ಸಾಮಾಜಿಕ-ಲೋಕನೀತಿ ಸ್ತುತಿಗಳು
ಅಳುವವರಿಲ್ಲದ ಜಗವಿಲ್ಲ ಪ
ಅಳುವಿಲ್ಲದವಗೆ ನಲವಿಲ್ಲಾ ಸದಾ
ಅಳುವವನಿಗೆ ಸದ್ಗತಿಯಿಲ್ಲಅ.ಪ
ಅಳಿವಿಂಗಳುವುದು [ಅಸಹಾಯಾರ್ಥ]
ಬಳಲಿಕೆಗಳುವುದು ಬಹುವ್ಯರ್ಥ
ಘಳಿಗೆಯೊಂದಾದರೂ ನಳಿನನಾಭನಕೃಪೆ
ಗಳುವುದೇ ಮನುಜಗೆ ನಿಜದರ್ಥ 1
ಸ್ವಾಮಿಯ ಬಳಿಯಲಿ ಕಾಮಿತವಿಲ್ಲದ
ನಾಮಭಜನೆಯೊಳು ಇರಬೇಕು
ಶ್ರೀಮಹಿತಾಂಗ ಮಾಂಗಿರಿರಂಗಯ್ಯನ
ಪ್ರೇಮಕಳುವ ಮನವಿರಬೇಕು 2