ದಾಸನಾದರರೂ ಆದ ಘಟಿಕನಾದ ಸೋಜಿಗಾ
ವಾಸುದೇವನ ಬಿಡದೆ ಭಜಿಸಿ ಸುಖಿಪ ಮತ್ತೀಗಾ ಪ
ಮಂದಿ ಒಳಗೆ ಶೇರದಾಗಿ ನೊಂದು ಬಳಲಿದಾ
ಭವ ತಾಪಂಗಳ ಹೊಂದಿ ಅಳಲಿದಾ
ಮಂದಿರವೆಲ್ಲೆ ಗೃಹಿಣಿ ಸುತರೆಲ್ಲೆಂದ್ಹಲುಬಿದಾ
ಪಾದ ಪಿಡಿದಾನಂದ ತಾಳಿದಾ 1
ಪಿಡಿದ ಕಾರ್ಯ ಬಿಡದೆ ...
ಒಡನೆ ಪೀಡೆ ರಾಶಿಯಾಗಿ ಒಡಲ ಮುಸುಕಿತು
ಕಡು ಬಡತನದುರಿಯು ಅಡರಿ ಒಡಲ ಸುತ್ತಿತು
ಜಡಜನಾಭನೊಲುಮೆಯಿಂದ ಎಡರು ಪೋಯಿತು 2
ಭರದಿ ಸತೀ ಸುತರು ದುಃಖ ಶರದಿ ವಿಹ್ವಲಾ
ಇರದೆ ವ್ಯಾಧಿ ಜಲಂಗಳಾ ಉರಿಯ ಉಮ್ಮಳಾ
ತೆರೆಯ ಕಂಗಳಿಲ್ಲಾ ಗತಿಯು ಧರೆಯ ಕತ್ತಲಾ
ಪೊರೆದ ನರಸಿಂಹವಿಠಲಾ ನಿರುತ ನಿರ್ಮಲಾ 3