ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಶಿವಯೋಗಾ ಶಿವಯೋಗಾ | ಮುಂದಿಲ್ಲವು ತನು ಭೋಗಾ ಪ ಕೋಟಿ ತೀರ್ಥದಲಿ ಮುಣುಗಿ ಬಂದು | ಕೀಟಕ ಜನರರಿಯರು ಎಂದೆಂದೂ 1 ಎಲ್ಲಿಹುದರಿದರೆ ಗೋಕರ್ಣ | ಇಲ್ಲದಾಯ್ತು ದೇಹದ ವರ್ಣ 2 ಭವತಾರಕನ ಭಜಕನು ಬಲ್ಲಾ | ಭವದೊಳು ಇದ್ದರೂ ಭಯ ಅವಗಿಲ್ಲಾ 3
--------------
ಭಾವತರಕರು
ನಿನಗಿದು ಹಿತವೇ | ಇದು ಹಿತವೇ ಪ ಕಂಸಾರಿ ಚರಣವ ನಂಬದೇ ಕ್ಷಣಿಕದ | ಸಂಸಾರದಲಿ ಬೆರಿಯಬೇಡಾ 1 ಕನ್ನಡಿಯೊಳಗಿನಾ ಹೊನ್ನಿನಾ ಗಂಟ ನೋಡಿ | ಕಣ್ಣಗೆಟ್ಟಿರುವರೇ ಮೂಢಾ 2 ಬಿಸಿಲಿನ ನೀರಿನಿಂದೆ ತೃಷೆಯಾರಿಸುವದುಂಟೆ | ಹಸಗೆಡದಿರು ವಿಷಯ ಕೂಡಾ | 3 ಕನಸಿನ ಸಂಪದವನೆನೆಸಿ ತಾ ಹಿಗ್ಗುವರೆ | ಮನವೇ ನೀ ಮಥನಿಸಿ ನೋಡು 4 ದಾವನು ಗುರು ಮಹಿಪತಿ ಪ್ರಭು ಭಜಿಸನು | ಅವಗಿಲ್ಲ ಸುಖಸುರವಾಟಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ | ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ1 ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ | ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ 2 ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ 3 ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು | ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು 4 ಭಿಕ್ಷೆ ಬೇಡಲುಂಟು 5
--------------
ಭೀಮಾಶಂಕರ