ಅಳಿವ ಬಾಳ ನಂಬುತಲೀಗ ತಿಳಿ ತಿಳಿಯೊ ಧೀರನಾಗಿ
ಪರಾಶಾಂತಿಯ ಬೇಗ ಪರಾಶಾಂತಿಯಬೇಗ ಪ
ದೊರಕುವದೆ ಶಾಂತಿ ಜೀವನೆ ಹೊರಹೊರಗೆ ನೋಡಲು
ಅರಿ ನಿನ್ನ ಹೃದಯದೋಳ್ ಸಲೆನಾಸಿಪುದು ತಿಳಿಯಲು
ಮೂಲಸ್ವರೂಪ ನಿನ್ನ 1
ಈ ದೇಹ ನಾನು ಎಂಬ ಭ್ರಾಂತಿ ಬೇಗ ತ್ಯಜಿಸುತ
ಬಾಧಿಸುತ ಬುದ್ಧಿಯನ್ನು ಬೇರೆಯಾಗಿ ತಿಳಿಯುತ
ಬಾಧಾರಹಿತ ನಾ ವಾದ ಪದವೆ ನಾನಿಹೆನೆನುತ 2
ಈ ನಿರ್ವಿಕಲ್ಪವಾದ ಸ್ಥಿತಿಯೇ ತಾನಿಹೆನೆಂದು
ಅನುಭವದಿ ತಿಳಿದುಕೊಳ್ಳು ಪರಾಶಾಂತಿಯದೆಂದು
ನೀನೇ ಪ್ರಶಾಂತರೂಪನಿರಲು ಶೋಕಿಸಬೇಡ 3