ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಲಹರಿ (ಪಾರಮಾರ್ಥ ಮುಯ್ಯದ ಹಾಡು ) ಗಿರಿಜೇಶ ಮನೋಜಾತಾ ಸುರಮುನಿಜನಪ್ರೀತಾ ಕರುಣಾ ಸಾಗರ ಗಣನಾಥಾ ಜಗವದನಾ ಚರಣಕೆ ಶರಣೆಂದು ಬಲಗೊಂಬೆ ಕೋಲೆ 1 ಸಕಲಾ ಮುಖದೊಳು ಯುಕುತಿಯ ನುಡಿಗಳಾ ಪ್ರಕಟದಿ ನುಡಿಸುವೆ ಜನನಿ ಸರಸ್ವತಿ ಭಕುತಿಲಿ ಶರಣೆಂಬೆ ಕಲ್ಯಾಣಿ 2 ಆಚ್ಯುತಾನಂತನೆ ಸಚ್ಚಿದಾನಂದನೆ ನೆಚ್ಚಿದ ಶರಣರ ಸುರಧೇನುವೆ ಅವಧೂತಾ ಎಚ್ಚರ ಕೊಟ್ಟು ಸಲಹಯ್ಯ 3 ಕರಿಯಾ ಮೊರೆಯ ಕೇಳಿ ಭರದಿಂದೊದಗಿ ಬಂದು ಕರದಿಂದಲೆತ್ತಿ ಸಲಹಿದೆ ಶ್ರೀಶಾ ಚರಣವದೋರಿ ಕಾಯಯ್ಯ 4 ಶರೀರ ಒಂದರಲಿದ್ದು ನರನಾರೀರೂಪದಲಿ ಚರಿತವ ದೋರದೆ ಅನುಪಮ ಶಂಕರ ಕರುಣಿಸು ಫಣಿಗಣ ಭೂಷಣಾ 5 ಅಂಜನೀಸುತನಾಗಿ ಕಂಜನಾಭವ ಸೇವೆ ರಂಜಿಸುವಂತೆ ಮಾಡಿದ ದೈತ್ಯರ ಭಂಜನ ಹನುಮಂತ ಕರುಣಿಸು6 ಚಾರು ಚರಿತಗಳ ತೋರಿದೆ ಜಗದೊಳು ಮುನಿರಾಯಾ ಸುಖತೀರ್ಥ ತಾರಕ ಶರಣರ ನಿಜಗುರು7 ಮೇದನಿಯೊಳಗುಳ್ಳ ಸಾಧು ಸಂತರ ನಿಜ ಅನುದಿನ ಜಗದೊಳು ಸಾದರದಿಂದ ನೆನೆಯುತ 8 ಶರಣವ ಹೊಕ್ಕರ ಕರುಣದಿಂದಲಿ ನೋಡಿ ತರುಣೋಪಾಯವ ತೋರುವಾ ಮಹಿಪತಿ ಗುರುರಾಯ ನಿನ್ನ ಬಲಗೊಂಬೆ9 ಕರುಣವಾಗಲು ಅವರ ಪರಮ ಮೂಕನಜ್ಜಿಹ್ವಾ ಸುರಸ ಮಾತುಗಳ ಆಡೋದು ಹುಸಿಯಲ್ಲ ಧರೆಯೊಳು ಅನುಭವವಿದು10 ಅವರಾಮಹಿಮೆಗಳ ವಿವರಿಸಿ ಹೇಳಲು ಹವಣವೆಲ್ಲಿಹುದು ಮನುಜಗ ಭಕುತರು ಅವನಿಲಿಬಲ್ಲರು ನಿಜಸುಖ 11 ಏನೆದು ಅರಿಯದಾ ಹೀನ ಅಜ್ಞಾನಿಯು ನ್ಯೂನಾರಿಸದೇ ಸಲಹಯ್ಯಾ ಮಹಿಪತಿ ದೀನೋದ್ಧಾರಕಾ ಕರುಣಿಸು 12 ಪದುಮನಾಭನ ಭಕ್ತಿ ಚದುರಾ ಮುತ್ತೈದೇರು ಒದಗಿನ್ನು ಬನ್ನಿ ಹರುಷದಿ ಮುಪ್ಪದಾ ಉದಿತಾ ನುಡಿಗಳ ಕೇಳಲು 13 ವಿವೇಕಬೋಧಿಯಂತ ನಾವಕ್ಕತಂಗೇರು ದೇವಗುರುರಾಯನ ಮಕ್ಕಳು ನಿಜಶಕ್ತಿ ಭುವನದಿ ನಮ್ಮಾ ಹಡೆದಳು 14 ಸುಜ್ಞಾನ ವೈರಾಗ್ಯ ಸಂಜ್ಞದಿ ಮೆರೆವರು