸ | ಪದ್ದತಿಯ ಅವಳಾ 1 ಕರ್ಮನಿಷ್ಕಾಮನದಿ | ಪೇರ್ಮೆಯಲಿ ಗೈಯುತ್ತಭರ್ಮಗರ್ಭನ ಪಿತನ | ನಾಮ ಸುಧೆಯುಣುತಾಕರ್ಮಕ್ಷಯವನು ಪೊಂದಿ | ನಿರ್ಮಲಾತ್ಮಕಳಾಗಿಧರ್ಮಾಖ್ಯ ತವಪಾದ | ಪದ್ಮರತಳೇನಿಸೋ 2 ಪತಿ ಸೇವೆ ಹಿಂದೇಈತರದ ಸುಜ್ಞಾನ | ಮತಿಯಿತ್ತು ಪಾಲಿಸುತಕೃತಕಾರ್ಯಳೆಂದೆನಿಸೊ | ನತಜನ ಸುಪಾಲ 3 ವಜ್ರ ಕವಚವನೆಕರುಣಾದಿಂ ತೊಡಿಸೊ ಹರಿ | ಮರುತಂತರಾತ್ಮ 4 ಮೃಡ ವಂದ್ಯ ಹರಿಯೇಕಡು ಕರುಣಿಮನ್ಮಾತ | ಬಿಡದೆ ನೀ ಸಲಹಯ್ಯಬಡವಿಪ್ರಗೊಲಿದ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಇಂಥ ಬುದ್ಧಿಯಲ್ಲಿ ಸೇರಿತೊ ಕೃಷ್ಣ ಗೋಕುಲದೊಳುಎಂಥವರೂ ನಿನ್ನ ದೂರು ಹೇಳುತಿಪ್ಪರೊ ಹೀಗಾದರೆ ನಿಲ್ಲರೋ ಪಗಂಡನುಳ್ಳ ನಾರಿಯರಾ ಮಂದಿಯೆಲ್ಲ ನೋಡ ಬಲು ಉ-ದ್ದಂಡತನದಲ್ಲಿ ಸೀರೆ ಸೆರಗ ಪಿಡಿವರೇ ಇಂಥ ದುಡುಕು ಮಾಡುವರೇ ||ಚಂಡಾಡುವಾಗೆನ್ನವಸನ ಮರೆತೆ ಕೊಂಡು ಪೋಗಲವಳು |ಕಂಡು ಕೊಸರಿಕೊಂಡರಿಂಥ ಸುದ್ದಿ ಹುಟ್ಟಿಸಿ ಪೇಳುವಳಮ್ಮ ಹೊಂದಿಸಿ 1ಹಿರಿಯರುಳ್ಳಾ ಸೊಸೆಯ ಕೂಡ ಒಗೆತನವ ಕೆಡಿಸುವಂತೆ |ಸರಸವಾಡುವದು ನಿನಗೆ ಸಲ್ಲುವದೇನೋ ಯನಗೆ ಭೂಷಣವೇನೋ ||ನಿರುತ ಅವಳ ತಾಯಿ ನಂದಗೋಪಗಣ್ಣಾಯೆಂದು ಕರೆಯ- |ಲರಿತೆನತ್ತೆ ದುಗಳು ನಾದಿನಿಯೆಂದು ಮನಸಿಗೆ ಚರ್ಚೆ ಮಾಡಿದೆನೀ ಬಗೆ2ಕುಲದೇವತೆಯ ಮೀಸಲು ತುಪ್ಪ ನೆಲವಿನ ಮೇಲಿಟ್ಟಿರಲು ಮದ್ದು |ಕಲಶವ ಒಡೆದು ಬಾಹುವದೆಲ್ಲ ಚಿನ್ನಾಟವೇನೋ, ಅವರು ಮುದ್ದಿಸುವರೇನೋ ||ತಿಳಿಯದೆ ನೆಳಲಿದುಯೆಂದು ಕಳ್ಳನ ಒಳಗಿರಿಸಿಹಳೇಕೆಂದು ವಡದೆ |ನೆಲಖರಿಧೋಗುವಘೃತನೋಡಲೆ ತಿಂದೆನಮ್ಮಯ್ಯ ತಪ್ಪಿರೆ ಕಟ್ಹ್ಯಾಕು ಕಯ್ಯ 3ಚಿನ್ನನಂತೆಯಾಗಿಯವರ ಮಗ್ಗುಲೊಳು ಮಲಗಿಯೆಂಥ |ಸಣ್ಣ ಕೃತ್ಯ ಮಾಡಿ ಬಾಹುವೆಂತಲ್ಲೋ ಕಂದ ಕೇಳುವರಿಗೇನುಛಂದ||ನಿನ್ನ ಸಲಿಗೆ ಬಹಳ ಕಂಡು ಇಲ್ಲದ್ದೊಂದೆ ಹುಟ್ಟಿಸುವರು |ಯನ್ನ ದಿಸವಕ್ಕೀ ಜಾರತ್ವ ಕಲಿತಿದ್ದೇನೇನೇ ನಿನಗೇನೂ ತಿಳಿಯದೇನೇ 4ಕದ್ದು ಮೊಲೆಯುಂಡು ಕರು ಬಿಟ್ಟು ಹರಕೊಂಡಿತು ನೋಡಿರಿ ಎಂಬೆಯಂತೆ |ದುಗ್ಧವೆಮಾರಿಬಾಳಿವೆ ಮಾಡುವರೆಂತು ತಾಳುವರೋ ಹೀಗಾದರೆ ನಿಲ್ಲರೋ ||ಇದ್ದಾ ಮನೆಯವರಿಗೆ ನಂಬವು ಅಂಥಾಲಾಳ ಮೊಲೆಯ ನಾನುಂಡರೆ ಮೋರೆಗೆ |ಒದ್ದರೆ ರೋದನ ಮಾಡುತ ನಿನ್ನ ಬಳಿಗೊಂದಿನ ಬಾರೆನೇ ಹುಡುಗರಿಗಂಬುವ ಮಾತೇನೇ 5ಇಡಲುದಕವ ಬೆರಸಿ ಮಜ್ಜನಕೆ ಛಲದಿಂದಲಿ ಚಲ್ಲಿ ಬಾಹುವರೇ |ಬಡಿವೆನೊ ನಾ ತಾಳದೆ, ಮುದ್ದಾದರೆ ಮತ್ತೊಮ್ಮೆಯುಣಬೇಕು ಆಡುತ ಮನೆಯೊಳಗಿರಬೇಕು ||ಹುಡುಗರ ಸಂಗಡ ಅಣ್ಣನೂ ನಾನೂ ಇದ್ದೆವೆ, ಅಲ್ಲಾಕೆಯ ಮೊಮ್ಮಗನು |ಗಡಿಗೆಯ ಉರುಳಿಸೆ ನಾ ಕಂಡವರಿಗೆ ಹೇಳಿದೆನೆ ಇಷ್ಟಾ ಯನ್ನನು ಕಾಡುವದದೃಷ್ಟಾ 6ಎದೆಗಳ ಮುಟ್ಟುವದೇಕೋ ಎರಕೊಂಬುವರಲ್ಲಿಗೆ ಪೋಗಿಯಿನ್ನನ್ನಾ |ಹದದಿಂದಲೆ ಯಿರು ಶಿಕ್ಷೆಯ ಮಾಳ್ಪೆ ಎಚ್ಚರಿಕೆಯಿರಲಿ ಕಾಲ್ಪಡಿದರೆ ಬಿಡೆನೋ ಮರಳಿ ||ಮುದದಿಂದಲಿ ಚಂಡೊಗೆಯಲು ಅವಳಾ ಬಚ್ಚಲಿಯೊಳು ಬಿತ್ತು ತಕ್ಕೊಂಡೇ |ಹದ ತಪ್ಪಿದರೀ ಹೆಂಗಸರೆಲ್ಲಾ ಪ್ರಾಣೇಶ ವಿಠಲನಾಣೇ ಸುಳ್ಳಲ್ಲವು ಕಾಣೇ 7
--------------
ಪ್ರಾಣೇಶದಾಸರು