ಒಟ್ಟು 10 ಕಡೆಗಳಲ್ಲಿ , 8 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸಬಾರದೇನು ಶರಣೆಂಬೆ ನಾನು ಕರುಣಿಸ ಬಾರದೆ ಮೊರೆಯ ಹೊಕ್ಕವನ ಶರಣಾಗತ ಪಂಜರನೆಂಬೊ ಬಿರುದಿರೆ ಪ ಸ್ತಂಭದಿ ನೀ ಬಂದು ದೈತ್ಯನ ಬೇಗ ಶೀಳಿಕೋಪದಿಂದ ಇರಲು ಆಗ ಬ್ರಹ್ಮೇಂದ್ರ ರುದ್ರ ವೃಂದ ಬೆದರಿ ಪೋಗೆ ಪ್ರಹ್ಲಾದನಾಗ ಇಂದಿರಾವರ ಗೋವಿಂದ ಕೃಪೆಯ ಮಾಡೆಂದು ಸ್ತುತಿಸೆ ಆನಂದದಿ ಕಾಯ್ದತಿ ಸುಂದರಮೂರ್ತಿ ಮುಕುಂದ ಧರಣಿಧರ ಸಿಂಧುಶಯನ ಅರವಿಂದನಯನ ಹರಿ 1 ದಶರಥ ಸುತನೆನಸಿ ಮುನಿಯಧ್ವರ ಕುಶಲದಿನ್ನುದ್ಧರಿಸಿ ಪಶುಪತಿ ಧನು ಭಂಜಿಸಿ ಸೀತೆಯ ಕೋರಿ ದಶರಥನಾಜ್ಞೆ ವಹಿಸಿ ಕಾನನದಿ ಚರಿಸಿ ಕುಶನಿಧಿಯನು ಬಂಧಿಸಿ ರಾವಣನ ದಶ ಶಿರಗಳ ಭರದಿಂದಲಿ ಖಂಡಿಸಿ ಅವನನುಜಗ ನಿಶದೊಳ್ ಶಿರಿಲಾಲಿಸಿ ಪೊರೆದ ಶ್ರೀಶಶಿಧರನÀು ಹರಿ 2 ನಕ್ರ ಭಂಗಬಡಿಸೆ ಗಜಗಳರಸ ರಂಗ ಮುರಾರಿ ದೇವೋತ್ತುಂಗ ಶ್ರೀ ಶ್ಯಾಮಲಾಂಗ ಭಕ್ತಾಭಿಮಾನಿ ಮಂಗಳಾರಸತ್ಸಂಗ ಜಗದಂತರಂಗ ವಿಹಂಗ ಸಿರಿ ನರಸಿಂಹ ಬಂದು ಶಾಪಂಗಳ ತರಿದೆ ಭುಜಂಗತಲ್ಪ ಕಾನಂಗಪಿತ 'ಹೆನ್ನೆರಂಗ' ಶರಣು ರಣರಂಗ ಭೀಮ ಹರಿ 3
--------------
ಹೆನ್ನೆರಂಗದಾಸರು
ತೆರಳೆ ನೀ ಮಧುರೆಗೆ ಗೋಕುಲದಲಿ ನಾವುಇರಲಾರೆ ಇರಲಾರೆವೋ ಗೋಪಾಲ ಪ ತರಳತನದಿ ನೀ ಆಡಿದ ಆಟಗಳ ಸ್ಮರಿಸಿಸ್ಮರಿಸಿ ನಾವು ಮರುಗುವುದೆಲೋ ದೇವಅ.ಪ. ವ್ರಜದ ಒಳಗೆ ನೀನು ಇದ್ದದ್ದು ಕೇಳಿಭರದಿ ಪೂತನಿಯ ಕಳುಹಿ ಕೊಟ್ಟರೆತೊಡೆಯ ಒಳಗೆ ಇಟ್ಟು ಸ್ತನಕೊಡುತಿರಲವಳಹುಲಿಯಂತೆ ಹೀರಿ ಹಿಪ್ಪೆಯಮಾಡಿದೆಯೊ ದೇವ ತೃಣದ ಅಸುರನ ಕೊರಳಮಿಸುಗುತ್ತ ಅವನ ಕೆಡಹಿದಿಭರದಿ ಬಂಡಿಯ ಒದ್ದು ಶಕಟನ ಪುಡಿಯಮಾಡಿದ ಪರಮ ಪುರುಷನೆ 1 ಕೊಲ್ಲಕಂಸನು ಭಾಳ ಯೋಚಿಸಿ ಮನದಿಕೊಲ್ಲಬೇಕೆಂದೆನುತ ಸೂಚಿಸೆಬಿಲ್ಲನೆ ಮುರಿದು ಆ ನಲ್ಲೆಯ ಕರಪಿಡಿದುಒಳ್ಳೆ ಪುರಕೆ ಹೋಗಿ ಎಲ್ಲ ಕಾರ್ಯವ ನಡೆಸಿಮೆಲ್ಲನೆ ಏಕಾಂತ ಗೃಹದಲ್ಲಿಸೊಲ್ಲ ಕೇಳುತ ಅವನನು ಕೋಪಿಸೆಅಲ್ಲಿಯನುಜನ ತರಿದು ಅವನಕೊಲ್ಲ ಕಳುಹಿದ ಕಠಿನ ಹೃದಯನೆ2 ಎಲ್ಲ ಹಿಂದಿನ ಸುದ್ದಿ ಬಲ್ಲೆವೊ ನಾವುಇಲ್ಲಿ ಮರೆತೀಯೆಂದು ತಿಳಿದೆವೋಬಲ್ಲ ಅಕ್ರೂರನು ಬಂದು ಇಲ್ಲಿಗೆ ನಮ್ಮಇಲ್ಲದ ಮಾತ ಕೇಳಿ ಮೆಲ್ಲನೆ ಕರೆದೊಯ್ದಅಲ್ಲಿ ರಥವನೆ ಕಾಣುತ ಎದೆಝಲ್ಲೆನಿಸಿ ನಡುಗಿದೆವೊಪುಲ್ಲನಾಭನೆ ಜ್ಞಾನ ಭಕುತಿ ನ-ಮ್ಮೆಲ್ಲರಿಗೆ ನೀನಿತ್ತು ಪೋಗೆಲೊ 3 ಹೆಂಡತಿಯ ಕೂಡಿ ಕದನ ಮಾಡಿಮುಂದೆ ಮೂವರು ತೆರಳಿದಿರಿಬಂದು ಋಷಿಯಾಶ್ರಮದಿ ನಿಂತು ಗ್ರಾಸವ ಬೇಡೆಮಂದಗಮನೆ ನೋಡಿ ಚೆಂದಾಯಿ -ತೆಂದೆ ತಂದು ಕಲಶೋದಕವ ಚೆಲ್ಲಲುಕಂದರುಗಳು ನೀವಾದಿರೊ ತಂದ ಹಲಸಿನ ದೊನ್ನೆ ಪಾಲನುಚೆಂದದಿಂದಲಿ ಕುಡಿದ ದೇವನೆ4 ಮಂದಗಮನೇರಿಂದ ನಿಮಗೆ ಮತ್ತೆಒಂದುಪಕಾರವ ಕಾಣೆವೊಚೆಂದಾಗಿ ಮಾನದಿ ಮಂದಿರದಲಿ ಇರದೆಗಂಡರ ಬಿಟ್ಟು ನಿಮ್ಹಿಂದೆ ತಿರುಗಿದೆವೊಇಂದಿರೆಯು ಕಾರಣಗಳಲ್ಲವೊನಿಂಗೆ ನೀನೆ ಸ್ವರಮಣನಂಮಂಗಳಾಂಗನೆ ಮಾರಜನಕನೆರಂಗವಿಠಲನೆ ರಾಜೀವಾಕ್ಷನೆ5
--------------
ಶ್ರೀಪಾದರಾಜರು
ನೋಡಯ್ಯ ನಿನ್ನ ದಾಸರ ಮೇಲೆ ಕೃಪೆಗಳನುಮಾಡಯ್ಯ ಮನ್ಮನಕೆ ಸಂತಸವನುತೀಡಯ್ಯ ಭವಭಯದ ಪಾತಕಂಗಳ ದಾನವಾಡ ಗುಡ್ಡದ ತಿರುಮಲೇಶ ಸರ್ವೇಶ ಪ ಆದಿಯಲಿ ವೇದಗಳ ಕದ್ದುಕೊಂಡೊಯ್ದವನಸಾಧನಂಗೆಯ್ವೆನೆಂದಾಕ್ಷಣದೊಳುಪೋದನೆಲ್ಲೆನುತ ಶರನಿಧಿಯೊಳಗೆ ಪೊಕ್ಕ ಮ-ತ್ತಾ ದಿತ್ಯನಂ ಕೊಂದು ತಿಕ್ಕಿಮುಕ್ಕೆನೀ ದಯಾ ಪಾತ್ರನೆಂಬುದ ಕೇಳಿ ನಾನರಿತೆಭೂ ಧರೆಯ ಸುರರ ನೀ ಸಲುಹಲಾಗಪೋದ ನಿಗಮಂಗಳನು ತಂದು ಸಲೆ ರಕ್ಷಿಸಿದೆಆದಿ ಮತ್ಸ್ಯವತಾರ ಶರಣೆಂಬೆನು 1 ಮೂರ್ತಿ ನೀನಂದು ಬೇರೆಸುಮತವನು ಬೆನ್ನಲ್ಲಿ ಸಲೆ ಆತು ರಕ್ಷಿಸಿದೆಕಮಠಮೂರುತಿ ನಿನಗೆ ಶರಣೆಂಬೆನು 2 ಚಿನ್ನಗಣ್ಣವನೆಂಬನೊರ್ವ ಖಳ ಭೂದೇವಿಕನ್ನಿಕೆಯನೊಯ್ಯುತಿರೆ ಕನಲಿ ಮನದಿಇನ್ನು ಅವನನು ಸೆಣಸಿ ಜಯಿಸುವವರನು ಕಾಣೆನೆನ್ನುತಲಿ ರೋಮಗಳನುಬ್ಬೆತ್ತುತತನ್ನ ಮುಂಗೋರೆಗಳ ಮಸೆದೊಡನೆ ರಕ್ಕಸನಬೆನ್ನಟ್ಟಿ ಬರಸೆಳೆದು ಸದೆದೊರಗಿಸಿಚೆನ್ನಾಗಿ ಧರಣಿಯನು ತಂದು ಸಲೆ ರಕ್ಷಿಸಿದೆಹನ್ನೆರಡು ಪೆಸರವನೆ ಶರಣೆಂಬೆನು3 ಹೇಮಕಶ್ಯಪನೆಂಬ ನಾಮಜನ ಸುತನೊರ್ವನಾ ಮಹಾಘನವೆಂದು ನೆನೆಯುತಿರಲುತಾಮಸದ ಖಳ ತನ್ನ ತನುಜನನು ಮಥಿಸುತಿರೆರಾಮನನು ತೋರೆಂದು ಬಾಧಿಸುತಿರೆಧೂಮಜ್ವಾಲೆಗಳೊಡನೆ ಭುಗುಭುಗಿಲು ಛಿಟಿಲೆನುತಆ ಮಹಾ ರಕ್ಕಸನ ಪೊಡೆಯ ಸೀಳಿಪ್ರೇಮದಲಿ ಪ್ರಹ್ಲಾದಗೊಲಿದು ಪಟ್ಟವನಿತ್ತೆಸಾಮಜಾರಿಯ ವದನ ಶರಣೆಂಬೆನು 4 ಬಲಿಯಧ್ವರದ ಸಾಲೆಗೊಂದು ವೇಷವನಾಂತುಸಲೆ ಬಂದು ಧರೆಯ ಮೂರಡಿಯ ಬೇಡೆಒಲಿದು ಇತ್ತಪೆನೆನಲು ಧಾರೆಯನೆರೆಯಲಸುರಕುಲಗುರುವು ಜುಳಿಗೆಯೊಳು ತಡೆದು ನಿಲಲುಸಲಿಲ ವರ್ಜಿತ ನಯನನನು ಮಾಡಿ ಆಕಾಶನೆಲವೆರಡು ಪಾದವನ್ನಳೆದ ಬಳಿಕತಲೆ ಮೇಲೆ ಇರಿಸೆನಲು ತಳಕಿಳಿಸಿ ಅವನ ಬಾ-ಗಿಲ ಕಾಯ್ದ ವಾಮನನೆ ಶರಣೆಂಬೆನು 5 ರೇಣುಕೆಯ ಬಸುರಿನಲಿ ಜನಿಸಿ ಪಿತನಾಜ್ಞೆಯನುಮಾಣಬಾರದು ಎಂಬ ಮತವ ಪಿಡಿದುಕ್ಷೂಣವಿಲ್ಲದೆ ತಾಯ ಶಿರವರಿದು ತಂದೆಯನುಪ್ರಾಣಹತ್ಯವ ಮಾಡಿದರ ಕುಲವನುಕ್ಷೋಣಿಗೆರಗಿಸಿ ಕಾರ್ತವೀರ್ಯಾರ್ಜುನನ ಮಡುಹಿಜಾಣತನದಲ್ಲಿ ಭೂದಾನಗಳ ಭೂಸುರರಕಾಣುತಲೆ ಕರೆಕರೆದು ಕೊಟ್ಟೆಯೈ ನೀನು ಪೂಬಾಣಜನಕನೆ ರಾಮ ಶರಣೆಂಬೆನು 6 ಸೀತೆಯನು ಕದ್ದು ಒಯ್ದವನ ಕೊಲ್ಲುವ ಭರದಿಭೂತಳದ ಕಪಿಗಳನು