ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ. ದೇವರದೇವನೆ ಬಾರೊ ದೇವಕಿನಂದನ ಬಾರೊ ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ. ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ 1 ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ ಕೂರ್ಮ ಬಾರೊ ಹರಿಯೆ 2 ಧsÀರೆಯನುದ್ಧರಿಸಲು ವರಾಹನಾದವನೆ ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ 3 ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ- ಡಿಂಬ ಬಾರೊ ಹರಿಯೆ 4 ಮಾಣವಕವೇಷನಾಗಿ ಕ್ಷೋಣಿ ಅಳೆದವನೆ ದಾನವನ ಸೋಲಿಸಿದ ಜಾಣ ಬಾರೊ ಹರಿಯೆ5 ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ ಪಿಡಿದುಗ್ರ ಒಡೆಯ ಬಾರೊ ಹರಿಯೆ 6 ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ ಕೊಂದ ರಾಮಚಂದ್ರ ಬಾರೊ ಹರಿಯೆ 7 ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ 8 ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ 9 ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ 10 ವಿಜಯ ಹಯವದನ ಭಜಕರ ಭಾಗ್ಯನಿಧಿ ಸುಜನಾಬ್ಧಿ ವಾದಿರಾಜನ ತೇಜ ಬಾರೊ ಹರಿಯೆ 11
--------------
ವಾದಿರಾಜ
ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಂಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ಬಾರೋ ಗೋಪಿಯ ಬಾಲಾ ಮಾನಸದೊಳುತೋರಿಸೋ ಮುಖಕಮಲಾ ಪ ಸೇರಿಸೊ ನಿನ್ನ ಪದ ಸಾರಸಯುಗಳ-ಪಾರ ಸದ್ಗುಣ ಶೀಲ ಅಪ್ಪಯ್ಯ ಕೃಷ್ಣಅ.ಪ. ವಕ್ತ್ರಲಂಬಿತವಾಲಾ ಮಣಿಮಯ ಚಿತ್ರಶೋಭಿತ ಭಾಲಾರತ್ನಕುಂಡಲ ನವಮೋಕ್ತಿಕ ಮಾಲಾ ಭೃತ್ಯಭಾಷಿತ ಪಾಲಾ 1 ಶುಭ ವೇಷಾಶಂಕರಮುಖ ಸುರಾತಂತಂ ವಿನಾಶ ಕಿಂಕರ ಜನ ಘೋಷ 2 ವೇದವನಿತ್ತವನೇ ವಾರಿಧಿಯೊಳು ಭೂಧರ ಪೊತ್ತವನೆಮೇದಿನಿಯನು ಕೋರಿಲ್ಯಾ ಧರಿಸಿದನೇ ನರ ಮೃಗದಾ ಮೊಗದವನೆ 3 ಧಾರುಣಿ ಅಳೆದವನೆ ಭಾರ್ಗವ ಸೀತಾ ಚೋರನ ಗೆಲಿದವನೆ ನಾರಿಮೋಹನ ಜಿನಾಚಾರ್ಯ ಸುತನೆ ಘೋರ ಮ್ಲೇಂಛರ ಹರನೇ 4 ಸಾಮಜ ಶರಣಾ 5
--------------
ಇಂದಿರೇಶರು
ಭಜಿಸಿರೋ ಭಜಿಸಿರೋ ಅಜನ ಪೆತ್ತವನಾ ಭುಜಗಶಯನ ಮದಗಜವ ಪೊರೆದನಾ ಪ ಭಜಕರ ಕೂಗಿಗೆ ನಿಜವ ತೋರುವನಾ ಸುಜನೋದ್ಧಾರನ ವಿಜಯ ರಾಘವನಾ ಅ.ಪ ರಾಗವಿದೂರನ ರಾಗೋಲ್ಲಾಸನ ರಾಗಕೆ ಒಲಿವನಾ ರಾಗವನುಣಿಪನ ರಾಗದಿ ಮುರಳಿಯ ಊದಿ ರಾಜಿಸುವನ ರಾಗದಿ ನಮಗನುರಾಗವನೀವನ1 ಶರಣರ ದುರಿತವ ಪರಿಹರಿಸುವನ ಧರಣಿಯನೀರಡಿ ಅಳೆದವನ ಕರುತುರುಗಳ ಕನಿಕರದಿಂಕಾಯ್ದನ ವರದಾಯಕ ಮಾಂಗಿರಿ ರಂಗಯ್ಯನ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪ್ರಥಮ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಹಂಸನಾಮಕ ವಿಷ್ಣು ವನರುಹಾಸನಸನಕದೂರ್ವಾಸಮೊದಲಾದಗುರುವಂಶಜಾತದಶಪ್ರಮತಿಸರಸಿಜನಾಭನರಹರಿತೀರ್ಥಬಿಸಜಚರಣಂಗಳಲಿ ಸತತ ನಾ ಶರಣು |1ಮಾಧವಅಕ್ಷೋಭ್ಯ ಜಯವಿದ್ಯಾಧಿರಾಜ ರಾ-ಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯತತ್ವಜÕ ರಘೂತ್ತಮಾರ್ಯರಿಗೆವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆಭೃತ್ಯನಾ ಎನ್ನ ವಂದನೆಗಳರ್ಪಿಸುವೆ4ಸತ್ಯಬೋಧರ ಮಹಿಮೆ ಬಹು ಬಹು ಬಹುಳವುವೇದ್ಯ ಎನಗೆ ಅತಿ ಸ್ವಲ್ಪ ಮಾತ್ರಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದುಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5ರಾಮಾಚಾರ್ಯರು ಸಣ್ಣ ವಯಸ್ಸಿನವರುನೇಮದಿಂದಾಶ್ರಮೋಚಿತ ಕರ್ಮಪರರುರಾಮ ಹಯಶೀರ್ಷ ನರಸಿಂಹನ ಗುಣರೂಪಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯಗುರುಗಳ ಸಂಸ್ಥಾನ ಪೀಠಕ್ಕೆ ಬಂದುಸೂರಿವರ್ಯರು ಸತ್ಯಬೋಧ ತೀರ್ಥರು ಎಂದುಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7ಬಾದರಾಯಣಮಾಧ್ವ ಸಚ್ಛಾಸ್ತ್ರ ಬೋಧಿಸಿಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿವೇದ ವಿರುದ್ದ ದುರ್ವಾದಗಳ ಕತ್ತರಿಸಿಮೇದಿನಿಸಜ್ಜನರ ಪೊರೆದಂಥ ಧೀರ 8ಪೀಠ ಆರೋಹಿಸಿದ ಪೂರ್ವಗುರುಗಳ ಪೋಲುಮಠಕ್ಕೆ ಮಾನ್ಯಗಳ ಅಭರಣಗಳನ್ನಪಟ್ಟಣ ಪ್ರಮುಖರು ಧನಿಕರು ಭೂಪಾಲರುಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆಬಂಧಿಸಿದ ಶ್ರೀಮಠವ ರಾಮೇಶ್ವರ ರಾಜಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್ಕಾರನು ಸೈನ್ಯವನು ಕಳುಹಿಸಿದನುವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿವರಧನಾಪಹಾರಿಯು ಎಂದು ಆಪಾದಿಸಿನಿರೋಧಿಸಿದ ಶೋಧನೆ ಮಾಡುವ ನೆವದಿ 12ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆಗುರುಗಳು ರಾಮದೇವರ ಪೆಟ್ಟಿಗೆಯತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿಹರಿಯ ಮಾನಸ ಪೂಜೆ ಮಾಡುತ ಕುಳಿತರು 13ಜಾನೋಜಿರಾಯನು ವಾದಿಸೆ ಸುಲ್ತಾನತನ್ನ ಸರ್ಕಾರ ಶೋಧಕರ ಕಳುಹಿಸಿದತನ್ನ ಹಿರಿಯರ ಮತ್ತು ಇತರ ರಾಜರುಗಳಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದಹರಿಪೂಜೆಗುರುಪೂಜೆ ಮಾಡಿಸಿ ಕಾಣಿಕೆಯುಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನುಗುರುಸತ್ಯಬೋಧರ ಕೀರ್ತಿವರ್ಧಿಸಿತು15ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯತರಿಸಿ ಹರಿಪೂಜೆಯ ಮಾಡಿ ಮುದದಿಂದಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16ಮಾರ್ಗದಲಿ ತಂಜಾವೂರಿನ ರಾಜನುಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದನಗರದಲಿ ಪ್ರಮುಖಪಂಡಿತಗೋಸಾಯಿಯನಿಗಮಾಂತ ವಾದದಲಿ ಸೋಲಿಸಿದರು 17ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿಗಂಭೀರತರ ದೊಡ್ಡ ಮಂಟಪಕಟ್ಟಿಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯಸಾರಂಗಪಾಣಿ ಕುಂಭೇಶ್ವರ ಕ್ಷೇತ್ರಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದುಸೇರಿದರು ತಿರುಪತಿ ವೇಂಕಟಾಚಲಕ್ಕೆ 19ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆನೀರುಮಧ್ಯದಿ ಇರುವ ಜಂಬುಕೇಶ್ವರನಿಗೆಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20ಶಾಙ್ರ್ಗಧರಚಕ್ರಧರಕುಂಭೇಶ್ವರಅಂಬಮಂಗಳನಾಯಕಿ ವಿಜಯೀಂದ್ರರಿಗೆನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹಶ್ರೀರಮಾಪತಿ ಇಹನು ಸರ್ವೇಷ್ಟದಾತಪರಿಪರಿ ಭಕ್ತರ ಪೀಡೆಗಳ ಪರಿಹರಿಪಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನಭಾರಿಆಲಯಉಂಟು ಶಿವಕುಮಾರರಿಗೂಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯತೀರದಲಿ ಶ್ರೀರಘೂತ್ತಮರು ಕುಳಿತಿಹರು 23ಪಿನಾಕಜಾ ಈ ಪಿನಾಕಿಯಲ್ಲಿಹನುಅನಿಮಿತ್ತ ಬಂಧುಶ್ರೀಕೇಶವ ಸರ್ವೇಶಸ್ನಾನ ಜಪದಾನಗಳು ಪಣ್ಯಪ್ರದತತ್ತೀರವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂಕಾಯವಾಕ್ಕು ಮನದಿ ಟೀಕಾಭಾವಬೋಧರಿಗೂಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆವೀರ ಚೋಳಪುರದಲ್ಲಿ ಶ್ರೀ ಸತ್ಯನಾಥತೀರ್ಥರು ಅಭಿನವ ಚಂದ್ರಿಕಾಕಾರರುಇರುತಿಹರು ವೃಂದಾವನದಲ್ಲಿ ವಂದೇ 26ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿತಿರುಪತಿಗೆ ಹೊರಟರು ಗುರುಸರ್ವಭೌಮ 27ಹೇಮಗರ್ಭನತಾತಶ್ರಿಪತಿ ಜಗನ್ನಾಥಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 ಪ
--------------
ಪ್ರಸನ್ನ ಶ್ರೀನಿವಾಸದಾಸರು