ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರೇ ಗೋಪಮ್ಮ ನಿನ್ನ ಬಾಲಯ್ಯನಳು ತಾನೆ |ಬಾರೇ ಗೋಪಮ್ಮ - ನಾವ್ ||ಆರೂ ತೂಗಿದರೂ ಮಲಗನು ಮುರವೈರಿಬಾರೇ ಗೋಪಮ್ಮ ಪನೀರೊಳಗಾಡಿ ಮೈಯೊರಸೆಂದು ಅಳುತಾನೆ_ಬಾರೆ-|ಮೇರುವ ಹೊತ್ತು ಮೈಭಾರವೆಂದಳು ತಾನೆ-ಬಾರೆ-||ಧರೆಯ ನೆಗಹಿ ತನ್ನದಾಡೆನೊಂದಳು ತಾನೆ-ಬಾರೆ-|ದುರುಳರಕ್ಕಸನ ಕರುಳ ಕಂಡಳು ತಾನೆ-ಬಾರೆ-1ನೆಲವನಳೆದು ಪುಟ್ಟ ಚರಣನೊಂದಳು ತಾನೆ-ಬಾರೆ-|ಛಲದಿಂದ ಕೊಡಲಿಯ ಪಿಡಿವೆನೆಂದಳು ತಾನೆ-ಬಾರೆ-||ಬಲುಕಪಿಗಳ ಕಂಡಂಜಿಕೊಂಡಳು ತಾನೆ-ಬಾರೆ-|ನೆಲುವಿನ ಬೆಣ್ಣೆ ಕೈ ನಿಲುಕದೆಂದುಳು ತಾನೆ-ಬಾರೆ- 2ಬಟ್ಟ ಬತ್ತಲೆ ನಿಂತು ಎತ್ತಿಕೊ ಯೆಂದಳು ತಾನೆ-ಬಾರೆ-|ಶ್ರೇಷ್ಠ ತೇಜಿಯನ್ನು ಹತ್ತಿಸೆಂದಳು ತಾನೆ-ಬಾರೆ-||ತೊಟ್ಟಿಲೊಳಗೆ ಮಲಗಲೊಲ್ಲನು ಮುರವೈರಿ-ಬಾರೆ-|ಸೃಷ್ಟಿಯೊಳು ಪುರಂದರವಿಠಲ ಕರೆಯುತಾನೆ-ಬಾರೆ 3
--------------
ಪುರಂದರದಾಸರು