ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣಲಿಲ್ಲವೆಂದೆನಬೇಡಿ ಪ ಜಾಣನವನು ನಿಮ್ಮ ಕೋಣೆಯೊಳಗಿರುವಾ ಗು ಡಾಣವ ತುಡುಕುವ ನೆರೆನೋಡಿ ಅ.ಪ ಸುಲಭನು ನಿಮಗವನೊಲಿವನು ನಿಮ್ಮೆಡೆ ನಿಲುವನು ನಲಿವನು ಕೈನೀಡೀ ಸಲಿಸಿರಿ ಬೆಣ್ಣೆಯ ಮೆಲುವನು ಕಿಲಕಿಲ ನುಲಿವನು ಚಲಿಸಲು ಬಿಡಬೇಡಿ 1 ಅಳುಕುತ ಬಳುಕತ ಬಳಲುತ ಸುಳಿಯುತೆ ಘಳಿಲನೆ ಪೋಪನೆಚ್ಚರವಿರಲಿ ಎಳನಗೆಯಿಂದ ಪಾಲೆರೆಯಿರಿ ಮನ ದೊಳಚ್ಚಳಿಯದ ಮೋದವು ನೆಲೆಸಿರಲಿ 2 ಮನವೆಂಬುವುದೇ ವನರುಹವಮ್ಮಾ ಕನಸುನೆನಸಿನೊಳಾ ವನಜವನರ್ಪಿಸೆ ನೀನೆಂಬುದನೇ ಮರೆಯುವಿರಮ್ಮಾ [ತನುಮನ ಅವನಡಿ ಸೇರುವುದಮ್ಮಾ] 3 ಪಡಸಾಲೆಯೊಳಿವ ನಿಲ್ಲುವನಲ್ಲಾ ಅಡಿಗೆಯ ಕೋಣೆಯ ಬಿಡುವನಲ್ಲ ಒಡೆಯ ಶ್ರೀಮಾಂಗಿರಿಪತಿಯನು ನೋಡದ ಮಡದಿಯಿಲ್ಲವೆಂಬುದು ಸಟೆಯಲ್ಲ 4 ನೀವಿರುವಾಯೆಡೆ ಪಾಲ್ಗಡಲಮ್ಮಾ ನೀವಡಿಯಿಡುವುದೇ ಕಡೆಗೋಲಮ್ಮಾ ದಧಿ ನವನೀತವು ನೀವಿರೆ ಮಾಂಗಿರಿರಂಗನುಂಟಮ್ಮಾ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಂಗ ಕುಣಿದ ಮುದ್ದು ರಂಗ ಕುಣಿದ ಪ.ರಂಗ ಕುಣಿದ ಗೋಪಿಕಂಗಳ ಮುಂದೆಪೊಂಗೆಜ್ಜೆ ರವದೊಳು ಅಂಗಳದೊಳು 1ಗೆಳೆಯರೆಂದೆನಿಸುವ ಎಳೆಮಕ್ಕಳೊಡಗೂಡಿಬಳುಕುತ ಬಾಗುತ ನಲಿನಲಿದಾಡಿ 2ಮೊಳೆವಲ್ಲು ಬಾಯಿಜೊಲ್ಲು ಗಿಳಿಸೊಲ್ಲಿನಿಂದಲಿಕಳಕಳಿಸಿ ನಕ್ಕು ನಗಿಸಿ ಬಿದ್ದೆದ್ದು 3ಸುಳಿಗುರುಳು ಪಣೆಯಲಿ ಒಲಿದಾಡಲುಬಲರಾಮ ತಿದ್ದಿದರಳುತ ಅಳುಕುತ 4ಅರಳೆಲೆ ಮಾಗಾಯಿ ಬೆರಳ ರನ್ನುಂಗುರಕಿರುಗೆಜ್ಜೆ ಭಾರೆಂದು ತರಳರಿಗಿತ್ತು 5ಮಕ್ಕಳ ರತುನ ಶ್ರೀ ಚಿಕ್ಕಕೃಷ್ಣಯ್ಯನುಬೆಕ್ಕಿಗೆ ಬೆದರ್ಯೆವೆ ಇಕ್ಕದೆ ನೋಡಿ 6ನಗುತತಿ ಮುದ್ದಿಸಿ ಬಿಗಿದಪ್ಪಲೆಶೋದೆಯಮಗ ಪ್ರಸನ್ವೆಂಕಟೇಶ ಚಿಗಿದುಡಿಯಲ್ಲಿ 7
--------------
ಪ್ರಸನ್ನವೆಂಕಟದಾಸರು