ಕೂಡಿಕೊಂಡುಸೇತುವೆಯ ಕಟ್ಟಿ ಶರನಿಧಿ ದಾಟಿ ಬರಲಾಗಭೂತಗಣ ಸಂತತಿಯು ನಡುನಡುಗುತಿರಲುಚೇತನದ ರಾವಣೇಶ್ವರ ಕುಂಭಕರ್ಣ ಸ-ತ್ತ್ವಾತಿಶಯ ರಕ್ಕಸರ ಇರಿದೊರಗಿಸಿಮಾತು ಲಾಲಿಸಿ ವಿಭೀಷಣಗೆ ಪಟ್ಟವನಿತ್ತದಾತ ರಘುನಾಥನೇ ಶರಣೆಂಬೆನು 7 ಶಕಟ ಕುಕ್ಕುಟ ಧೇನುಕಾಸುರರ ಪೂತನಿಯಬಕ ವತ್ಸಹಕ ವೃಷಾಸುರ ಮುಖ್ಯರಪ್ರಕಟದಿಂದರಿದು ಕರಿಯನು ಸೀಳಿ ತನಗೆ ಸಂ-ಮುಖರಾದ ಮಲ್ಲರನು ಇರಿದೊರಗಿಸಿಮುಕುರ ದಂತ್ಯದ ಹಮ್ರ್ಯದೊಳಗಿಂದ ಕಂಸನಪುಕಪುಕನೆ ತಿವಿದವನನಿರಿದೊರಗಿಸಿಸಕಲವೆಸೆದಿರ್ದ ಮಧುರಾಪುರವ ಉಗ್ರಸೇನಕಗಿತ್ತ ಕೃಷ್ಣನೇ ಶರಣೆಂಬೆನು 8 ಮೂರು ಪುರದಬಲೆಯರ ವ್ರತಗಳನೆ ಕೆಡಿಸಲಿಕೆಬೇರೊಂದು ಅಶ್ವತ್ಥ ವೃಕ್ಷವಾಗಿನಾರಿಯರ ವ್ರತಭಂಗಗೆಯ್ಯಲಾ ದೆಸೆಯಿಂದಊರುತ್ರಯವದು ತಿರುಗುವುದು ನಿಲ್ಲಲಾಗನೀರ ಮಸ್ತಕದಲ್ಲಿ ಧರಿಸಿದನ ಕರವಿಲ್ಲನಾರಿಯೊಳು ನಾರಾಯಣಾಸ್ತ್ರವಾಗಿಘೋರತನವೆತ್ತ ತ್ರಿಪುರದ ಕೀಲ ಪರಿದ ಮದನಾರಿ ಸಖ ಬುದ್ಧನೇ ಶರಣೆಂಬೆನು 9 ಮದವೆತ್ತ ರಕ್ಕಸರು ಮಹಿಯೊಳಗೆ ಹೆಚ್ಚಲುತ್ರಿದಶಾಂತ ನಡನಡನೆ ನಡುಗುತಿರಲುಬೆದರಬೇಡೆನುತ ಅಭಯವನಿತ್ತು ಮುದದಿಂದಸುಧೆಯೊಳಗೆ ಬಂದು ಜನಿಸಿಕುದುರೆವಾಹನನಾಗಿ ಕುಂಭಿನಿಯ ಮೇಲೆ ತನಗಿದಿರಾದ ರಾವುತರನಿರಿದೊರಗಿಸಿಮೊದಲ ಭಾಷೆಯನು ದಿವಜರಿಗಿತ್ತೆ ಬೇಗದಲಿಚದುರ ಕಲ್ಕ್ಯವತಾರ ಶರಣೆಂಬೆನು10 ಇಂತು ದಶ ಅವತಾರಗಳನೆತ್ತಿ ರಕ್ಕಸರಸಂತತಿಯನೊರಸಿ ಭೂಭಾರವಿಳುಹಿಕಂತುಪಿತ ತಿರುವೆಂಗಳೇಶ ತಿರುಮಲೆಯೊಳಗೆಚಿಂತಿಸುವ ಭಕ್ತರನು ಪಾಲಿಸುತಲಿದಂತಿರಾಜನ ಪೊರೆದು ದಾನವಾಡಿಗೆ ಬಂದುನಿಂತಾದಿಕೇಶವನೆ ಶರಣೆಂಬೆನು 11
--------------
ಕನಕದಾಸ