ಪ್ರಾಜ್ಞರು ನಮ್ಮಣ್ಣಾ ತಮ್ಮರು ಹರಿಭಕ್ತಿ ಮಜ್ಞರು ಅವರಿಗೆ ಸರಿ ಇಲ್ಲಾ 15 ಭಕ್ತಿಯ ತೌರಮನಿ ಶಕ್ತಿಯ ಬಲದಿಂದ ಯುಕ್ತೀಲಿ ನಾವು ಬರುತೇವು ಹರಿಭಕ್ತಿ ಭೋಕ್ತರು ನೀವು ಬರಬೇಕು 16 ದಿವ್ಯಾಂಬರವನುಟ್ಟು ಸುವಿದ್ಯಾ ಇಡಗಿಯು ತೀವಿದರ ಅರಹು ಅಂಜನಾ ವನೆ ಇಟ್ಟು ಸುವಾಸನೆಯ ಪುಷ್ಪ ಮುಡಿದಿನ್ನು 17 ಈರೆರಡು ಭೇರಿಯ ಸಾರಿಸಿ ಎಡಬಲಕ ಆರು ವಂದಣಾ ನಡಸೂತ ಕಹಳೆಗಳು ಮೂರಾರು ಊದಿಸುತೆ ಬರುತೇವು 18 ಸಾಧನ ನಾಲ್ಕರ ಕುದುರೆಯ ಕುಣಿಸುತ ಒದಗಿದ ಪ್ರೇಮದ ಮದ್ದಾನಿ ಯೊಡಗೂಡಿ ಚದುರೇರು ಮುಯ್ಯ ತರುತೇವು 19 ಭಾವದ ಬಯಲಾಟ ಆವಾಗ ಆಡುತ ಸಾವಧ ಮುಯ್ಯಾ ತರುತೇವು ನುಡಿಗಳ ನೀವಾತ ಕೇಳಿ ಜನವೆಲ್ಲಾ 20 ಮೆರೆವಾಭಿಮಾನಿಯು ಇರುವ ಸೋದರ ಮಾವ ಅರಸಿ ವಿಷಯಯೆಂಬತ್ತೆರಯರ ಮನಿಗೀಗ ಭರದಿಂದ ಮುಯ್ಯ ತರುತೇವು 21 ರಾಯ ಅಭಿಮಾನಿ ಸಿರಿಯದ ಸಡಗರ ನಾ ಏನ ಹೇಳಲಿ ಜಗದೊಳು ಪಸರಿಸಿ ತಾ ಎಡ ಬಲವನು ನೋಡನು 22 ಏಳು ಸುತ್ತಿನ ಗೋಡಿ ಮೇಲಾದ ಮನಿಗಿನ್ನು ಸಾಲಾದ ಒಂಭತ್ತು ಬಾಗಿಲು ಚಲುವಾದ ಮ್ಯಾಲಿಹ ಒಂದೊಂದು ಗಿಳಿಗಳು 23 ಅಂಗಳ ಹೋಗಲಿಕ್ಕೆ ಕಂಗಳ ಲೇಸಕಂಡೆ ಮಂಗಳವಾದ ಉಪ್ಪರಿಗೆ ಥರಥರ ರಂಗ ಮಂಟಪ ನಡುವಂದು24 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಚಾವಡಿರಾಯನ ಸೌಖ್ಯಕ ಪೊಡವಿಲಿ ಸರಿಯಾ ಕಾಣೆನು 25 ಎಂಟು ದಿಕ್ಕಿಗೆ ನೋಡೀ ಘಂಡೆಯ ಕಟ್ಟಿದ ಎಂಟು ಆನೆಯಾ ಘಡಘಾಡಿ ತಲಿಯಲಿ ಉಂಟಾದ ಗುರುತರದ ಅಂಕೂಶಾ 26 ಬಿಡದೆಂಟು ಕಂಬದಿ ಸಡಗರ ರಚಿಸಿದ ಒಡನಿಹ ಆನೆಯಾ ಘಡಘೂಢೀ ಥಳೀಐಳೀ ಊಂಠಾಧ ಘೂಋಊಥೃಧ ಆಂಖೂಶಾ 26 ಐದೈದು ಸಾಲಕ ಐದೈದು ಕುದುರೆಯು ಐದೈದು ಭಂಟರು ಅದಕಿನ್ನು ಅನುದಿನ ಮೈದಡುವುತಾ ಏರುವರು27 ಹತ್ತು ಮಂದಿಯಾ ಆಪ್ತರು ಮನರಾಯಾ ಒತ್ತಿ ಆಳುವ ಪ್ರಧಾನಿ 28 ಅನುವಾದ ಗುಣತ್ರಯಾ ಅನುಜರು ಈತಗೆ ಅನುಭವಿ ಒಬ್ಬ ಇದರೊಳು ಹರಿನಾಮಾ ನೆನೆವನು ಅನ್ಯ ಹಂಬಲವಿಲ್ಲಾ 29 ನಾಕಾವಸ್ಥೆಗಳೆಂಬಾ ನಾಕು ಒಳ ಮನೆಗಳು ಇಕ್ಕಿಹದೊಂದು ಅದರೊಳು ಭಂಡಾರ ಬೇಕಾದವರೆ ತೆರೆವರು 30 ಈರಾಯ ನೈಶ್ವರ್ಯ ಆರು ಬಣ್ಣಿಸುವರು ಆರೊಂದು ಮಂದಿ ಮಕ್ಕಳು ಹೆಸರಾದ ಪರಿಯಾಯ ಕೇಳಿ ಹೇಳುವೆ 31 ಮೊದಲು ಕಾಮ ಕ್ರೋಧವೊದಗಿ ಲೋಭಮೋಹ ಮದಮತ್ಸರೆಂಬ ಬಾಂಧವರು ನಿಜ ತಂಗಿ ವಿದಿತ ಅಜ್ಞಾನಿ ಶಕ್ತಿಯು 32 ಬಂದು ಹೊರಗನಿಂತು ಒಂದು ಜಾವಾಯಿತು ಮುಂದಕ ನಮ್ಮ ಕರಿಯಾರು ನಾವರಸಿ ಕಂದಿದ ಮಾರೀ ತೋರಳು 33 ಪಶ್ಚಾತಾಪವೆಂಬ ಬಿಚ್ಚಿ ಹಾಸಿಗೆ ಹಾಸಿ ತುಚ್ಚರ ದೂರ ಝಾಡಿಸೀ ಬರುತೇವು ಎಚ್ಚರ ಲೋಡಾ ತಂದಿರಿಸಿ 34 ಈ ಕಲ್ಲ ಮ್ಯಾಲದ್ದು ಈ ಕಲ್ಲಿಗ್ಹಾರುವಾ ತಾ ಕೋಡಗನಾ ಗುಣದಂತೆ ಭಾವಯ್ಯ ಆ ಕಾಮಣ್ಣನ ಕರಿಯಾರೆ35 ಎಷ್ಟು ಉಂಡರ ದಣಿಯಾ ಎಷ್ಟು ಇಟ್ಟರ ದಣಿಯಾ ಎಷ್ಟು ಉಟ್ಟರ ದಣಿಯಾನು ಕಾಮಣ್ಣ ಎಷ್ಟು ಕೊಟ್ಟರ ದಣಿಯಾ 36 ಒಳ್ಳೆವರರಿಯನು ಹೊಲ್ಲವರರಿಯನು ಕೊಳ್ಳಿಕಾರನಾ ಮತಿಯಂತೆ ಭಾವಯ್ಯ ನಿಲ್ಲರು ಈತನ ಇದರೀಗೆ 37 ಈತನ ತಮ್ಮನು ಮಾತು ಮಾತಿಗೆ ಬಹಳಾ ಖ್ಯಾತಿಯ ತಾನು ಪಡೆದಾನು ಕೋಪಣ್ಣ ಆತನ ಮುಂದಕ ಕರಿಯಾರೆ 38 ನೆಂಟರ ಅರಿಯನು ಇಷ್ಟರ ಅರಿಯನು ಬಂಟರಾ ಮೊದಲೇ ಅರಿಯನು ತಪಸಿಗೆ ಕಂಟರನಾದಾ ಈತನೇ 39 ಥರ ಥರ ಕುಣಿವುತ ಘರ ಘರ ಹಲ್ಲು ತಿಂದು ನೆರೆಮೋರೆ ಕೆಂಪು ಮಾಡುವಾ ಕೋಪಣ್ಣಾ ಸ್ಮರಣೆಯಾ ತನ್ನ ಮರೆವನು 40 ಕಂಡವರಿಗೆ ತಾನು ಕೆಂಡದ ನುಡಿಯಾಡಿ ಖಂಡಿಸಿ ಬಿಡುವಾ ಗೆಳತನಾ ಕೋಪಣ್ಣ ಹಿಂಡುವ ಹಿಡಿದು ಪ್ರಾಣವ41 ತಾನಾರೆ ಉಣ್ಣನು ಜನರಿಗೆ ಇಕ್ಕನು ಜೇನಿನನೊಣದಾ ಗುಣದಂತೆ ಲೋಭೇಶಾ ದೀನನ ಮುಂದಕ ಕರಿಯಾರೆ42 ಬಿಚ್ಚಾರುವಿಯನು ವೆಚ್ಚಮಾಡೆಂದಿಗೆ ಬಚ್ಚಿಟ್ಟು ಹೂಳಿನೆಲದೊಳು ಲೋಭೇಶಾ ಹುಚ್ಚಾಗಿ ಕಾಯ್ದಾ ಫಣಿಯಂತೆ43 ಕಾಸು ಹೋದಾವೆಂದು ಅಸುವ ಹೋಗುವವರಿ ಕಾಸಾವೀಸಿಯಾ ಬಡವನು ಲೋಭೇಶಾ ಹೇಸನು ಎಂದು ಮತಿಗೇಡಿ 44 ಇಳೆಯೊಳೀ ಪರಿಯಲೀ ಗಳಿಸಿದ ಧನವನು ಕಳೆದುಕೊಂಬರು ಅರಸರು ಕಡಿಯಲಿ ಶೆಳೆದು ಕೊಂಡನು ಪುಗಸಾಟೆ 45 ಇವರಿಂದ ಕಿರಿಯನಾ ಹವಣವ ನೋಡೀರೆ ಅವಗುಣದ ರಾಶಿ ಜಗದೊಳು ಮೋಹಾಂಗಾ ಅವನಾ ಮುಂದಕ ಕರಿಯಾರೇ 46 ತಾಯಿ ತಂದೆಗಳ ನ್ಯಾಯನೀತಿಗಳಿಂದ ಸಾಯಾಸದಿಂದ ಭಕ್ತಿಯ ಮಾಡದೆ ಮಾಯದಾ ಬಲಿಗೊಳಗಾದಾ 47 ಏನು ಬೇಡಿದುದೆಲ್ಲಾ ಪ್ರಾಣವವೆಚ್ಚಿಸಿ ಮಾನಿನೀಯರಿಗೆ ಕುಡುವನು ಮೋಹಾಂಗಾ ಮನವಿಡ ಒಳ್ಳೆವರ ಸೇವೆಗೆ 48 ಲೆಕ್ಕ ವ್ಯವಹಾರವಾ ಲೆಕ್ಕದಿ ಮಾಡದೇ ಮಕ್ಕಳಾಟಕಿಯ ಮಾಡುವಾ ಕ್ರೀಡೆಯಾ ನಕ್ಕಾರೆಂಬ ಸ್ಮರಣಿಲ್ಲಾ 49 ಕಮಲದ ವಾಸನೆಗೆ ಭ್ರಮರವು ಸಿಕ್ಕಿದ ಕ್ರಮದಿಂದ ನೋಡಿ ಸೆರೆಯಾದಾ ಶ್ರೀವಧು ರಮಣನ ನಾಮಾ ನೆನಿಯನು 50 ತರುವಾಯದವನೀತಾ ದುರುಳನ ನೋಡಿರೆ ಮರಳು ಬುದ್ಧಿಯಾ ಮದರಾಯಾ ಆತನಾ ಸರಕು ಮಾಡುವಾ ಕರಿಯಾರೆ 51 ಹೊರಸು ತೊಯ್ಯದಂತೆ ಭರ್ರನೆ ಬಿಗಿವನು ಶರಣರ ಕಂಡು ಬಾಗನು ತಲೆಯನು ಅರಿತವರಿಗೇನಾ ಹೇಳಲಿ 52 ಬಗೆಯಾದೆ ಹಿತವನು ಪಗಡಿಪಂಚಿಗಳಾಡಿ ಹಗಲಿನಾ ಹೊತ್ತುಗಳೆವನು ರಾತ್ರೀಲಿ ಮುಗುಧೇಯರೊಡನೆ ಒಡನಾಟಾ 53 ಕಣ್ಣಿಲ್ಲದಾನೆಯು ಚನ್ನಾಗಿ ತಿರುಗುತ ಮುನ್ನ ಬತ್ತಿದಾ ಬಾವಿಯ ಬೀಳ್ವಂತೆ ಕಣ್ಣೆದ್ದು ಕುರುಡನಾದನು&
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರು ಹೊಂದಿದವನೀಗ ಎಂದಿಗೂ ಕೆಡನುಮರಳಿ ಹುಟ್ಟಿದರೇನು ಗುರುವು ಕಾಯುವನು ಪ ಗುರು ಹೇಳಿದಂತಿರದೆ ಗುರು ಆಜ್ಞೆಯಂತಿರದೆಬರಿಯ ಪ್ರಾಪಂಚದ ನಡೆಯನೆ ನಡೆದುಮರೆತೆಯಾದರೇನು ಗುರು ಕರುಣ ತಾನದುವೆನರಕಕ್ಕೆ ಕಳುಹದೋ ಯಮನ ಸೇರಿಸದೋ 1 ತನ್ನ ಅವಗುಣದಿ ಜನ್ಮಗಳ ಸೇರಿದರೇನುಅನ್ಯಕೆ ಎಳಸದದು ಸೋಂಕಿನಲಿ ಮನವುಚೆನ್ನಾಗಿಯೇ ಗುರುದ್ವಾರವನು ಕಾದಿಹನುಭಿನ್ನಿಸದೆ ಪರತತ್ವ ಬೋಧೆ ಹೇಳುವನು 2 ಭ್ರಷ್ಟತ್ವದಿಂ ತನ್ನ ಪಾಪವನು ಉಣುತಲಿಹುಟ್ಟುತಿಹ ಹಂದಿ ಪಶುವಾಗಿ ತಾನುಘಟ್ಯಾಗಿ ನರಜನ್ಮ ಧರಿಸುತ್ತ ಕಡೆಯಲಿಶಿಷ್ಟ ಚಿದಾನಂದ ಬಗಳೆಯನು ಕೂಡುವನು 3
