ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮ್ಮನ ತೊಡೆಯ ಮೇಲೆ ನಮ್ಮ ಕೃಷ್ಣ ಸುಮ್ಮನೆ ಮಲಗಿಹನು ಪ ಸುಮ್ಮೊನದಿ ಸುಖದಿಂ ನಲಿದಾಡುತ ಅ.ಪ ಮಣ್ಣ ಮೆದ್ದುದ ಕಂಡು ಗೋಪಿದೇವಿ ಚಿಣ್ಣನ ಬಾಯಿನೋಡೆ ಕಣ್ಣಿಗೆ ಬ್ರಹ್ಮಾಂಡ ತೋರಿಸಿದಂಥ ಪರಬ್ರಹ್ಮ 1 ತರಳ ತರಲೆ ಮಾಡೆ ತಾಯಿಯು ಹೊರಳೆಗೆ ಕಟ್ಟಲಾಗಿ ಸುರತರುಗಳ ಮುರಿದು ನಿಜತರವ ಗೈದ ನಿತ್ಯಾತ್ಮ 2 ಕಾಲಲೊದೆದು ಕೊಂದು ಧಾತಾ ದೇವೇಂದ್ರರ ಶಿರಬಾಗಿಸಿದ ಪೂತಗುಣ 3 ಹಾಲುಕೊಡೆನೆ ಬಾಲ ಸಂಜೆಗೆ ಹಸುವ ಕರೆವೆನೆನಲು ಲೀಲೆಯಿಂ ಕಣ್ಣ ಮುಚ್ಚಿ ಕತ್ತಲೆ ಕವಿಸಿದ ದೈವ 4 ಗೋಪೀಜನಗಳೊಡನೆ ಗೋಪಾಲನು ಸ್ತ್ರೀಲೋಲನಾಗಿ ಕುಣಿದು ರಥಾಂಗಪಾಣಿ 5 ನವನೀತ ಚೌರ್ಯಮಾಡಿದ ನಾರೀಜನರ ವಸ್ತ್ರಾಪಹರ ಗೈದ ಅವನೀಭಾರವ ಕಳೆದ ಮಾಯಾಮೂರ್ತಿ ದೇವಶಿಖಾಮಣಿ6 ಭೂಮಿಪಾಲನೆ ಮಾಡಿದ ಹಿಂಸಕರ ವಂಶವಳಿಪ ಹಂಸಲೋಲ ಜಾಜಿಶ್ರೀಶ 7
--------------
ಶಾಮಶರ್ಮರು
ಪತಿತಪಾವನ ಕರಿವದನ ನಾರಾಯಣ ಮತಿಗೆಮಂಗಳವೀಯೋ ಮುನಿಜನಾಭರಣ ಪ ಇತರವ್ಯಾಕುಲಗಳ ಮಥನವು ಮನದೆ ಬಹಳ ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ ಸತತ ನಿನ್ನ ಗುಣಕಥನ ಮಾಡುವ ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ 1 ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ ಇವರ ಕಷ್ಟಗಳಿಂದ ಪಾರುಗಾಣಿಸಿದೆ ಅವನೀಭಾರವನಿಳುಹುವ ದೊರೆಯೇ ಕುವಲಯನೇತ್ರ ಕುಮಾರನ ಕೈಪಿಡಿ2 ಶ್ರೀರಮಣೀವರ ಸಾರಗುಣಾಕರ ಸಿರಿ ಜಾಜೀಶ್ವರ ಕೋರುತಿರುವೆಮಗೆ ತೋರಿಸು ತವಪದ ನಾರದ ಮುನಿನುತ ಸಾರುತೆ ನಮಿಪೆ 3
--------------
ಶಾಮಶರ್ಮರು