ಮಾರುತ ಒಲಿದವಗೆ ಮಾರಮಣನು ಒಲಿವಾ ಪ ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ. ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ1 ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ2 ದಾತ ದಾತ 3
--------------
ಮೋಹನದಾಸರು
ರಾಮಾ ನಿನ್ನಯ ದಿವ್ಯ ನಾಮಾ ನೆನೆವೆನು ರಾಮಾ ನಿನ್ನಯ ದಿವ್ಯ ನಾಮಾ ಪ್ರೇಮವ ಕೊಟ್ಟನ್ನಾ ನೇಮದೊಳಿರಿಸೊ ನೀ ಕರುಣದಿ ಪ ಚಿತ್ತ ಶುದ್ಧವ ಮಾಡಿ ಮತ್ತೆ ನಿನ್ನಯ ಪಾದ ನಿತ್ಯದಿ ನೆನೆವಂತೆ ಭಕ್ತಿಯೊಳಿರಿಸೊ ನೀ ಎನ್ನನು 1 ದಶರಥನುದರದಿ ಶಿಶುವಾಗಿ ಜನಿಸಿದೆ ಹೊಸ ಆಭರಣವಿಟ್ಟು ಕುಶಲಮಾತೆಯನು ನೋಡುವ 2 ಛಂದದಿಂದಲಿ ಆನಂದದೊಳಿಹ ರಾಮಾ ಚಂದ್ರನ ಮೊಗ ಅತಿ ಸುಂದರವಾಗಿರುವವನೇ 3 ಬಿಲ್ಲ ಬಾಣವಪಿಡಿದು ಎಲ್ಲಾ ದೈತ್ಯರ ಕೊಂದು ಅಲ್ಲೇ ಕೌಶಿಕಯಾಗ ಎಲ್ಲ ಸಲಹಿದೆ ಧೀರನೇ 4 ವಿಥುಳಾಪುರದಿ ಬಂದು ಅತುಳ ಧನುವ ಮುರಿದು ಸತಿ ಸೀತಾ ಸಹಗೂಡಿ ಪಿತನಾ ಪಟ್ಟಣವನು ಸೇರಿದೆ 5 ಮಾತೆಯ ವರ ಕೇಳಿ ನೀತಿಯಿಂದಲಿ ಅನು ಜಾತನ ಒಡಗೂಡಿ ಖ್ಯಾತಿಯಿಂದಲಿ ಪೋದಂತಹ 6 ಸರಯು ತೀರದಿ ಬಂದು ಪುರದ ಜನರ ಬಿಟ್ಟು ಭರದಿ ನಾವೆಯನೇರಿ ತ್ವರಿತದಿಂ ದಾಟಿ ನೀ ಪೋದೆ 7 ಭಕ್ತಿಯಿಂದಲಿ ಆ ಸಕ್ತ ಭರತನ ಕಂಡು ಯುಕ್ತಿಯಿಂದಲಿ ತೇಜೋಯುಕ್ತಪಾದುಕವನು ಕೊಟ್ಟೆನೀ 8 ಪುಸಿಯತಿಯಾಗಿ ಶೀತೆಯ ಅಸುರ ಕೊಂಡೊಯ್ದನೆಂದು ವ್ಯಸನದಿಂದಲಿ ಪೋಗಿ ಪಕ್ಷಿಯುದ್ಧರಿಸಿದೆ ಘಮ್ಮನೆ 9 ಶಾಂತಮೂರುತಿ ಹನುಮಂತರೆಲ್ಲರು ಕೂಡಿ ಅಂತರದಲಿ ಸೇತು ನಿಂತು ನೋಡುವೆ ನೀ ಛಂದದಿ 10 ಶರಣ ಬಂದ್ವಿಭೀಷಣನ ಕರುಣದಿಂದಲಿ ಕಾಯ್ದೆ ಸ್ಥಿರದಾಪಟ್ಟವಗಟ್ಟಿ ಹರುಷದೋಳ್ ನಿಲಿಸಿದೆ ಅವನನು 11 ವಾನರರೊಡಗೊಂಡು ಸೇನೆ ಸಹಿತಲೇ ದಶಾ ನನ ರಾವಣನಕೊಂದು