ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾನವ ಸಿಂಗನ ಪಾಡಿರೈ ಪ ಇಂಗಡಲಜೆಪತಿ | ಮಂಗಳ ಚರಿತ ಭು ಜಂಗಶಾಯಿ ಶುಭಾಂಗ ಅ.ಪ ಲಾಲಿಸಿ ದೇವ | ಮಹಾನುಭಾವ | ಅವತರಿಸಿದನು ಅಸುರಾಂತಕ | ಪ್ರೇಮದಲಿ ಗೋಕುಲದಲ್ಲಿ | ವಿಧಿ ಕುಲ ಜಾತ 1 ತಂದೆ ತಾಯ್ಗಳ ಬಂಧನ ಬಿಡಿಸಿದ ಧೀರ | ಭಕ್ತಮಂದಾರ | ಒಂದೆ ಬೆರಳಲಿ ಗೋವರ್ಧನ ಶೈಲವನು | ತಾ ಧರಿಸಿದನು ಮದವನು ಮುರಿದ | ಮೋದವಗರೆವ ಕರವ | ಕರುಣದಿ ಪಿಡಿವ 2 ಶ್ವೇತ ವಾಹನ ಸೂತ ಕಾಮಜನಕ ಸತ್ಯಭಾಮೆ ರಮಣ ಗೋಪಾಲ | ಸ್ವಾಮಿ ಕುಲಾಲ ಭೀಮಗೊಲಿದ ನಿಸ್ಸೀಮ ಮಹಿಮಾ ಶ್ರೀ ಗೌರಿ | ಮಾತುಳವೈರಿ ಹೇಮಾಂಬರಧರ ಶಾಮಸುಂದರ ವಿಠಲ | ಧೃತವನಮಾಲ3
--------------
ಶಾಮಸುಂದರ ವಿಠಲ
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು