ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತವೋ ಮಧುರಾ ನಗರಕೆ ಪ ಗಾನಲೋಲ ಹರಿ ತಾ ನೆಲೆಸಿಹುದು ಅ.ಪ ವರ ವಿಭವಗಳುಳ್ಳ ಪುರಗಳಂತಿರಲು ಪರಮ ಪುರುಷ ಹರಿ ವಿರಾಜಿಸುತಿರಲು 1 ಭೂಪ ನಗರಗಳಿಗೀ ಪರಿಯುಂಟೆ ಗೋಪಾಲಕ ಹರಿ ಕಾಪಾಡುತಿಹುದು 2 ಸುಮನಸಪುರವಾದ ಅಮರಾವತಿಗುಂಟೆ ಕಮಲನಯನ ಹರಿ ಸಮಾಗಮವು ಸದಾ 3 ದಿವಿಜರೊಡೆಯ ಹರಿ ಭುವಿಯಲಿ ಅರಿಸಿ ಅವತರಿಸುತ ತನ್ನ ಪ್ರವಾಸಗೈದುದು 4 ನಿರುಪಮ ಆನಂದಪೂರ್ಣ ಪ್ರಸನ್ನನು ಪರಿಪರಿ ವಿಧದಲಿ ವಿರಾಜಿಸುತಿರಲು 5
--------------
ವಿದ್ಯಾಪ್ರಸನ್ನತೀರ್ಥರು
ಮಹಿಷಿ ಎನಿಸಿಹಳೇ ಪ ವಸುದೇವ ಭಗಿನಿ ಕೈಕೆಯೀ ಉದರದಲಿಅಸುವ ನೀಧರಿಸುತ್ತ ಅವತರಿಸುತಾ |ವಸುಧೆಯೊಳು ಸುಗುಣ ಗಣಯುತೆಯು ನೀನಾಗಿಪೆಸರಾಂತೆ `ಭದ್ರೆ` ಎಂದೆನುತ ಅವನಿಯಲೀ 1 ಪಿತನು ನಳನೆಂಬನಿಗೆ ಪ್ರೀತಿಯಲಿ ನೀ ಪೇಳ್ದೆಹಿತವು ಶ್ರೀ ಹರಿಗೆಂದು ನುತಿಸುವ ಸುಕರ್ಮ |ಅತಿಶಯದೆ ಪೂಜೆಯಿಂದಧಿಕದಲಿ ಶ್ರೀ ಹರಿಯುನುತಿಗೆ ಪ್ರೀತಿಸುವನೆಂದೊರೆದೆ ಭಕುತಿಯಲೀ2 ಹರಿನಾಮ ಸ್ಮರಿಸುತ್ತ ಹರಿ ಚರಣ ನಮಿಸುವರದುರಿತರಾಶಿಗಳಿರದೆ ಪರಿಹಾರವೆನುತಾ |ಒರೆಯುತೀಪರಿ ನಮನ ಭಕ್ತಿಗೇ ಪ್ರಾಶಸ್ತ್ಯಪರಿಪರಿಯ ಪೇಳಿಹಳೆ ನಮಿಪೆ ನಿನ್ನಡಿಗೇ3 ಈ ಪರಿಯ ತಪಗೈದು ದ್ವಾಪರದ ಯುಗದಲ್ಲಿಶ್ರೀ ಪತಿಯ ದರ್ಶನದಿ ತಾಪತ್ರಯ ಕಳೆದೂ |ಆ ಪರಮ ಪುರುಷನ್ನ ಕೈ ಪಿಡಿದ ಮಹ ಭದ್ರೆಕಾಪುರುಷನಾದೆನ್ನ ಪಾಪ ಪರಿಹರಿಸೇ 4 ಭದ್ರಾಣಿ ಪತಿಗಿನ್ನು ಕಾದ್ರವೇಯನು ಮತ್ತೆಆದ್ರಿ ಮಂದಿರ ತಂದ ಅವಿಕಾರಿ ವಿಪಗೇ |ಸಿದ್ಧೈದು ಗುಣದಿಂದ ಹೀನಳೆಂದೆನಿಸುತ್ತಭದ್ರ ಗುರು ಗೋವಿಂದ ವಿಠಲ ಪ್ರಿಯೆ ಪಾಹೀ 5
--------------
ಗುರುಗೋವಿಂದವಿಠಲರು
ಸಲಹೊ ಸಂತತ ಸಂತಿಕೆಲವೂರ ನಿಲಯ ಸಲೆ ನಂಬಿದೆನು ನಿನ್ನ ಜಲಜಾಂಘ್ರಿ ಪಿಡಿಕೈಯ್ಯ ಪ ಸೂನು ವೃಕೋದರ ಮೋದ ಮೌನಿ ನಾಮತ್ರಯದಿ ಅವತರಿಸುತಾ ದಾನವರ ಗರ್ವಾಖ್ಯ ಕಾನನಕೆ ಶಿಖಿ ಎನಿಸಿ ಪತಿ ಕೃಷ್ಣ ವ್ಯಾಸರನುಗ್ರಹಪಾತ್ರ 1 ವರದೇಶ ವಿಠಲನ ಚರಣ ಸೇವಕನಿಗೆ ಸ್ಥಿರವಾದ ವೃರಾಗ್ಯ ಜ್ಞಾನ ಭಕುತಿ ಗರೆದು ಪೊರೆಯುವದಕ್ಕೆ ಪುರದ ಹಿಂಭಾಗದಲಿ ಇರುವ ಕಾರಣ ನಿನ್ನ ಮೊರೆ ಹೊಕ್ಕೆ ಮರೆಯದಲೆ 2 ಇಂದು ಬೆಂದು ಪೋದವು ಎನ್ನ ಪಾಪವೆಲ್ಲ ಸಿಂಧುಜಾವರ ಶಾಮಸುಂದರನ ದಾಸರೊಳು ಪೊಂದಿಸೆಂದಡಿಗಡಿಗೆ ವಂದಿಸುವೆ ತ್ವತ್ವದಕೆ 3
--------------
ಶಾಮಸುಂದರ ವಿಠಲ