ನನ್ನ ಗುರು ಯೆಂತಪ್ಪ ದೊಡ್ಡವನೋ
[ಘನ್ನ] ಸೀತಾಮನೋಹರ ಪ
ನಿನ್ನೆಯೆನಗೊದಗಿದ ದು:ಖದಿ
ಬನ್ನಬಡಿಸುವದಾಗಿ ಅಳುತಿರೆ
ಚನ್ನಕೇಶವನಾಗಿ ತಾನೆ ಪ್ರ
ಸನ್ನನಾದ ಮಹಾತ್ಮ ಜಯಜಯ1
ಭಗವದಾಜ್ಞೆಯನನುಗೊಳಿಸದಲೆ
ಕುಗುಣ ಕುಚಿತದೊಳಿರಲು ಬಂದದ
ಸಿಗಿದು ಹೊಡೆದು ಬಿಸಾಡಿದಾ ನಮ್ಮ
ಸಗುಣ ಸಾಕ್ಷಾತ್ಕಾರ ನಿರ್ಗುಣ2
ದುರ್ಗುಣವು ದುಸ್ಸಂಗ ದುವ್ರ್ಯಾವಾರದೊಳು
ದುರ್ಗತಿಕುಮತಿ ನಾನಧಿಕನಾಗಿರೆ
ಸ್ವರ್ಗನಾಯಕ ಬಂದುಮೆನ್ನುಪ
ಸರ್ಗಮಳಿದ ಮಹಾನುಭಾವಾ 3
ಅರಿಯದರಿಲಿಕೆ ಅರಿಗಳಾರನೂ
ಹರಿಯೆ ತಾನಾಗೈದು ತೋರಿದ
ಪರಮಗುರು ಶ್ರೀ ತುಲಸಿರಾಮನ
ಚರಣ ಸೇವಕನಾದೆನಹುದೆಲೊ 4