ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀ ಲಕ್ಷ್ಮೀಸ್ತುತಿಗಳು ಅಂಗನೆ ನಿನ್ನ ಮುಖದಿರುವಿಂತು ನೆರೆ ದಿಂಗಳ ಸೋಲಿಸುವಂತೆ ತೋರುತಿದೆ ಪ ಮಿಸುಪ ಕೆಂಪಿನೊಳಸಿತಗಳೇನೇ ಯೀ ಎಸೆವಚ್ಚಬಿಳಿದರೊಳು ರಾಗವೇಕೇ ಮಿಸುನಿವೋಲೆಯ ಮೇಲೆ ಮುಸುಳಿತೇ ಯೀಗ ಪೊಸತಾವರೆಯ ಮೇಲೆ ಮಳೆ ಸೂಸಿತೇ 1 ಅಂಬರ ಅಳಿದಿಹುದೇನೆ ಮರಿ ದುಂಬಿಯ ಹಂಬಲು ಪೊಸತಾಗಿದೆ ತಂಬೆಲರಳತೆಗೆ ಪೇರ್ಚಿದೆಯೇನು ಪೊಂಬಟ್ಟೆ ಸೋಂಕಲು ಮುನ್ನ ಕಿರಿದಾದುದೇ 2 ಬಾಲೆ ನೀಕರೆಯ ಹೋಗಿ ನೆರದೆಯೇ ಈಗ ಮೂಲೋಕ ಮೋಹನ ಸುರಪುರವ ಪಾಲಿಸುವ ಮಹಾಲಕ್ಷ್ಮೀಪತಿ ಬಂದು ಯೆನ್ನ ಮೇಲಿಕ್ಕಿ ನೆರದುದಾ ಯೇನೆಂಬೆನೇ 3
--------------
ಕವಿ ಲಕ್ಷ್ಮೀಶ
ಎಂಜಲೆನ್ನಲಿಬಹುದೆ ಮನುಜರಿದನ ಅಘವನಧ- ನಂಜಯ ಸುವೈಕುಂಠದಾಸರ ವದನದ ಕಣವ ಪ. ವದನವೆಂಬಾಕಾಶದಲಿ ಭಕುತಿ ಜೀಮೂತ ಪದುಮನಾಭನ ನಾಮಾಮೃತದ ಕಡಲ ಮುದದಿಂದ ತಕ್ಕೊಂಡು ಎನ್ನಂಗ ದೇಹದಲಿ ಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು 1 ಹೃದಯ ಕಾರಾಗೃಹದಿ ಶ್ರೀಹರಿಯನಾವಾಗ ಹುದುಗಿ ಅಗಲಿಸಿದ ಕಾರಣದೊಳಂಗುಟದಿ ಉದಿಸಿ ಗಂಗೆಯು ಪೋಪೆಡೆಯು ಅಳಿದಿರೆ ಇವರ ವದನದಲಿ ಪೊರಟೆನ್ನಮ್ಯಾಲೆ ಹರಿದುದನು 2 ಪರಸನ್ನ ಹಯವದನ ಚರಣಸರಸಿಜಮಧು- ಕರ ಸುವೈಕುಂಠದಾಸೋತ್ತಮನ್ನ ವರವದನದಲಿ ವೇದಶಾಸ್ತ್ರಾಗಮದ ತಾ- ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು 3
--------------
ವಾದಿರಾಜ
ಪಾಲಿಸು ಮರೆಯದೆನ್ನ ಪಾಲ ತ್ರಿಜಗಮೋಹ ಮಾಲಕೌಸ್ತುಭ ಸತ್ಯಭಾಮಾ ಲೋಲ ಭಕ್ತಜನರ ಪ್ರೇಮ ಕಾಲಕಾಲದಿ ನಿಮ್ಮ ಭಜನಲೋಲಜನರೊಳಿರಿಸಿ ಎನ್ನ ಬಾಲನೆಂದು ಕರುಣದಾಳು ಕಾಳರಕ್ಕಸಕುಲಸಂಹಾರ ಪ ವಾರಿಧಿಯೊಳು ಮುಳುಗಿದ ವೇದಗಳ ತಂದು ವಾರಿಜಾಸನಗೊಪ್ಪಿಸಿದಿ ಸಾಧುಗಳ ಬಂಧು ವಾರಿಧಿಯೊಳು