ಮಾನಿನೀ ಸಹಿತನೀ ಬಂದಿಹೆ 12 ಪುಷ್ಪಕವನೆ ಏರಿ ಅಕಸ್ಮಾತದಲಿ ಬಂದು ಆಕ್ಷಣದಲಿ ಭರತ ರಕ್ಷಣ ಮಾಡಿದ ದೇವನೇ 13 ಪಟ್ಟಣದಲಿ ಮಾಹಾ ಪಟ್ಟವನೇರಿಸಿ ಶಿಷ್ಟ ಅಯೋಧ್ಯೆಯ ಪಟ್ಟಣವಾಳಿದೆ ರಾಮನೆ 14 ಬ್ರಹ್ಮಮೂರುತಿ ರಾಮಾಗಮನ ಚರಣದಿ ಸುಮ್ಮಾನದಲಿ ಶಾಂತಿ ತನ್ಮಯಗೊಳಿಸಾನಂದದಿ 15
--------------
ಶಾಂತಿಬಾಯಿ
ಲಲಾಟದಲ್ಲಿ ಇಡುವನೋ ಕಾವನು ಅವನನು ನಮ್ಮ ಪವಮಾನನೊಡೆಯನು ವಾಮ ಉದರದಲ್ಲಿ ಯಾವಾನಲೂ ಇಟ್ಟು ಮೆರೆಯುವನೋ ಅವನ ಗೊವತ್ಸ ನ್ಯಾಯದಿ ಕರವನು ಪಿಡಿವನು ಗಧಾಧರನು ಹಾವನ್ನೆ ಹಾಸಿಗೆ ಮಾಡಿಕೊಂಡ ಶ್ರೀಧರನ ಸ್ಥಾನದ ಕೆಳೆಗೆ ಪವಮಾನಿಗುವ ಮತಾ ಎರಡು ಗಧಾಯುಧ ಧರಿಸಲು ಪಾವನನಂತಾದವನು ಅವರ ದುರಿತಕಾನನಕೆ ಸಾವು ಹುಟ್ಟಿಲ್ಲದ ಪರಮಪುರುಷನ ಈ ಆಯುಧವ ಅವನು ವಾಮಸ್ತನದಿ ತಾನೊಮ್ಮೆ ಇಕ್ಕುವನೋ ಸಾನು ಹುಟ್ಟುಗಳಿಂದ ದೂರಗೈಸುವ ಗುರು ಕಾಳೀಮರ್ಧನಕೃಷ್ಣ 4 ಪದ್ಮ ಮುದ್ರೆಯನ್ನು ಭಕುತಿ ಪೂರ್ವಕವಾಗಿ ಹೃತ್ ಪದ್ಮದಿ ಬಂದು ಧರಿಸಲುಬೇಕು ದಕ್ಷ ಭುಜದ ಕೆಳೆಗೆ ಪದ್ಮಂಗಳೆರಡನ್ನು ದಕ್ಷ ಉದರಕೆಳೆಗೆ ಪದ್ಮವೆ ಒಂದನ್ನು ವಕ್ಷಸ್ಥಾನದಿ ಒಂದು ಪದ್ಮವ ಧರಿಸಲು ಭಕ್ತವತ್ಸಲನಾದ ಪದ್ಮ ರಮಣಗುರು ಕಾಳಿಮರ್ಧನಕೃಷ್ಣ ಪೊಳೆವಾ 5
--------------
ಕಳಸದ ಸುಂದರಮ್ಮ
ಶೇಷ ಗಿರಿಯ ವಾಸಈಶ ಜಗತ್ರಯ ಪೋಷಕ ಸರ್ವೇಶ ಭಾಸುರ ಕೀರ್ತಿ ಶೇಷ ಎನ್ನ ನೀ ಪೋಷಿಸುವುದು ಈಶ ಪ ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ ಪಕ್ಷಿವಾಹನ ಪರಮಪರುಷ ಅಕ್ಷಯ ಫಲದಾಯಕನಾ ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು ರಕ್ಷಿಸೊ ಸಂಪನ್ನ 1 ವೇಣುನಾದ ವಿನೋದನಾದ ಸುಗಾನಲೋಲ ಹರಿಯೆ ದಾನವಾಂತಕ ದಜನುರಕ್ಷಕ ಸುಜ್ಞಾನಿಗಳ ಧೊರಿಯೆ ಮಾನವಾಧಿ ಪ ಮದನವಿಲಾಸ ಮಾಧವ ಮುಕುಂದಾ ನೀನೆ ದಯಮಾಡಿ ಸಲಹೊ ಆನಂದಾ ನಿಜನಿತ್ಯ ಗೋವಿಂದಾ 2 ವಾರಿಧಿ ಬಂಧಿಸಿ ದೈತ್ಯರ ಬಲವನೆಲ್ಲ ಮುರಿದಾ ಬಲವಂತಾ ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ ಸುಲಭದಿ ಅವನನುಜಗೆ ಪಟ್ಟವನಿತ್ತು ಸತಿಯನೆ ತಂದಾ ಜಲಧಿಶಯನ ಅಹೋಬಲ 'ಹೊನ್ನವಿಠ್ಠಲ’ ಚಲುವ ಸದಾನಂದಾ 3
--------------
ಹೆನ್ನೆರಂಗದಾಸರು
ಸೇರದಾದವು ಅಶನವಸನಗಳಾರೊಡನೆ ನಾ ಪೇಳಲಿ ಪ ಸಾರಸಾಕ್ಷ ಮುರಾರಿ ಕೃಷ್ಣನ ಮೂರುತಿಯ ನಾ ಕಾಣದೆ ಅ.ಪ ಹಿಂದೆ ವನದಲಿ ಸುಂದರಾಂಗ ಮುಕುಂದ ಕೃಷ್ಣನ ಪರಿಪರಿ ಅಂದ ಲೀಲೆಗಳಿಂದ ಪೊಂದಿದ ನಂದಗಳ ನೆನೆ ನೆನೆದರೆ 1 ಮಾರಜನಕನು ಜಾರನೆಂಬ ವಿಚಾರವನು ನಾನರಿಯದೆ ಸೇರಿದೆನು ಮನಸಾರ ಮುದದಲಿ ಯಾರಿಗಳವೇ ಮರೆಯಲು 2 ಮೋಸಗಾರನ ಆ ಸೊಬಗುಗಳಿಗಾಸೆ ಪೊಂದಿದ ಪಸುಳೆಯ ಆಸೆಭಂಗದ ಕ್ಲೇಶವನು ಜಗದೀಶನೊಬ್ಬನೆ ಬಲ್ಲನು3 ತರುಲತೆಗಳು ಹರಿವ ಯಮುನಾ ಸರಿದೇನಾದರೂ ಬಲ್ಲವೆ ಸರಸದಲಿ ತಿರುತಿರುಗುತಿಹ ಮುರಹರನ ಸುದ್ಧಿಯ ಕೇಳಲೆ4 ಘನ್ನ ಮಹಿಮೆ ಪ್ರಸನ್ನ ಕೃಷ್ಣನು ತನ್ನ ಸಂತಸದಿಂದಲಿ ಎನ್ನ ಕರಗಳಿಗೊಮ್ಮೆ ಸಿಕ್ಕಲು ಇನ್ನು ಅವನನು ಬಿಡುವೆನೆ 5
--------------
ವಿದ್ಯಾಪ್ರಸನ್ನತೀರ್ಥರು
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು
ಜಯಮಂಗಳಂನಿತ್ಯಶುಭಮಂಗಳಂಪ.ದುರುಳತಮ ವೇದವನು ಕದ್ದು ವಾತಾಳದಲಿಇರಲವನ ಕೊಂದು ವೇದಾವಳಿಗಳಸರಸಿಜೋದ್ಭವಗಿತ್ತು ಸುರಮುನಿಗಳನ್ನೆಲ್ಲಪೊರೆದ ಶ್ರೀ ವತ್ಸಾವತಾರಿ ಹರಿಗೆ 1ಸುರರು ದೈತ್ಯರಕೂಡಿ ಸಿಂಧುವನು ಮಧಿಸುತಿರೆಗಿರಿಮುಳಗಿ ಪಾತಳಕಿಳಿದು ಪೋಗೆಭರದಿಂದ ತಾ ಬಂದು ಗಿರಿಯ ಬೆನ್ನಳಗಾಂತುಸುರರ ಸಂರಕ್ಷಿಸಿದ ಶ್ರೀಕೂರ್ಮಹರಿಗೆ2ಭೂಮಿಯನು ಹಿರಣ್ಯಕ್ಷನೆಂಬ ದೈತ್ಯನು ಸುತ್ತಿಭೀಮ ವಿಕ್ರಮನು ಪಾತಾಳಕೊಯ್ಯುತಾಮರಸ ಸಂಭವನು ಬಿನ್ನೈಸಲವನಳಿದುಭೂಮಿಯನು ತಂದು ಶ್ರೀ ಭೂ ವರಾಹನಿಗೆ 3ಪರಮಭಾಗವತ ಪ್ರಲ್ಹಾದನ ಹಿರಣ್ಯಕನುಪರಿಪರಿಯ ಭಾದೆಯಿಂದಲಿ ಪೀಡಿಸಿಕರುಣಾಳು ಕೋಪದಲಿ ದೈತ್ಯನುದರವ ಬಗೆದಶರಣ ರಕ್ಷಕನಾದ ಶ್ರೀ ನರಸಿಂಹಗೆ 4ಬಲಿಚಕ್ರವರ್ತಿ ಭೂಮಿಯ ಧಾರೆಯರೆಯಲುಇಳೆಯನಳೆದವನ ಸುತಳಕೆ ಕಳುಹಿಸಿದಸಿಲುಕಿಭಕುತಿಗೆ ಮೆಚ್ಚಿ ಬಾಗಿಲವಕಾಯ್ದ ಶ್ರೀಬಲವಂಥಹರಿವಾಮಾನಾವತಾರನಿಗೆ5ಕಾರ್ತವೀರ್ಯಾರ್ಜುನನ ಸಂಹರಿಸಿ ಮುದದಿಂದಕೀರ್ತಿಯನು ಲೋಕದೊಳು ವಿಸ್ತರಿಸಿದಪ್ರಾರ್ಥಿವಾಂತಕ ಬಾಹುಬಲದಿ ಪರಿಪೂರ್ಣಗೆಆರ್ತಬಾಂಧವಗೆಭಾರ್ಗವರಾಮಗೆ6ದಶರಥನ ಮನೆಯುದ್ಭವಿಸಿ ಆ ರಾವಣನದಶಶಿರವ ನೀಡಾಡಿ ಅವನನುಜಗೆವಸುಧಾಧಿಪತ್ಯವನು ಲಂಕೆಯೊಳಗವಗಿತ್ತಅಸಮವಿಕ್ರಮ ರಾಮಚಂದ್ರ ಹರಿಗೆ 7ಯದುಕುಲದಿ ತಾ ಬಂದು ಕೊಂದು ಕಂಸನನಂದುಮುದದಿಂದ ಪಾಂಡವರನುದ್ಧರಿಸಿದಒದೆಗೆ ಕೌರವ ಬಲವ ಸಂಹರಿಸಿ ಪದವಿತ್ತುಮುದದಿ ಮನ್ನಿಸಿದ ಶ್ರೀ ಕೃಷ್ಣ ಹರಿಗೆ 8ತ್ರಿಪುರದ ಮುರಾರಿಗಳ ಸತಿಯರ ಪತಿವ್ರತವಅಪಹರಿಸಿ ದಿವ್ಯ ಮೋಹಕರೂಪದಿತ್ರಿಪುರಹರಗಂಬಾಗಿ ಶಿವಗೆ ಕೀರ್ತಿಯನಿತ್ತಅಪರಮಿತ ಬುದ್ಧಾವತಾರ ಹರಿಗೆ 9ಕರಿಯುಗದ ಕಡಯಲಿ ಖಲನೃಪರನೆಲ್ಲರನುತುಳಸಿ ಕುದುರೆಯ ಖುರದ ಪುಟಗಳಿಂದಸುಲಭದಿಂ ನಡೆಸುತೀ ಕೃತಯುಗದ ಧರ್ಮವನುಒಲಿದಂಥ ಕಲ್ಕಿಯವತಾರ ಹರಿಗೆ 10ಮಂಗಳ ಪದಂಗಳನು ಭಕ್ತಿಯಲಿ ಮೋಹನತರಾಂಗನೆಯರೆಲ್ಲ ರಾಗದಿ ಪಾಡುತಮಂಗಳಾತ್ಮಕಗೆಸಿರಿ ಪುರಂದರವಿಠಲಗೆಅಂಗನೆಯರೆಲ್ಲ ಆರತಿಯೆತ್ತಿರೆ 11
--------------
ಪುರಂದರದಾಸರು