ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವೂರು ಈ ಊರು ಯಾವೂರು ಆದರೇನು ಪ ಕಾವೋರು ಶ್ರೀಹರಿ ಲೇಸಾಗಿ ಇರಲೂ ಅ.ಪ ನೀರಜನಾಭನ ಕಾಳಿಂಗ ಮಥನನ ಪಾರಿಜಾತವ ತಂದ ರುಕ್ಮಿಣಿ ಪತಿಯ ಸಾರುತ್ತ ಪಾಡುತ್ತ ಪೊಗಳುತ್ತಬೇಡುತ್ತ ಚರಣಾವ ನೆರೆನಂಬಿ ತಿರುಗುವ ದಾಸರಿಗೆ1 ಆರು ಆಳಿದರೇನು ಆರು ಅಳಿದರೇನು ಮಾರುವ ಧಾರಣಿ ಏರಿದರೇನು ಇಳಿದರೇನು ಊರೆಲ್ಲ ಎದುರಾದರೇನು ಹಿತವಾದರೇನು ಕರಿರಾಜವರದನ ಕೊನೇರಿ ವಾಸನ ಕರುಣವ ಪಡೆದವಗೆ 2 ಕಾಸು ಎಂದರೆ ಪ್ರಾಣ ಸಾಮಾನ್ಯಜನರಿಗೆ ಈ ಶರೀರವ ಕಷ್ಟದಿ ಬಿಡುವಾಗ ಬಾಹುದೈ ಪಾದ ಸೋಮಶೇಖರ ವಂದ್ಯ ಶೇಷಗಿರೀಶನ ದಾಸಾನು ಎಂತೆಂದು ಕುಣಿವವಗೆ 3 ಮೂರುಲೋಕದ ಅರಸು ಸಾರಂಗ ಪಾಣಿಯು ನೀರಜಭವಾಂಡ ಉದಯಕೆ ಕಾರಣ ಅಷ್ಟಕರ್ತ ಸಿರಿಪದ್ಮಜಾಸನ ವಂದ್ಯ ದೇವಾದಿದೇವನ ಮೀರಿ ನಡೆವುದುಂಟೆ ಈ ಚರಾಚರ ಜಗದೊಳು ಮನವೇ4 ಊರೆಲ್ಲನೆಂಟರು ಉಣಬಡಿಸುವರಿಲ್ಲ ಸಿರಿಯಿದ್ದಕಾಲಕ್ಕೆ ಎಲ್ಲರು ನೆಂಟರಯ್ಯ ಸಿರಿತನ ತಾ ತಪ್ಪಿ ಬಡತನ ಬಂದರೆ ನಡಿನಡಿಯೆಂಬರು 5 ಹರಿ ಊರು ನಮ್ಮೂರು ಹರಿವೋರು ನಮ್ಮೋರು ಹರಿನಾಮ ಬಂಧುವು ಹರಿನಾಮ ಬಳಗ ಹರಿಹರಿ ಎಂದರೆ ದುರಿತವು ಪರಿಹಾರ ಹರಿಗುರು ಚರಣವೆ ಪರಗತಿ ಸಾಧನ ಮನವೇ 6 ಕೋರಿ ಕೋರಿದ ವರವ ನೀಡುವ ಪ್ರಭುವು ಸಿರಿಜಯಮುನಿ ಹೃಸ್ಥವಾಯುಗ “ ಶ್ರೀ ಕೃಷ್ಣವಿಠಲಾ” ಸಾರಿದ ಜನರನು ಪೊರೆಯುವ ಕರುಣದಿ ನೆರೆನಂಬುಮನವೆ ಭಯಬೇಡ ಮನವೇ7
--------------
ಕೃಷ್ಣವಿಠಲದಾಸರು
ಎಲ್ಲಿ ಹುಟ್ಟಿದರೇನು ಎಲ್ಲಿ ಮಡಿದರೇನು ಸೊಲ್ಲು ಸೊಲ್ಲಿಗೆ ಬರುತಿರಲು ಪ ಇಹವು ಎಂಬತ್ತನಾಲ್ಕು ಲಕ್ಷ ಜೀವ ರಾಶಿಯಲ್ಲಿ ಮರಳಿ ಮರಳಿ ಹುಟ್ಟಿ ಸತ್ತು ಬರುವ ಜನ್ಮದೊಳಗೆ ಜ್ಞಾನವಿರಲಿ ಕಲ್ಲಿ ಹರಿಯ ಸ್ಮರಣೆ ನಿರುತ ವಿರಲು ಬಂದರದು ಆನಂದ 1 ನೊರಜು ಕೀಟ ಸರಿಸೃಪಾದಿ ಕ್ರಿಮಿ ಮೃಗಾದಿ ಪಕ್ಷಿನಿಚಯ ತರು ಲತಾದಿ ಸಕಲ ಜೀವ ಜಂತು ಜ್ಞಾನ ವಿರಲಿ ಕಾವ ಜನ್ಮದಲ್ಲಿ ಬಂದರೇನು ಅಳಿದರೇನು ಜಿಹ್ವೆ ಕೊನೆಯೊಳಿರಲಿಕದು ಆನಂದ 2 ಕರ್ಮ ವಶದಿ ಕೂಚುಮಾಡಿ ಜನ್ಮಕಿಕ್ಕಿ ಚಾಚಿ ಬರಗುತಿಹಳುಮಾಯೆ ಈಚ - ರಾಚರಂಗಳೆಲ್ಲ ಬ್ರಾಹ್ಮವೆಂದು ತಿಳಿದವರಿಗೆ ಕೀಚಕಾರಿ ಕೋಣೆ ಲಕ್ಷ್ಮೀಪತಿಯ ಸ್ಮರಣೆಯೊಂದು ಆನಂದ 3
--------------
ಕವಿ ಪರಮದೇವದಾಸರು
ಗುರುವಿನ ಒಲುಮೆಯು ಆಗುವ ತನಕ |ದೊರೆಯದಣ್ಣ ಮುಕುತಿ ಪ.ಪರಿಪರಿ ಶಾಸ್ತ್ರವನೇಕವನೋದಿ |ವ್ಯರ್ಥವಾಯಿತು ಭಕುತಿ ಅಪಆರು ಶಾಸ್ತ್ರಗಳನೋದಿದರೇನು |ಮೂರಾರು ಪುರಾಣವ ಮುಗಿಸಿದರೇನು ||ಸಾರಿ ಸಜ್ಜನರ ಸಂಗವ ಮಾಡದೆ |ಧೀರನಾಗಿ ತಾ ಮೆರೆದರೇನು ? 1ಕೊರಳೊಳು ಮಾಲೆಯ ಧರಿಸಿದರೇನು |ಕರದಲಿ ಜಪಮಣಿ ಎಣಿಸಿದರೇನು ||ಮರುಳನಂತೆ ತಾ ಶರೀರಕೆ ಬೂದಿಯ |ಒರಸಿಕೊಂಡು ತಾ ತಿರುಗಿದರೇನು 2ನಾರಿಯರ ಸಂಗವ ಅಳಿದರೇನು|ಶರೀರಕೆ ದುಃಖವ ಪಡಿಸಿದರೇನು|ಮಾರಯ್ಯ ಶ್ರೀ ಪುರಂದರವಿಠಲನ |ಮರೆಯದೆ ಮನದೊಳು ಬೆರೆಯುವ ತನಕ 3
--------------
ಪುರಂದರದಾಸರು