ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆ ನಿನ್ನ ಭಜಿಸುವಂಥ | ಶರಣ ಸಂಗವಾನಿರುತ ಇತ್ತು ಕಾಯೊಯೆನ್ನ | ಅಘವ ಕಳೆಯುವ ಪ ಮೇರುಗಿರಿಯ ಪೋಲ್ವದುರಿತ | ರಾಶಿ ನಿಚಯವಾಸಾರಿ ತೂಲರಾಶಿಗನಳ | ಪರಿಯ ಮಾಡುವಾ |ಸೂರಿ ಜನ ಸಂಗ ಫಲವ | ಪೇಳಲಳವಾತೋರಿ ಪೊರೆ ಅಂಥವರ | ದೇವರ ದೇವಾ 1 ನಿನ್ನ ಸಂಕಲ್ಪಾನುಸಾರ | ನಡೆವ ಭಕ್ತರಮನ್ನುಜರು ಅವರೆಂದು | ತಿಳಿವ ಕುಜನರಇನ್ನ ತನಯ ಶಿಕ್ಷಿಸುವ | ಬಿಡದಲವರಬೆನ್ನು ಹುರಿಯ ಕೀಳಿಸುವ | ಮನ್ಯುಲವರ 2 ಕಾಲ ಕಳೆವಾರೋ 3 ಸತಿಸುತಿರೊಡನೆಯಿದ್ದು | ಮಮತೆ ದೂರರೋಹಿತವು ಅಹಿತವೆರಡು ಸಹಿಸಿ | ನಿನ್ನಿಂದೆಂಬೋರೋ |ಕ್ಷಿತಿಯೊಳುಳ್ಳ ತೀರ್ಥಕ್ಷೇತ್ರ | ಪಾವಿಸುವರೋಗತಿಯು ನೀನೆ ಸತತ ಎಂದು | ಅನ್ಯ ಬಗೆಯಾರೋ 4 ದರ್ವಿಯಂತೆ ಜೀವನೆಂದು | ಅರಿತು ಅನುದಿನದುರ್ವಿಭಾವ್ಯ ವ್ಯಕ್ತಾಅವ್ಯಕ್ತ | ಅನಂತಗುಣಶರ್ವ ವಂದ್ಯನಾದ ಗುರು | ಗೋವಿಂದ ವಿಠಲನಸರ್ವಕಾಲ ತುತಿಸುತ್ತ | ತಿಳಿವರಾಧೀನ 5
--------------
ಗುರುಗೋವಿಂದವಿಠಲರು
ಈ ಧರಣಿಯೊಳ್ ಹದಿನಾರು ಸಾವಿರ ಮಂದಿ ಆಳುತ ದ್ವಾರಕೆಯಲ್ಲಿ ವಿನೋದದಿ ಕುಳಿತಿದ್ದ ಹರಿಯು 1 ಅಂಬುಜೋದ್ಭವನ ಅಂಕದಲುದಿಸಿದ ಸುತ ಚೆಂದ ಚೆಂದ ವೀಣೆ ಪಿಡಿದು ಕಂದರ್ಪಪಿತ (ನಲ್ಲಿಗೆ) ನಲಿನಲಿದಾಡುತ ಬಂದ ನಾರಂದ ಹರುಷದಲಿ2 ಬಂದ ನಾರಂದನ ಕಂಡು ಕಮಲನಾಭ ಚೆಂದದಿಂದಲಿ ಅಘ್ರ್ಯ ಪಾದಪೂಜೆಯ ಮಾಡಿ ನಾ- ರಂದಗೆ ಎರಗಿದನಾಗ3 ದೇವಾಧಿದೇವನೆ ದೇವಲೋಕದಿ ಸುತ್ತಿ ಈ ಪಾರಿಜಾತವ ತಂದೆ ದೇವಿ ರುಕ್ಮಿಣಿಗೀಗ ಮುಡಿಸೆಂದು ನಾರಂದ ಸ್ವಾಮಿಯ ಚರಣಕ್ಕರ್ಪಿಸಿದ 4 ತಕ್ಷಣದಿ ಜಗನ್ಮಾತೆ ಮಾಲಕ್ಷುಮಿ ಸಾಕ್ಷಾತ ಶ್ರೀನಾರಾಯಣನು ವಕ್ಷಸ್ಥಳದಲಿ ಹೊಂದಿರುವ ರುಕ್ಮಿಣಿಯನು ಸ್ತೋತ್ರ ಮಾಡಿದನು ನಾರದನು 5 ಕಡಲಶಯನ ಕಡೆಗಣ್ಣ ನೋಟಗಳಿಂದ ಕಡುಮುದ್ದು