ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕಾರಣ ಬಾಯಿ ತೆರೆದಿ - ಪೇಳೆಲೊದಾನವಾಂತಕ ಅಹೋಬಲ ನಾರಸಿಂಹನೆ ಪ ನಿಗಮ ಚೋರನ ಕೊಲಲು ತೆರೆದೆಯೋ ಈ ಬಾಯನಗವ ಬೆನ್ನಲಿ ಹೊತ್ತು ನಡುಗಿ ತೆರೆದೆಯೋ ಬಾಯ ಭೂ-ಮಿಗಳ್ಳನ ಕೊಂದು ಬಳಲಿ ತೆರೆದೆಯೋ ಬಾಯಜಗವರಿಯೆ ಪೇರುರವಿರಿದ ಪ್ರಹ್ಲಾದವರದಅಹೋಬಲ ನಾರಸಿಂಹನೆ1 ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯಮರೆತು ಮಾವನ ಕೊಂದು ನಿಂದೆ - ಇಂಥಇಳಿಯ ಬಾರದ ಭೂಮಿಗಿಳಿದ ನಾರಸಿಂಹ2 ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯಮಾರಪಿತ ಕಾಗಿನೆಲೆಯಾದಿಕೇಶವ ರಂಗಧೀರ ಶ್ರೀನಾಥ ಭವನಾಶ ಪೇಳೋ ಪೇಳುಏತಕೆ ಅಹೋಬಲ ನಾರಸಿಂಹನೆ 3
--------------
ಕನಕದಾಸ
ದಾಸನಾದರರೂ ಆದ ಘಟಿಕನಾದ ಸೋಜಿಗಾ ವಾಸುದೇವನ ಬಿಡದೆ ಭಜಿಸಿ ಸುಖಿಪ ಮತ್ತೀಗಾ ಪ ಮಂದಿ ಒಳಗೆ ಶೇರದಾಗಿ ನೊಂದು ಬಳಲಿದಾ ಭವ ತಾಪಂಗಳ ಹೊಂದಿ ಅಳಲಿದಾ ಮಂದಿರವೆಲ್ಲೆ ಗೃಹಿಣಿ ಸುತರೆಲ್ಲೆಂದ್ಹಲುಬಿದಾ ಪಾದ ಪಿಡಿದಾನಂದ ತಾಳಿದಾ 1 ಪಿಡಿದ ಕಾರ್ಯ ಬಿಡದೆ ... ಒಡನೆ ಪೀಡೆ ರಾಶಿಯಾಗಿ ಒಡಲ ಮುಸುಕಿತು ಕಡು ಬಡತನದುರಿಯು ಅಡರಿ ಒಡಲ ಸುತ್ತಿತು ಜಡಜನಾಭನೊಲುಮೆಯಿಂದ ಎಡರು ಪೋಯಿತು 2 ಭರದಿ ಸತೀ ಸುತರು ದುಃಖ ಶರದಿ ವಿಹ್ವಲಾ ಇರದೆ ವ್ಯಾಧಿ ಜಲಂಗಳಾ ಉರಿಯ ಉಮ್ಮಳಾ ತೆರೆಯ ಕಂಗಳಿಲ್ಲಾ ಗತಿಯು ಧರೆಯ ಕತ್ತಲಾ ಪೊರೆದ ನರಸಿಂಹವಿಠಲಾ ನಿರುತ ನಿರ್ಮಲಾ 3
--------------
ನರಸಿಂಹವಿಠಲರು
ನೀನೆ ಮಾಡಿದ ಲೀಲೆ ಬಲು ಸುಖವೊ | ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ ತೋಟವನು ಮಾಡಿಸಿ ಅದರೊಳಗೆ ಒಂದು ಫಲ | ನಾಟಿಸಲು ಬೆಳೆದ ಫಲ ಪಕ್ವವಾಗೆ | ನೀಟಾದ ಫಲವೆಂದು ಅರಸು ಕೊಯ್ ತರಿಸಲು ತೋಟಿಗಾಗೇನು ದು:ಖ ಅರಸಿನಿಂಗೇನೈಯ1 ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ ಅನಂತ ವೇದಗಳು ಪೊಗಳೂತಿವಕೊ ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ ಅನ್ಯಥಾವಾಗುವದೆ ಅನುಭವಾದಿಗಳಿಗೆ 2 ಸುಖ ದು:ಖವೆ ಎರಡು ನಿನ್ನ ವಶವಾಗಿದೆ ಸಖನಾಗಿ ಸುಖ ಉಣಿಸಲು ಹಿಗ್ಗುವೆ ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ ಅಖಿಳ ನೀನಾವದಿತ್ತದೇ ಬಲು ಲೇಸು 3 ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ | ನಾನು ವ್ಯಧಿಕರಣ ಪೇಳಿದರಾಯಿತೆ | ಆನಂದಕೆ ಹ್ರಾಸ ಬರುವುದೆ ಶಾಶ್ವತ | ಏನಾದರೇನು ನೀನಾಡಿದಾಟವೆ ಸಮ್ಮತ | 4 ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ | ಉತ್ತಮಾ ಪದ ಉಂಟು ಪುಶಿಯಲ್ಲವೋ | ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ | ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ 5
--------------
ವಿಜಯದಾಸ
ಎಂದಿಗೆ ನಾನಿನ್ನು ಧನ್ಯನಹೆನೊಎಂದಿಗೆ ನಿನ್ನ ಚಿತ್ತಕೆ ಬಹೆನೊ ಅಚ್ಯುತನೆ ಪಪುಲು ಮರವು ಗಿಡ ಬಳ್ಳಿ ಕುಲದಲಿಪ್ಪತ್ತು ಲಕ್ಷಜಲ ಜೀವದೊಳಗೆ ಒಂಬತ್ತು ಲಕ್ಷ ||ಅಳಲಿ ಏಕಾದಶ ಲಕ್ಷ ಕ್ರಿಮಿ ಕೀಟದಲಿತೊಳಲಿ ಬಳಲಿದೆನಂಡಜದೊಳು ದಶಲಕ್ಷ 1ಚರಣನಾಲ್ಕರಲಿ ಮೂವತ್ತು ಲಕ್ಷ ಜೀವಿಸಿನರನಾಗಿ ಚರಿಸಿದೆನು ನಾಲ್ಕು ಲಕ್ಷ ||ಪರಿಪರಿಯ ಭವದಿಂದ ಬಲು ನೊಂದೆನೈ ನಿನ್ನಸರಸಿಜಸಂಭವನ ಕಲ್ಪದಲ್ಲಿ2ಎಂಬತ್ತು ನಾಲುಕು ಲಕ್ಷಯೋನಿಗಳಲ್ಲಿಅಂಬುಜನಾಭ ನಿನ್ನ ಲೀಲೆಗಾಗಿ ||ಕುಂಭಿನಿಯೊಳು ಬಂದು ನೊಂದೆನಯ್ಯಾ ಸ್ವಾಮಿಕಂಬುಕಂಧರಸಿರಿಪುರಂದರವಿಠಲ3
--------------
ಪುರಂದರದಾಸರು
ನೆಚ್ಚದಿರೀ ಭಾಗ್ಯ ಆರಿಗೂ ಸ್ಥಿರವಲ್ಲನೆಚ್ಚದಿರೆಚ್ಚರಿಕೆಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆಮೆಚ್ಚು ಕೇಳೆಚ್ಚರಿಕೆ ಪ.ಪೊಡವಿಪರೊಲೂಮೆ ಸುಸ್ಥಿರವೆಂದು ಗರ್ವದಿನೆಡೆಯದಿರೆಚ್ಚರಿಕೆಕೊಡವನಂಧಕ ಪೊತ್ತು ನಡೆವಂತೆ ಅಧಿಕಾರಕಡೆಉಒಲ್ಲ ಎಚ್ಚರಿಕೆಕಡುಚಪಲನು ತಾನೆಂದು ಪರರವಗಡಿ ಸದಿರೆಚ್ಚರಿಕೆಬಡವರೆಡರ ಲಾಲಿಸದೆಮುಂದಕ್ಕಿ ಹೆಚ್ಚುಇಡಬೇಡವೆಚ್ಚರಿಕೆ 1ದೊರೆಗಳ ಒಲವಲಂಯಂತೆಂದಲ್ಲರೊಳುಹಗೆತರವಲ್ಲ ಎಚ್ಚರಿಕೆಉರಗನ ಮುತ್ತಿ ಕಟ್ಟಿರುವೆಯು ಕೊರೆದಂಥತೆರನಪ್ಪುದೆಚ್ಚರಿಕೆಗುರುಹಿರಿಯರ ಕಂಡು ಚರಣಕೆ ಶಿರಬಾಗಿನಡೆಯುತಿರೆಚ್ಚರಿಕೆಸಿರಿಯೆಂಬ ಸೊಡರಿಗೆ ಮಾನ್ಯರ ಅವಮಾನಬಿರುಗಾಳಿ ಎಚ್ಚರಿಕೆ 2ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ ಕೇಳಚ್ಚರಿಕೆನಾಕೇಂದ್ರನಾದರೂ ಬಿಡದಪಕೀರ್ತಿ ಪರಾಕು ಕೇಳೆಚ್ಚರಿಕೆಕಾಕು ಮನುಜರಕೊಂಡೆಯ ಕೇಳೀ ಕೋಪದುದ್ರೇಕ ಬೇಡೆಚ್ಚರಿಕೆಭೂಕಾಂತೆ ನಡು - ನಡುಗುವಳು ನಿಷ್ಠುರವಾದವಾಕುಕೇಳೆಚ್ಚರಿಕೆ3ನಳ - ಮಾಂಧಾತರೆಂಬವರೇನಾದರುತಿಳಿದು ನೋಡೆಚ್ಚರಿಕೆಅಳಿವುದು ಈ ದೇಹ ಉಳಿವೂದೆಂದೇ ಕೀರ್ತಿಇಳೆಯೊಳಗೆಚ್ಚರಿಕೆಅಳಲಿಸಿ ಪರರನು ಗಳಿಸಿದಂಥ ಹೊನ್ನುಉಳಿಯದು ಎಚ್ಚರಿಕೆಉಳಿದಲ್ಪಕಾಲದಿ ಬಡವರಾದವರನುಹಳಿಯದಿರೆಚ್ಚರಿಕೆ 4ಪರಸತಿ - ಪರಧನಕಳುಪಲು ಸಿರಿಮೊಗದಿರುಹುವಳಚ್ಚರಿಕೆನೆರೆ ಛಿದ್ರಕುಂಭದ ನೀರಿನಂತಾಯುಷ್ಯಸರಿಯುವುದೆಚ್ಚರಿಕೆಬರುವ ಹಾನಿವೃದ್ಧಿ ತನ್ನ ಕಾಲದ ಮೀರಲರಿಯದು ಎಚ್ಚರಿಕೆವರದ ಪುರಂದರವಿಠಲರಾಯನಮರೆಯದಿರೆಚ್ಚರಿಕೆ 5
--------------
ಪುರಂದರದಾಸರು