ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ
ಕೋಲು ಶ್ರೀಹರಿಯ ಬಲಗೊಂಬೆ ಕೋಲೆ ಧ್ರುವ
ನಿಗಮ ಚೋರ ರಾಕ್ಷಸನ ಕೊಂದು
ರಕ್ಷಿಸಿ ವೇದವನುಳುಹಿದ ಕೋಲೆ
ರಕ್ಷಿಸಿ ವೇದವನುಳುಹಿದ ಕ್ಷಿತಿಯೊಳು
ಮಚ್ಛಾವತಾರನ ಬಲಗೊಂಬೆ ಕೋಲೆ 1
ಧರ್ಮ ನಡೆಯಲಾಗಿ ವರ್ಮವ ತಾಳಿದ
ಕರ್ಮಹರ ಶ್ರೀ ಮೂರ್ತಿಯ ಕೋಲೆ
ಕರ್ಮಹರ ಶ್ರೀಮೂರ್ತಿಯ ಧರೆಯ ಪೊತ್ತ
ಕೂರ್ಮಾವತಾರನ ಬಲಗೊಂಬೆ ಕೋಲೆ 2
ಧರೆಯ ಕದ್ದಸುರನ ಕೋರೆದಾಡಿಂದ ಸೀಳಿ
ಹೋರಿ ಹೊಯ್ದಾಡಿದ ನರಹರಿ ಕೋಲೆ
ಹೋರಿ ಹೊಯ್ದಾಡಿದ ನರಹರಿ ಧರೆಯ ಗೆದ್ದ
ವರಹಾವತಾರನ ಬಲಗೊಂಬೆ ಕೋಲೆ3
ದುರುಳ ದೈತ್ಯನ ಕೊಂದು
ಕರುಳು ವನಮಾಲೆಯ ಧರಿಸಿದ ಕೋಲೆ
ಕರುಳು ವನಮಾಲೆಯ ಧರಿಸಿದಾ ಹರಿ
ನರಸಿಂಹಾವತಾರನ ಬಲಗೊಂಬೆ ಕೋಲೆ 4
ಪಾದ ಭೂಮಿಯ ಬೇಡಿ
ಹೆಮ್ಮೆಯ ತಾ ಪರಿಹರಿಸಿದ ಕೋಲೆ
ಹೆಮ್ಮೆಯ ತಾ ಪರಿಹರಿಸಿದ ಬ್ರಾಹ್ಮಣನಾಗಿ
ವಾಮನಾವತಾರನ ಬಲಗೊಂಗೆ ಕೋಲೆ 5
ಆಜ್ಞೆಯ ಮೀರದೆ ಅಗ್ರಜಳ ಶಿರ
ಶೀಘ್ರದಿಂದಲಿ ಇಳುಹಿದ ಕೋಲೆ
ಶೀಘ್ರದಿಂದಲೆ ಇಳುಹಿದ ಶಿರವನು
ಭಾರ್ಗವ ರಾಮನ ಬಲಗೊಂಬೆ ಕೋಲೆ 6
ಕಾಮದಿ ಸೀತೆಯನೊಯ್ದ ತಾಮಸದವನ ಕೊಂದು
ನೇಮ ಸ್ಥಾಪಿಸಿದ ಇಳೆಯೊಳು ಕೋಲೆ
ನೇಮ ಸ್ಥಾಪಿಸಿದ ಇಳೆಯೊಳು
ರಾಮಾವತಾರನ ಬಲಗೊಂಬೆ ಕೋಲೆ 7
ದುಷ್ಟ ದೈತ್ಯರನೆಲ್ಲ ಕುಟ್ಟಿ ಮಡುಹಿದ
ನೆಟ್ಟನೆ ಗಿರಿಯನೆತ್ತಿದ ಕೋಲೆ
ನೆಟ್ಟನೆ ಗಿರಿಯನೆತ್ತಿದ ಬೊಟ್ಟಿಲೆ
ಕೃಷ್ಣಾವತಾರನ ಬಲಗೊಂಬೆ ಕೋಲೆ 8
ಕದ್ದು ತ್ರಿಪುರವ ಪೊಕ್ಕು ಇದ್ದ ಸತಿಯರ ವ್ರತ
ಸಿದ್ದಿಯ ತಾನು ಅಳಿದನು ಕೋಲೆ
ಸಿದ್ದಿಯ ತಾನು ಅಳಿದನು ಬುದ್ದಿಯಲಿ
ಭೌದ್ದಾವತಾರನ ಬಲಗೊಂಬೆ ಕೋಲೆ 9
ಮಲ್ಲ ಮಾನ್ಯರನೆಲ್ಲ ಹಲ್ಲು ಮುರಿಯಲಾಗಿ
ನಲ್ಲ ತೇಜಿಯನೇರಿದ ಕೋಲೆ
ನಲ್ಲ ತೇಜಿಯ ನೇರಿದ ಬಲ್ಲಿಹನಾಗಿ
ಕಲ್ಕ್ಯಾವತಾರನ ಬಲಗೊಂಬೆ ಕೋಲೆ 10
ವಸ್ತು ಪರಾತ್ಪರ ವಿಸ್ತಾರ ತೋರಲಾಗಿ
ಹತ್ತಾವತಾರ ಧರಿಸಿದ ಕೋಲೆ
ಹತ್ತಾವತಾರ ಧರಿಸಿದ ಮಹಿಪತಿಯ
ಅಂತರಾತ್ಮನ ಬಲಗೊಂಬೆ ಕೋಲೆ 11