ಸುರಿವೊ ರುಕ್ಮಿಣಿಯ ಬಡನಡುವಿನ ಭಾಮಿನಿರನ್ನೆ ಬಾರೆಂದು ತೊಡೆಯ ಮ್ಯಾಲಿಟ್ಟ ಶ್ರೀಕೃಷ್ಣ 6 ದುಂಡುಮಲ್ಲಿಗೆ ಗೊಂಡ್ಯ ಚೌರಿ ರಾಗಟೆ ಜಡೆ- ಅಂಗನೆ ರುಗ್ಮಿಯಾಲಿಂಗನೆ ಮಾಡುತ ರಂಗ ತಾ ಮುಡಿಸಿದ ಸತಿಗೆ 7 ಸರಿಸವತೇರ ಬಿಟ್ಟು ಸುರಪಾರಿಜಾತವ ಗರುವಿಕೆಯಿಂದ ನೀ ಮುಡಿದೆ ಹರದಿ ಸತ್ಯಭಾಮೆ ಕೇಳಿ ಮುನಿದರಿನ್ನು ಅರಿಯೆನು ನಾ ಇದಕೆ ಉಪಾಯ 8 ಗಾಡಿಕಾರನು ಕೃಷ್ಣ ಆಡುವೊ ಮಾತನು ಕೇಳಿ ರುಕ್ಮಿಣಿ ನಗುತಿರಲು ಓಡುತ ಬಂದು ನಾರದ ಸತ್ಯಭಾಮೆ- ಗಲ್ಲದ ವಾರ್ತೆಗಳರುಹಿದನು 9 ಅಲ್ಲಿಂದ ದೇವಲೋಕವ ಸುತ್ತಿ ತಂದೇನೆ ಚೆಲ್ವೆನಗೆ ತಕ್ಕ ಕುಸುಮ ಗೊಲ್ಲ ಕೃಷ್ಣನ ಕೈಯಲ್ಲಿ ಕೊಟ್ಟರೆ ತನ್ನ ನಲ್ಲೆ ರುಕ್ಮಿಣಿಗೆ ಮುಡಿಸಿದನು 10 ಕೇಳುತ ಭಾಮೆ ತಲ್ಲಣಿಸಿ ಕೋಪಗಳಿಂದ ಹೇಮಮಾಣಿಕ್ಯದ್ವಜ್ರಾಭರಣ ಹಾರ ಪದಕ ಕಠಾಣಿಮುತ್ತನೆ ಚೆಲ್ಲಿ ಭೂಮಿಲಿ ಬಿದ್ದೊ ್ಹರಳಿದಳು 11 ಮಲ್ಲಿಗೆ ದವನ ಕ್ಯಾದಿಗೆ ಶಾವಂತಿಗೆ ಬಿಟ್ಟು ಒಲ್ಲೆನೆಂದೊರೆಸಿ ಕಸ್ತೂರಿಯ ವಲ್ಲಭನೊಲ್ಲದೀ ಸೊಗಸ್ಯಾತಕೆನುತಲಿ ಗಲ್ಲದ್ವಿಳ್ಯವನುಗುಳಿದಳು 12 ಸರ್ಪನಂದದಿ ಉಸುರ್ಹಾಕುತ ಭಾಮೆ ತಾ ನೇತ್ರದಿ ಜಲವ ಸುರಿಸುತಲಿ ಸರ್ಪಶಯನನೊಲ್ಲದೀ ದೇಹವ್ಯಾಕೆಂದು ಪಟ್ಟೆ ಮಂಚದಲೊರಗಿದಳು 13 ನಿಂತು ನೋಡುತ ಸತ್ಯಭಾಮೆ ಮಾಡುವೊದು ಇ- ನ್ನೆಂತು ಮಾಡಲಿಯಿದಕೆಂದು ಅಂತರಂಗದಲಿ ಯೋಚನೆ ಮಾಡಿ ನಾರಂದ ಶ್ರೀ- ಕಾಂತನ ಮನೆಮಾರ್ಗ ಹಿಡಿದ 14 ತಿರುಗಿ ಬಂದ್ಹರಿಯ ಮುಂದರುಹಿದ ನಾರಂದ ತೊರೆವೋಳು ತನ್ನ ಪ್ರಾಣವನು ಮರುಗುತ ಸೊರಗಿ ಬಿದ್ದಿರುವೊ ಭಾಮೆಯ ನೋಡಿ ಕರುಣವಿಲ್ಲೇನೊ ಶ್ರೀ ಕೃಷ್ಣ 15 ಮುನಿಯ ಮಾತನು ಕೇಳಿ ಮುಗುಳು ನಗೆಯ ನಕ್ಕು ಪರಿ ಬವಣೆಗೆ ಒಳಗಾದೆ ಧರೆಯ ಒಳಗೆ ಇಬ್ಬರ್ಹೆಂಡರಾಳುವೋರಿನ್ನು ಪರಮ ಮೂರ್ಖರು ಅವರೆಂದ 16 ಹೊದ್ದ ಪೀತಾಂಬರ ಅಲೆಯುತ ಶ್ರೀಕೃಷ್ಣ ಹದ್ದನೇರದೆ ನಡೆಯುತಲಿ ಮುದ್ದು ರುಕ್ಮಿಣಿಯ ಮುಂದಕೆ ಕರೆದ್ಹೇಳದೆ ಎದ್ದು ಬಂದನು ಭಾಮೆಮನೆಗೆ 17 ಅರ್ಕನಂತ್ಹೊಳೆಯುತ ಹೊಕ್ಕ ತನ್ನರಮನೆ ಕಕ್ಕಬಿಕ್ಕ್ಯಾಗಿ ನೋಡುತಲಿ ದಿಕ್ಕು ದಿಕ್ಕಿಗೆ ಬಿದ್ದಾಭರಣವಾರಿಸಿ ರತ್ನ ದೆಕ್ಕಿಲೇ(?) ಬಂದು ತಾ ಕುಳಿತ 18 ಮಿಂಚು ಸೂರ್ಯಗೆ ಮಿಗಿಲಾಗಿದ್ದ ಮುಖ ಬಾಡಿ ಸಂಪಿಗೆ ಸರವ ಈಡ್ಯಾಡಿ ಚಿಂತೆಮಾಡುವರೆ ಚಿನ್ನದ ಗೊಂಬೆ ಏಳೆಂದು ಮಂಚದ ಮ್ಯಾಲೆ ತಾ ಕುಳಿತ 19 ಬೆವರಿದ್ದ ಮುಖವ ಮುಂಜೆರಗಿಲಿಂದೊರೆಸುತ ಹ- ರವಿದ ಹಾರ ಹಾಕುತಲಿ ಪರಮ ಪ್ರೀತಿಲಿ ತನ್ನ ಕರಗಳಿಂದ್ಹಿಡಿದೆತ್ತೆ- ನ್ನರಗಿಳಿ ಏಳೆಂದೆಬ್ಬಿಸಿದ 20 ಸಿಟ್ಟಿಲಿಂದೆದ್ದು ಶ್ರೀ ಕೃಷ್ಣನ ಒಳೆಯಿಕ್ಕೆ ಬಿಟ್ಟವರಾರು ಈಗೆನುತ ದೃಷ್ಟಿ ತೆಗೆದು ಕೋಟಿಸೂರ್ಯ ಪ್ರಕಾಶನ ಇ- ಕ್ಕದ್ಹಾಗೆವೆಯ ನೋಡಿದಳು 21 ಇಷ್ಟು ಕ್ರೋಧಗಳ್ಯಾತಕೀ ಚಾಡಿ ನಾರಂದ ಹಚ್ಚಿ ಹೋದನೆ ಕದನವನು <ಈಔಓಖಿ size=
--------------
ಹರಪನಹಳ್ಳಿಭೀಮವ್ವ
ದುರಿತ ವಿನಾಶನಾ ದುರಿತ ಇಂದು ಪುರಂದರನ ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ ಉದ್ಧಾರ ಸಂದೇಹ ಸಲ್ಲದಿದಕೆ ಪ ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ ಚಾರು ಮಂಡಿತನಾಗಿ ಇರುತಿರಲು ಯದು ಪರಿ ವಾಲಗ ಗೋಪಿಕಾ ನಾರಿಯರ ಖ್ಯಾಲದಲ್ಲಿ ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ ನಾರದನು ಧರೆಗಿಳಿದನು 1 ಬರುತಲೇ ವೈಕುಂಠಪುರದರಸಗೆರಗಿದನು ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ ಮೂವತ್ತೆರಡು ರಾಗಗಳಲಿದಿರುನಿಂದು ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ ಸುರರು ಶಿರವನೆ ತೂಗಲು2 ಅಚ್ಚುತನು ಪರಮ ಭಾಗವತನ್ನ ಭಕುತಿಗೆ ಮೆಚ್ಚಿದನು ಬೇಡುವುದು ವರವಧಿಕವೆಂದೆನಲು ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ- ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ 3 ವರ ಪಡೆದು ನಾರದನು ಇರುತಿರಲು ತಾವಿತ್ತ ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ ಪುರಂದರವೆಂಬ ನಗರಿಯಲ್ಲಿ ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ 4 ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ- ದೆಂದು ಇಂದಿರೆಪತಿಯು ದಯದಿಂದ ವಲಿದವರ ಕುಣಿಕುಣಿದು ನಂದವನೆ ತೋರಿಕೊಳು ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ ಪರ ಬೊಮ್ಮ ಬಂದು ಸಿಲುಕಿದನೆಂಬುವುದೆ ಇದಕೆ ಪ್ರಾಮಾಣ್ಯವೆಂದು ತಿಳಿದು ಸುಜನರು 5 ವಾಸವನೆ ಮಾಡಿದರು ಪ್ರಹ್ಲಾದನವತಾರ ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ ಪುರಂದರ ದಾಸರೆಂಬುವ ಪೆಸರಲಿ ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು ವಸಿಸಿದರು ಧರ್ಮಬಿಡದೆ 6 ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ ತಟಿನಿಗಳು ತಪಸು ಫಲವಾಯಿತೆಂದು ತಪನ ಕಾಲದಲೆದ್ದು ದಾಸರಾ ಸದನದಲಿ ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ ಸುಪಥವನು ಇಚ್ಛಿಸುವರು 7 ಅವರೆಂದ ವಚನಗಳೆÀಲ್ಲ ವೇದಾರ್ಥವಾಗಿ ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ ಭುವನ ನಿಧಿಯೊಳಗೆ ಮುಳುಗಿ ಪವನ ಮತವಿಡಿದು ಪರಿಪೂರ್ಣಮಾಚಾರದಲಿ ತವಕದಿಂದಲಿ ಹರಿಯ ಪಾದವನೆ ಪಡಕೊಂಡು ನವರೂಪಿನಲಿ ಇಪ್ಪರು 8 ಏನು ಇದು ಎಂತೆಂದು ದೂಷಿಸದಿರಿ ದಾಸರ ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ ಕಾಣುವಾ ಜನ ಲಾಲಿಸೆ 9
--------------
ವಿಜಯದಾಸ