ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ಯಾಡೋ ಒಬ್ಬರ ಮನೆಗೆ ನೀ ಪೋಗ ಬ್ಯಾಡೋ ಒಬ್ಬರ ಮನೆಗೆ ಪ ಗಾಡಿಕಾರನೆ ಕೃಷ್ಣ ಚಾಡಿ ಮಾತನು ಕೇಳಿ ಗಾಡನೆ ಕಿವಿಮುಚ್ಚಿ ಓಡಿಸಿದೆ ಗೋಪಿಯರ ಅ.ಪ ಕಟ್ಟಿದ್ದ ತುರುಕರುಗಳ ಬಿಚ್ಚಿ ಪೋಗುವದಿದು ನಿಶ್ಚಯವೆಂದು ಪೇಳ್ವರೊ ಸ್ವಚ್ಛ ಕರುಗಳ ಕಣ್ಣುಮುಚ್ಚಿ ಪಾಲೆಲ್ಲ ಕುಡಿದ ಅಚ್ಯುತನಿಗೆ ಬುದ್ಧಿ ಮತ್ತೆ ನೀ ಪೇಳೆಂಬರು 1 ಮಕ್ಕಳೆಲ್ಲರು ಕಯ್ಯೊಳು ಬಟ್ಲಲಿ ಅವ- ಲಕ್ಕಿಯ ತಿನ್ನುತಿರಲು ಘಕ್ಕನೆ ಬಡಿಯೆ ದಿಕ್ಕು ದಿಕ್ಕಿಗೆ ಚಲ್ಲೆ ಬಿಕ್ಕಿ ಬಿಕ್ಕಿ ಅಳುತಾರೆ ಗೋಪಕ್ಕ ನೀನೋಡೆಂಬರು 2 ವಾಸುದೇವಗೆ ಹರಕೆಯ ಮಾಡಿ ನವ- ನೀತ ಮೀಸಲು ಮಾಡಿರೆ ಮೀಸಲಳಿದು ಕೋತಿ ಮಾರ್ಜಾಲಗಳಿಗುಣಿಸಿ ನೀತಿ ಪೇಳುವ ಶ್ರೀನಾಥ ನೋಡೆಂಬರು 3 ಗೊಲ್ಲ ಬಾಲಕಿಯರೆಲ್ಲ ಪಾಲ್ಮೊಸರು ಮಾರೆ ಮೆಲ್ಲನೆ ಪೋಗುತಿರಲು ಗುಲ್ಲು ಮಾಡದೆ ಕವಣೆ ಕಲ್ಲಿಂದ ಕುಂಭ ಒಡೆಯೆ ಚಲ್ಲಿ ಪಾಲ್ಮೊಸರು ಸೂರೆ ನಲ್ಲೆ ನೀ ನೋಡೆಂಬರು4 ಮತ್ತೆ ಕೇಳಮ್ಮ ಯಶೋದೆ ನಾವೆಲ್ಲ ಆಣಿ ಮುತ್ತು ಪೋಣಿಸುತಿರಲು ಸುತ್ತ ಮುತ್ತಲು ನೋಡಿ ಮುತ್ತು ಸೂರೆ ಮಾಡಿದ ಕರ್ತೃ ಶ್ರೀ ಕಮಲನಾಭ ವಿಠ್ಠಲನ ನೋಡೆಂಬರು5
--------------
ನಿಡಗುರುಕಿ ಜೀವೂಬಾಯಿ