ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆನೆಮನವೇ ನಾರಾಯಣ ನಾಮವ ಅನುದಿನ ಧ್ಯಾನಿಸು ಗುರಮುಖದಂತೆ ಪ ಅನುಸಂಧಿಸುತಲಿ ಅವನಡಿ ಪಿಡಿಯುತ ಕನಿಕರದಿಂ ಕಾಯುವ ಕೈ ಹಿಡಿದು ಅ.ಪ ಅಡಿಗಡಿಗೊಂದೊಂದು ಯೋಚನೆ ಗೈವೆವೇ ಎಡಹಿ ಮುಗ್ಗುರಿಸುವೆ ಸುಡುಗಾಡೊಳಗೆ ಕಡಿದೋಡಿಸುತಲಿ ಪಾಪದ ಪಡೆಯಂ ಕಡೆಹಾಯಿಸುವನು ಕಷ್ಟದ ಕಡಲಿಂ 1 ತಮವೇ ತಾನು ಎಂಬ ಮೋಹದಿ ಕನವರಿಸುತ ಬಹು ಸಾಹಸ ತೋರ್ವೈ ಮನದೊಡೆ ಜೀವನು ಶರೀರವನು ಬಿಡೆ ಅನುಮತಿಸುತ್ತಲದ ಸುಟ್ಟು ಬಿಡುವರು 2 ತೃಷೆ ಜ್ವರ ರೋಗಗಳೊಳು ತಣಿವಂ ಕಾಣದೆ ತೊಳಲುತ್ತಿರುವೈ ಘನತರದಾಯುವು ಗತಿಸದ ಮೊದಲೆ ರಿನಕರನೊಳಗಿಹ ಶ್ರೀಶನ ನೋಡೈ 3 ಅನುಮಾನನ್ಯ ಆಶ್ರಯ ಬಿಡುಬಿಡು ತನುಮನ ತೊರೆಯನು ಆಪದ್ಭಂದು ಕೊನೆಗಳಿಗೆಯೊಳು ಕಡೆ ನುಡಿನುಡಿದು ಸನುಮತದಿಂ ಸಿರಿಯರಸನ ಪದವುಗು 4 ಸುಣ್ಣವ ತಿಂದ ತಿಮ್ಮಣನ ತೆರದಿ ನಿನ್ನ ಸ್ಥಿತಿಯ ಅನ್ಯಾಯವು ಸಹಜ ಕರ್ಮ ಬೆನ್ನನು ಬಿಡದಿದೆ ಇನ್ನು ಹೆಜ್ಜಾಜಿ ಶ್ರೀಶನ ಮರೆಹೊಗು 5
--------------
ಶಾಮಶರ್ಮರು