ಕಾವದೇವ ನಿನಗೆ ನಾ ಕೈಮುಗಿದು ಬೇಡ್ವೆ
ಕಾಮಜಪಿತ ಎನ್ನ ಕಾಯಮೋಹ ಬಿಡಿಸೈ ಪ
ಮಸಣಬುದ್ದಿಯ ಮರೆಸು ಪುಸಿನುಡಿಯ ಪರಿಹರಿಸು
ವಸನ ಒಡವ್ಯೆಂದೆಂಬ ವ್ಯಸನ ಕಡೆಹಾಯ್ಸು
ದಿಸೆಗೆಡಿಸಿ ಬಳಲಿಸುವ ಹಸಿವು ತೃಷೆಯನಡಗಿಸಿ
ಹಸನಗೆಡಿಸುವ ಮಮ ರಸನೆರುಚಿ ಕೆಡಿಸು 1
ಅಳದ್ಹೋಗ್ವ ಇಳೆಸುಖದ ಹಲುಬಾಟವನೆ ಬಿಡಿಸು
ಮಲಿನಸಂಸಾರಮಾಯ ಕಳವಳಿಕೆ ತಪ್ಪಿಸು
ಸಲೆ ಸಾಧುಸಂತತಿಯ ಬಳಗದೊಳು ಕೂಡಿಸು
ಹೊಳೆಯಮನಸಿನ ಸಕಲ ಚಲನೆ ದೂರೆನಿಸುತ 2
ದೋಷರಾಶಿಯ ತೊಡೆದು ಮೋಸಪಾಶವ ಕಡಿದು
ಆಸೆ ನಾಶಗೈದು ನಿರ್ದೋಷನೆನಿಸಿ
ಶ್ರೀಶ ಶ್ರೀರಾಮ ನಿಮ್ಮ ಸಾಸಿರ ನಾಮವೆನ್ನ
ಧ್ಯಾಸದಲಿ ಸ್ಥಿರನಿಲಿಸಿ ಪೋಷಿಸನುದಿನದಿ3