--------------
ಚಿದಾನಂದ ಅವಧೂತರು
ನಾನೇನು ಬಲ್ಲೆ ನಿಮ್ಮ ನಾಮದ ಸ್ಮರಣೆಯನುಏನೆಂದು ಸ್ತುತಿ ಮಾಡಲರಿಯೆ ಪ ದುರುಳ ಕರ್ಮಿಯು ನಾನುಪರಂಜ್ಯೋತಿಯು ನೀನು ಪಾಮರನು ನಾನು 1 ಅಣುರೇಣು ತೃಣ ಕಾಷ್ಠ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕರ್ಮಿ ನಾನುವನಜಸಂಭವನಯ್ಯ ವೈಕುಂಠಪತಿ ನೀನುತನುವು ಸ್ಥಿರವಲ್ಲದ ನರಬೊಂಬೆ ನಾನು 2 ದುರಿತ ಮಾಯಾ ಶರೀರಿ ನಾನು 3 ಭೂರಿ ಕಾರುಣ್ಯಪತಿ ನೀನುಘೋರತರ ಕಾಮಕ್ರೋಧಿಯು ನಾನುಈರೇಳು ಲೋಕವನು ಪೊಡೆಯಲಿಟ್ಟವ ನೀನುಸಾರಿ ಭಜಿಸದ ದುಷ್ಟ ಕರ್ಮಿ ನಾನು 4 ತಿರುಪತಿಯೊಳು ನೆಲಸಿದ ವೆಂಕಟೇಶನು ನೀನುಚರಣಕೆರಗುವ ಕನಕದಾಸನು ನಾನುಬಿರಿದುಳ್ಳ ದೊರೆ ನೀನು ಮೊರೆ ಹೊಕ್ಕೆನಯ್ಯ ನಾನುಮರಣ ಕಾಲಕೆ ಬಂದು ಕಾಯೊ ಹರಿಯೆ5
--------------
ಕನಕದಾಸ
ಬಂದದೆ ಎನಗೆ ಬರಿದೆ ದೂರು ಬಂದೊಂದು ಅವಗುಣದವನೆಂಬೊ ಮಾತು ಪ ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು ತಾಮಸ ಬುದ್ಧಿ ವಿಶೇಷವಾಗಿ ಕಾಮುಕವಾಗಿ ನಡವಳಿ ನಡಸಿದ ಈ ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ 1 ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ ನನ್ನ ನಿನ್ನದು ಎಂಬೊ ಬಡದಾಟವು ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ 2 ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ ವನುರುತರ ರೂಪಿಗೆ ಸೋತು ಆತು ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ ತನವು ಮಾಡಿದಾತಾ ಕೃಷ್ಣನೊ ನಾನೊ 3 ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು ಪ್ರೀತಿಯಲಿ ಅತಿಥಿಗಳ ವಂದಿಸದೆ ಯಾತಕ್ಕೆ ಬಾರದಾ ಚರಿತೆ ನಡೆವಂಥ ಚೇತನ ಕಲ್ಪಿಸಿದ ಕೃಷ್ಣನೊ ನಾನೊ 4 ಆವಾವ ದುಷ್ಕರ್ಮಗಳ ಮಾಡಿ ಉತ್ತಮ ದೇವ ಬ್ರಾಹ್ಮಣರ ಪೂಜಿಸಲಿಲ್ಲವು ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ 5
--------------
ವಿಜಯದಾಸ
ಮಾಧವ ಪ ದುರುಳ ತಿರುಕನು ನಾನು 1 ವಾರಿಧಿಶಯನನಾದ ಕಾರುಣ್ಯನಿಧಿ ನೀನುಘೋರದಿಂದಿಹ ಕಾಮಿಕ್ರೋಧಿ ನಾನುಈರೇಳು ಭುವನದೊಳು ಇರುವ ಮೂರುತಿ ನೀನುದೂರಿ ನಿನ್ನನು ಬೈವ ದುಷ್ಟ ನಾನು2 ಅಣುರೇಣು ತೃಣಗಳಲಿ ಪರಿಪೂರ್ಣನು ನೀನುಕ್ಷಣಕ್ಷಣಕೆ ಅವಗುಣದ ಕುಕರ್ಮಿ ನಾನುವಾಣಿಯರಸನ ಪೆತ್ತ ವೈಕುಂಠಪತಿ ನೀನುಕ್ಷಣಭಂಗುರ ತನುವಿನ ಗೊಂಬೆ ನಾನು 3 ಕಂಬದಲಿ ಬಂದ ಆನಂದ ಮೂರುತಿ ನೀನುನಂಬಿಕೆಯಿಲ್ಲದ ಪ್ರಪಂಚಕನು ನಾನುಅಂಬರೀಷಗೆ ಒಲಿದ ಅಕ್ರೂರಸಖ ನೀನುಡಂಬ ಕರ್ಮಿಯು ನಾನು ನಿರ್ಜಿತನು ನೀನು4 ತಿರುಪತಿಯ ವಾಸ ಶ್ರೀವೆಂಕಟೇಶನೆ ನಿನ್ನಚರಣಸೇವಕರ ಸೇವಕನು ನಾನುಬಿರುದುಳ್ಳವನು ನೀನು ಮೊರೆಹೊಕ್ಕವನು ನಾನುಸಿರಿ ಕಾಗಿನೆಲೆಯಾದಿಕೇಶವನು ನೀನು 5
--------------
ಕನಕದಾಸ
ದಯಮಾಡು ದಯಮಾಡು ಶ್ರೀನಿವಾಸಭವಭಯ ನಿವಾರಣ ಭಜಕ ಭಕ್ತರಘನಾಶ ಪ.ನೇಮವೆನ್ನಲಿಲ್ಲ ನಾಮದರಿಕೆಯಿಲ್ಲನಾ ಮಹಾಪಾಪಿಯು ಸ್ವಾಮಿ ನೀನೊಲಿದು ಗಡ 1ಸದ್ಧರ್ಮ ಸರಕಿಲ್ಲ ಶುದ್ಧ ಬುದ್ಧಿಯಿಲ್ಲಉದ್ಧರಿಸೆನ್ನನಿರುದ್ಧಹರಿಕರುಣಿ2ಸತ್ಕುಲ ಹೊಂದೇನು ಸತ್ಕರ್ಮ ಮಾರ್ಗಿಲ್ಲಭಕ್ತರಕ್ಷಕ ಪಾಪಮುಕ್ತ ದೇವರ ದೇವ 3ಅವಗುಣದೆಣಿಕೆಯ ವಿವರ ನೋಡದೆ ಅಯ್ಯಜವನ ಬಲೆಯನು ತಪ್ಪಿಸುವ ಸರೀಸೃಪಶಯ್ಯ4ಅಜಾಮಿಳವ್ಯಾಧಆಗಜಅಹಲ್ಯೋದ್ಧರನಿಜ ಪ್ರಸನ್ವೆಂಕಟೇಶಸುಜನಪರಿಪೋಷ5
--------------
ಪ್ರಸನ್ನವೆಂಕಟದಾಸರು