ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅವತಾರ ಹರಿಯ ವಿವರಿಸೆ ಬ್ರಹ್ಮಗಳ ಅಳವಲ್ಲಾ ಪ ಸುರಿವ ಮಳೆ ಹನಿ ಎಣಿಸಬಹುದು ಧರಣಿಯ ರಜ ಕಡಗಣಿಸ ಬಹುದು ಪರಮಾಣು ವರ ವೆಣಿಸಬಹುದು 1 ತಾರೆಯ ಲೆಖ್ಖವ ಹಿಡಿಯಲು ಬಹುದು ನೀರಸ್ವಿಯ ಮಾಪವ ಮಾಡಬಹುದು ಮೇರುಗಿರಿ ತೂಗಿ ನುಡಿಯ ಬಹುದು 2 ಅನಂತ ಗುಣಗಣ ನಿಲಯನುಯನಿಸಿ ಘನಗುರು ಮಹಿಪತಿ ಪ್ರಭು ಅವತರಿಸಿ ಅನುಚರರ ಹೊರೆವನು ಕರುಣಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಓಂ ನಮೋ ರಾ‌ಘವೇಂದ್ರಾಪ ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ ವಾರಿಧಿ ಪೂರ್ಣಚಂದ್ರಾ1 ಶ್ರೀರಾಮ ಜಯರಾಮ ಸ್ವಾಮಿ ಜಯಜಯ ರಾಮಾ ಈರೀತಿ ಸ್ಮøತಿಸಲಿಕೆ ಕೊಡುವಿ ವೈಕುಂಠ ಧಾಮಾ2 ಉಗ್ರ ವೃತ ತಪದಿಂದಾ ಜಪ ಅನುಷ್ಠಾನದಿಂದಾ ಶ್ರೀಘ್ರದಿಂದ ಪಡಕೊಂಬಾ ಫಲಕಾಮ ಸನ್ನಿಧಾ3 ಹನುಮಬಲ್ಲಾ ಹರಬಲ್ಲಾ ಋಷಿನಾರದ ಬಲ್ಲಾ ನೆನವನಾಮ ಸವಿಯಲೋ ಹೇಳಲಿಕೆ ಅಳವಲ್ಲಾ 4 ಮರಳು ಮಾನವರಂತಾ ಎನ್ನ ನೋಡಬ್ಯಾಡ ಡೊಂಕಾ ಗುರುಮಹಿಪತಿ ಸ್ವಾಮಿ ನಾಮ ವೆನೆವ ನಿ:ಶಂಕಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಳ್ಳನ ಹೆಜ್ಜೆಯನು | ಜಗದೊಳು ಕಳ್ಳನೇ ತಾ ಬಲ್ಲ | ಎಲ್ಲರಿಗಿದು ತಾನು | ಭೇದಿಸಿ | ನೋಡಲು ಅಳವಲ್ಲಾ ಪ ನಡುಮನಿಯೊಳು ಬಂದಾ | ಮಂದಿರಕನ್ನವ ಕೊರೆದಾ 1 ಸ್ವಪ್ರಭೆಯಲ್ಲಿ ಮೆರೆವಾ | ಅಲ್ಲಿಯ ಚಿದ್ರತ್ನವ ಕದ್ದಾ | ಸ್ವಾನುಭವದಿ ಮೆದ್ದಾ 2 ಕಳ್ಳರ ಸಂಗತಿಯಾ | ಮಹಿಪತಿ | ನಂದನ ತಾ ಮಾಡಿ | ಕದಿಯುತ ನೋಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬರದು ಬಂದು ದೂರಬ್ಯಾಡರೇ ನೀವೆಲ್ಲಾ ಹರಿಯಾ ನೆಲೆ ತಿಳಿಯಲು ಅಳವಲ್ಲಾ ದುರಳತನ ನಡಿಗೆಂದು ಇವಸಲ್ಲಾ 1 ಮುನಿನೆಂದು ಗುರುತ ವಿಡ ಬ್ಯಾಡಿರಮ್ಮಾ ಮನುಜರಂತೆ ಲೀಲೆ ದೋರುವ ರೀಗಮ್ಮಾ ಮುನಿಮನೋಹರ ದಾಯಕ ಪರಬೊಮ್ಮ ಘನ ಪುಣ್ಯದಿಂದ ಶಿಶು ವಾದನಮ್ಮ 2 ಹುಟ್ಟುತಲಿ ಸ್ವಹಿತದ ನುಡಿಯಾಡಿ ನೆಟ್ಟ ನೆವೆಯ ಮುನಿಗೆ ಹಾದಿಬೇಡಿ ಮುಟ್ಟಿ ಗೋಕುಲಕ ಬಂದದಯ ಮಾಡಿ ಇಷ್ಟರೊಳು ತಿಳಿಯ ಬಾರದಿನ್ನು ನೋಡಿ 3 ಚಿಕ್ಕತನದಲಿ ಮೊಲೆಗುಡ ಬಂದಾ ರಕ್ಕಸಿಯ ಅಸು ಹೀರಿದಾವ ಕೊಂದಾ ಕಕ್ಕಸದ ಕಾಳಿಂಗ ನೆಳೆದು ತಂದಾ ಮಕ್ಕೂಳಾಟಿಕೆ ಇದೇನು ನೋಡಿಛಂದಾ4 ನಿರುತ ತಮ್ಮಾ ತಮ್ಮ ಮನಿಯೊಳಿಹನೆಂದು ಹರಿಯಗುಣ ಹೇಳುವಿರಿ ಎಲ್ಲ ಬಂದು ಅರಿತು ನೋಡಲು ಒಬ್ಬ ಬಹುರೂಪ ವಿಡಿದು ಚರಿಪಗುರು ಮಹಿಪತಿಸ್ವಾಮಿಯಿಂದ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು