ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ ಸುತರ ಪದಕಮಲಗಳ ಸ್ತವನವು ಸಾಧನವು ಜವದಲಿ ಶ್ರೀ ಹರಿದಯ ಪಡೆವುದಕೆ ಪ ನವ ನವ ರೂಪದಿ ಅವನಿತಲದೊಳಗೆ ಭುವನಜನಾಭನ ವಿವರವನರುಹಿದ ಅ.ಪ ಶ್ರೀ ರಾಘವನಾಜ್ಞೆಯ ಶಿರದಲಿ ವಹಿಸಿ ವಾರಿಧಿಯನೆ ಲಂಘಿಸಿ ವಾರಿಜಲೋಚನೆ ಸೀತೆಯ ಕಂಡು ತೋರುವ ಭಕುತಿಯನು ಶೂರ ದಾಶರಥಿಯಂಗುಳಿಯವ ಕೊಟ್ಟು ಧೀರತನದಿ ಲಂಕೆಯ ಸೂರೆಯ ಮಾಡಿದ 1 ಪಾಂಡುಸತಿ ಮನುವನು ಜಪಿಸಲು ಜನಿಸಿ ಭೂ ಪಾಂಡು ತನುಜರೊಳು ಮಂಡನರೆನಿಸಿ ಪ್ರಚಂಡ ವಿಕ್ರಮರಾದ 2 ಬಾದರಾಯಣರೊಳು ಶ್ರವಣವ ಮಾಡಿ ಮೋದವ ಪೊಂದುತಲಿ ಸಾಧಿಸಿ ದ್ವೈತವ ಮೇದಿನಿಯಲಿ ಸಾಧುಗಳಿಗೆ ಶ್ರೀಹರಿ ಪಾದಕಮಲದಲಿ ಆದರ ನೀಡಿ ಸದಾ ಪ್ರಸನ್ನ ಪೂರ್ಣಬೋಧರೆಂದೆನಿಸಿದ 3
--------------
ವಿದ್ಯಾಪ್ರಸನ್ನತೀರ್ಥರು
ಭೀಮಾ ಹೋ ಭಲಾರೆ ನಿಸ್ಸೀಮ ಹೋ ಭಾಪುರೆ ಹನುಮ ಹೋ ಪ. ನಿಜಜಿತಕಾಮ ಹೋ ಕಾರುಣ್ಯಧಾಮ ಹೋ ರಾಮಚಂದ್ರನ ಚರಣಕಮಲಸರಾಮ ಕಾರ್ಯಧುರಂಧರನೆ ಅ.ಪ. ಆಂಜನೇಯ ಸುಕುಮಾರ ಅದ್ಭುತಮಹಿಮ ರಾಮ[ನ] ದೂತನೆ ಅಂಜದುದಧಿಯ ದಾಟಿ ಅಸುರನ[ವ] ನವ ಕಿತ್ತನೆ ಕಂಜಮುಖಿ ಜಾನಕಿಗೆ ಮುದ್ರೆಯನಿತ್ತ ಬಲುಪ್ರಖ್ಯಾತನೆ ಮಾಡಿಸಿದೆ ಕಲಿ 1 ಅವನಿತನುಜೆಯ ಚೂಡಾರತ್ನವ ಅಂಬುಜಾಕ್ಷನಿಗಿತ್ತನೆ ಸಮರಕನುಕೂಲವೆಂದು ರಾಮಗೆ ಸುಗ್ರೀವನ ಕಾಣಿಸಿದನೆ ಕಮಲನಾಭನ ಆಜ್ಞೆಯಿಂದಲಿ ಕಪಿಬಲವ ಕೂಡಿಸಿದನೆ ಬಹುಪರಾಕ್ರಮಿಯಹುದಹುದೊ ಕಲಿ 2 ಅಗಳುಸಾಗರ ಮಧ್ಯದಲ್ಲಿಹ ನಗರವನು ಬಂದು ಮುತ್ತಿದೆ ಬಗೆದು ಕಲ್ಮರಗುಂಡಿನಿಂದಲಿ ವಿಗಡದೈತ್ಯರ ಮಡುಹಿದೆ ಬಗೆಬಗೆ ಮಯಾಜಾಲವನು ಗೆದ್ದು ಭರದೊಳದ್ರಿಯ ತುಡುಕಿದೆ ಜಗತ್ಪತಿಯ ಮೂರ್ಬಲವನೆಲ್ಲವ ಸಂಜೀವನವ ತಂದುಳುಹಿದೆ 3 ಪೃಥ್ವಿಯೊಳಗುದ್ದಂಡ ದೈತ್ಯರ ಸುತ ಸಹೋದರರ ಮಡುಹಿದೆ ಹತವ ಮಾಡಿ ಶ್ರೀರಾಮ ಬಾಣದಿ ಹತ್ತು ತಲೆಗಳ ಕೆಡಹಿದೆ ಪ್ರತಿಶತೇಶ್ವರ ಶ್ರೀರಮಣಿಯನ್ನು ತಂದು ರಾಘವಗೆ ಒಡಗೂಡಿಸಿದೆ ಮಾಡಿಸಿದೆ ಕಲಿ 4 ಕುಂಡಲ ಚಾರು ಯಜÉ್ಞೂೀಪವೀತನೆ ಸೂರ್ಯಚಂದ್ರಮರುಳ್ಳನಖ ವಜ್ರಕಾಯದಲಿ ನಿರ್ಭೀತನೆ ವೀರಕದನಕಠೋರ ರಾಣಿಬೆನ್ನೂರ ಬಯಲಾಂಜನೇಯನೆನೀರಜಾಕ್ಷನ ಹೆಳವನಕಟ್ಟೆರಂಗನ ಪ್ರಿಯದಾಸನೆ ಕಲಿ 5
--------------
ಹೆಳವನಕಟ್ಟೆ ಗಿರಿಯಮ್ಮ
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು
ಜಯ ಪಾಂಡುರಂಗ ಹೋ ಜಲದ ನಿಭಾಂಗ ಹೋ|ಜಗದಂತರಂಗ ಹೋ ಜಯ ಪಾಂಡುರಂಗ ಹೋ ಪನೀಲಭೂಧರವಾಸಕೌಸ್ತುಭಭೂಷ ರಮೆಯಾಧೀಶಸುಮನಸ|ಪಾಲ ಗುಣಗಂಭೀರ ನವನೀತಚೋರ ಕುಜನಕುಠಾರ| ನರಹರಿ ||ಫಾಲಲೋಚನಬಂಧು ದೈತ್ಯನ ಕೊಂದು ವೇದವ ತಂದು ದ್ರುಹಿಣಗೆ |ಮೇಲು ಶರುಣುದಲಿತ್ತೆ,ಮಂದರಪೊತ್ತೆ ಸುಂದರ ಮೂರ್ತಿ 1ನಿಗಮವಂದಿತ ರಾಮಹರಿಪೂರ್ಣ ಕಾಮ ಸದ್ಗುಣಧಾಮ, ವಾಮನ |ಮಗನ ಮೂಗಿಲಿ ಪುಟ್ಟಿ, ಹೇಮನ ಕುಟ್ಟಿ,ಅವನಿತಂದಿಟ್ಟಿ, ಈರೇಳು ||ಜಗದಿ ಪೂಜಿತನಾದಿ ಕೈಟಭ ಭೇದಿ ಇಭಪನ ಕಾಯ್ದಿ, ಪ್ರಣತರ |ಅಘವನೋಡಿಸುತಿಪ್ಪ ಹಲಾಯುಧತಲ್ಪಮನ್ಮಥನಪ್ಪ 2ವೇದ ವಿಸ್ತರ ಮಾಡ್ಡೀ, ದಾನವ ಬೇಡ್ಡೀ, ದನುಜನಿಗ್ಯೋಡ್ಡೀ, ಕುರುಕುಲ |ಸೂದನ, ಕಿರೀಟ ಸೂತ, ಪವಮಾನ ತಾತ, ದುರ್ಬಲನಾಥ ಎನ್ನನು ||ಆದರದಿ ಕೈಪಿಡಿಯೋ, ದುರಿತವ ತಡೆಯೊ, ದುರ್ಮತಿ ಕಡಿಯೊ,ಅಗಣಿತ|ಮೋದಪ್ರಾಣೇಶ ವಿಠಲ, ನರಮೃಗ, ನಿಟಿಲನೇತ್ರ, ಅಕುಟಲ3
--------------
ಪ್ರಾಣೇಶದಾಸರು