ಬಳಿಯೊಳು ಕುಳಿತು ಹೊಗಳುವಗಿಂತ ಪ
ಹುಳಿಯಾಗದೆ ಕಾಯಿಸಿಹಿದಹುದೇ ಮದ
ಅಳಿದಲ್ಲದೆ ಹರಿಯೊಲುಮೆಯು ಬಹುದೇ ಅ.ಪ
ಹಳಿವು ಮನದೊಳಿಹ ಕೊಳೆಯನು ಕಳೆವುದು
ಹಳಿವಿರದಿರೆ ಮದ ಮೊಳೆದೋರುವುದು
ಹಳಿವಿನ ಭಯದಿಂದ ಬೆಳೆವುದು ಶುದ್ಧತೆ
ಹಳಿವು ಸತ್ಕೀರ್ತಿಯ ಬೆಳಗುವ ದೀಪ 1
ಮನದೊಳಸೂಯೆಯ ಕಳೆದು ನಾಲಗೆಯಲಿ
ಇನಿವಾತುಗಳ ಬಿನ್ನಾಣವ ಬೀರಿ
ನಿನಗೆ ಸಮಾನರಿನ್ನಿಲ್ಲಾ ಎಂಬ ಕ್ಷುಲ್ಲ
ಮನುಜನು ಸ್ವಾರ್ಥದಿ ಕೆಡಿಸುವನಯ್ಯ 2
ಹಳಿವಿಂದಲೆ ಕೃಷ್ಣ ಮೂರು ರತ್ನವ ತಂದ
ಹಳಿವಿಂದಲಿ ಸೀತೆ ಕೀರ್ತಿ ಹೊಂದಿದಳು
ಹಳಿದಲ್ಲದೆ ಸತ್ಯ ಹೊರಹೊಮ್ಮದು ಯನ್ನ
ಹಳಿವರನೊದಗಿಸೋ ಮಾಂಗಿರಿರಂಗ 3