ವಾರಿಧಿಯ ಕಡೆದಿ ವಾರಿಧಿಯೊಳು ವಾಸನಾದಿ ವಾರಿಧಿಸುತೆಪತಿ ನೀನಾದಿ ವಾರಿಧಿಯನು ಬಂಧಿಸಿ ಮತ್ತೆ ವಾರಿಧಿಯ ಮಧ್ಯದ ಪುರವ ಸೂರೆಗೈದಾಪಾರಮಹಿಮ ಘೋರತಾಪದಿ ಬಿಡದೆ ದೇವ1 ಮಾಯಾಜಗವ ತುಂಬಿದಿ ಮಹರಮಣ ಹರಿಯೆ ಮಾಯದ ಮರುಣುಣಿಸಿದಿ ವೈಕುಂಠಪತಿಯೆ ಮಾಯೆಗೆ ಮಾಯೆಯೆನಿಸಿದಿ ಮಾಯೆಹರನಾದಿ ಮಾಯದಿಂ ಬಲಿಯನ್ನು ತುಳಿದಿ ಕಶ್ಯಪನ ಅಳಿದಿ ಮಾಯದ್ಹಿರಣ್ಯಕನ ಸೀಳಿದಿ ಮಾಯದಿಂ ಮಾಯೆಮೂಗು ಕುಯ್ಸಿದಿ ಮಾಯಮೃಗವನು ಮಾಯದಿಂ ಕೊಂದಿ ಮಾಯದೆನ್ನ ನೂಕದೆ ದೇವ 2 ಕಪಟಕೋಟಿಗಳನ್ನಳಿದಿ ಚಪಲಸುರಪನ ಕಪಟಗರುವವ ಮುರಿದಿ ಲಕುಮಿರಮಣ ಕಪಟನಾಟಕ ನೆನಿಸಿದಿ ಕಪಟಹರನಾದಿ ಕಪಟ ಅಸುವ ಸೆಳೆದಿ ಕಪಟ ಕಂಸನ ಶಿರವಮೆಟ್ಟಿದಿ ಕಪಟಿಗಳ ಮಹ ಕಪಟದಿಂ ಕೊಂದಿ ಶ್ರೀರಾಮ3
--------------
ರಾಮದಾಸರು
ಧರಣಿಯಈರಡಿಮಾಡಿದನ | ಭೂ |ಸುರರಿಗೆ ದಾನವ ನೀಡಿದನೆ ||ನೆರೆದು ಕಪಿಹಿಂಡು ಕೂಡಿದನೆ |ಫಣಿ |ಶಿರದಲ್ಲಿ ಕುಣಿ ಕುಣಿದಾಡಿದನಕ್ಕ 2ಉಟ್ಟದ್ದು ಬಿಟ್ಟು ತಾ ನಿಂತಿಹನೆ | ರಂಗ |ದಿಟ್ಟಾದ ಕುದುರೆಯನೇರಿದನೆ ||ದುಷ್ಟರನೆಲ್ಲ ಅಳಿದಿಹನೆ | ನಮ್ಮ |ಬಿಟ್ಟಾದಿ ಪುರಂದರವಿಠಲ ಕಾಣಕ್ಕ
--------------
ಪುರಂದರದಾಸರು
ರಂಗನೆಂಥವನೆಂಥವನಲೆ ತಂಗಿರಂಗನಂತರಂಗ ಹಲವಂಗ ತಿಳಿಯದು ಬ್ರಹ್ಮಾದಿಗಳಿಗೆಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಆಗಮದ ತಂದಿಹನೆ - ರಂಗಬೇಗದಿ ಗಿರಿಯ ಪೊತ್ತಿಹನೆಮೂಗಿಂದ ಭೂಮಿಯನೆತ್ತಿದನೆ - ಕಂದಕೂಗಲು ಕಂಬದಿ ಬಂದ ಕಾಣಕ್ಕ1ಧರೆಯಈರಡಿಮಾಡಿದನೆ - ಭೂಸುರರಿಗೆ ದಾನವ ನೀಡಿದನೆನೆರೆದಕಪಿಹಿಂಡುಕೂಡಿದನೆ -ಫಣಿಶಿರದಲಿ ಕುಣಿ ಕುಣಿದಾಡಿದನಕ್ಕ2ಉಟ್ಟದ್ದು ಬಿಟ್ಟು ತಾ ನಿಂತಿಹನೆ - ರಂಗದಿಟ್ಟಾದ ಕುದುರೆಯನೇರಿದನೆದುಷ್ಟರನೆಲ್ಲ ಅಳಿದಿಹನೆ - ನಮ್ಮಬಿಟ್ಟಾದಿಕೇಶವರಾಯ ಕಾಣಕ್ಕ3
--------------
ಕನಕದಾಸ