ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಮನದೊಳಗೆ ಮಸಣವನು ತುಂಬಿಕೊಂಡಿರಲು ಮನೆಯ ಚಂದದಿ ಮಾಡಿದರೇನಯ್ಯ ಪ ಮನೆಯೊಡೆಯ ತಾನು ಸನ್ನಡತೆಯಲ್ಲಿರದೆ ಮನೆಮಂದಿಯನು ದಂಡಿಸಲಾಗದಯ್ಯ ಮನೆತುಂಬ ಮನತುಂಬ ಜಾಜಿಪುರಿವಾಸನನು ಅನುದಿನವು ನುತಿಸಲು ಸುಖವುಂಟು ಕೇಳಯ್ಯ 1 ದೇವರು ಧರ್ಮವನು ದಾರಿಯಾಚೆಗೆ ಅಟ್ಟಿ ದೇವಾಲಯವ ಮನೆಯೊಳಗೆ ಮಾಡಲೇನು ಅವರಿವರ ನೋಟಕ್ಕೆ ಒಪ್ಪವಾದೀತಷ್ಟೆ ಯಾವ ಪುರುಷಾರ್ಥವದರಿಂದ ಹೇಳು 2 ಅವ್ವ ಕಷ್ಟವು ಬರಲು ಅವರಿವರು ಬಾರರು ಆ ವಾಸುದೇವನಲ್ಲದೆ ಮತ್ತೊಬ್ಬರಾಗರು ಭಾವ ಮೈದುನ ಗಂಡ ಹೆಂಡತಿ ಮಕ್ಕಳು ಇವರೆಲ್ಲ ದೇವ ಜಾಜಿಪುರೀಶನೊಕ್ಕಲು 3
--------------
ನಾರಾಯಣಶರ್ಮರು