ಒಟ್ಟು 11 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಳಗಿರಿಯಲಿ ಬೆಳಗಿಹೆಯ ಕಳವಳಿಸುವ ಮನ ಸುಳಿವದೆನ್ನಮಲ ಕಳೆದಭಯವನಿತ್ತು ನರಹರಿ ಪ. ಅಳಗಿರಿ ಹತ್ತಲು ಝಳ ಝಳ ಮನಸಲಿ ಸುಳಿದು ಭಯವ ಹರಿಸಿ ತೊಳಲಿದ ಭಕ್ತರಘ ಕಳೆದು ಪೊರೆವೆನೆಂದು ಅ.ಪ. ರಂಗನ ಮದುವೆಯೋಳ್ ವೆಂಕಟೇಶನು ಬೊಮ್ಮಗೆ ಮುಂಗಡ ನಿನಗುಣಿಸೆನೆ ಉಂಡನು ಹರೆ ರಂಗನ ಬೆಟ್ಟ ಬಾಷಿಂಗ ನರಸಿಂಗ ಹಿಂಗದೆ ವೆಂಕಟನ ತೋರಿಸೋ ಎನ್ನ ಕಂಗಳಲಿ ನೋಡುವೆ ಮನದಣಿಯೆ 1 ಬಂದ ಭಕ್ತರಿಗಭಯದಿಂದಲೇರಿಸಿ ಮುನ್ನ ತಂದೆ ತೋರಿ ವೆಂಕಟನ್ನ ರನ್ನನ್ನ ನಿಂದು ಶ್ರೀನಿವಾಸ ತಂದೆ ವರಹರಂತೆ ಇಂದೆನ್ನ ಕುಲದೇವತೆ ತಂದು ತೋರಿದೆ ನಿಮ್ಮ ಮೂವರ ರೂಹವ 2 ನಾರದ ವಂದ್ಯನ ನಾರೇರಿಗೊಲಿದನ ಶೂರ ಶ್ರೀ ಶ್ರೀನಿವಾಸನೆಂಬ ಪೆಸರಿನ ನೀ ಸಾರಿರ್ಪೆ ಪೆಸರ್ವ ನಾಮದಲಿ ನಾರಾಯಣನೆಂದ ಬಾಲನಿಗೆ ಒಲಿದನೆ ಆರಿಗು ವಶವÀಲ್ಲ ದಾರುಣನಿನಾಮ ನರಸಿಂಹ3
--------------
ಸರಸ್ವತಿ ಬಾಯಿ
ಕೂಗಿತು ತಾಮ್ರದ ಚೂಡ ಪರ ಇಲ್ಲ್ಲೆಂದು ಪ ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ ಸೂಕ್ಕಿದವರ ಎದೆ ಜರ್ಝರಿಸೆ ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು1 ಒಂದು ಝಾವದಿ ಓಂಕಾರನೆಂದು ಕೂಗೆ ಇಂದಿರಾಪತಿ ವಿಧಿಜನಕನೆಂದೂ ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ ಬಿಂದುಮಾಧವನಲ್ಲದಿಹಪರವಿಲ್ಲವೆಂದು 2 ಎರಡು ಝಾವದಿ ಪುರುಷೋತ್ತಮನೆಂದು ಗರುಡಾಚಲ ನರಸಿಂಹನೆಂದು ಮೂರನೆ ಝಾವಕ್ಕೆ ವೀರನಾರಾಯಣ ಹÀರಿಗಯಾಗದಾಧರನಲ್ಲದಿಲ್ಲವೆಂದು3 ಏಕೋ ನಾರಾಯಣ ದೇವನೆಂದು ಗೋಕುಲಪತಿಯಲ್ಲದಿಹಪರ ಇಲ್ಲವೆಂದು 4 ಯಾಮ ಆರರೊಳು ವ್ಯಾಸಮೂರ್ತಿ ಎಂದು ರೋಮಕೋಟಿ ಬ್ರಹ್ಮರುದ್ರರೆಂದು ಸಾಮಗಾಯನ ಕಾವೇರಿ ರಂಗೇಶ ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು 5 ಏಳು ಝಾವದಿ ವೇಣಿಮಾಧವನೆಂದು ಮೇಲಗೋಟೆ ಚಳ್ಳಾಬಳ್ಳನೆಂದು ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ ಪರ ಇಲ್ಲೆಂದು6 ಶ್ವೇತ ವರಾಹನೆಂದು ಮಾವ ಮರ್ದನ ಜನಾದರ್Àನನೆಂದು ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು 7
--------------
ವಿಜಯದಾಸ
ತುಳಸಿದೇವಿ ಪದಕೇ | ನಾರೇರು | ಬೆಳಗಿರಿ ಆರುತಿಯಾ ಪ ಬೆಳಗುವುದೂ ನಮ್ಮ | ಅಳಗಿರಿ ರಂಗನಲಲನೆ ಶ್ರೀ ತುಳಸಿಗೆ | ಕಲಿಮಲ ಹಾಗೆ ಅ.ಪ. ದಳಪ್ರತಿ ದಳದಲ್ಲಿ | ಶ್ರೀಹರಿ | ನೆಲಸಿಹ ತಾನಲ್ಲಿಒಲಿಮೆಲಿ ಭಕುತರ | ಹಲವು ಸೇವೆಗಳಿಗೊಲಿದು ಅಭೀಷ್ಟವ | ಸಲಿಸುವ ದೇವಿಗೆ 1 ಅಮೃತ | ಕಲಶವ | ಧರಿಸುತ ಧನ್ವಂತ್ರಿಬರಲು ನಯನದಿಂ | ಮರುಳೆ ಆನಂದಕೆವರ ಬಿಂದೋದ್ಭವೆ | ಹರಿ ಪ್ರಿಯೆ ತುಳಸೀ 2 ಇಂಬು ತೋರಿ ಇರಲುಅಂಬುಜಾಕ್ಷ | ಗುರು ಗೋವಿಂದ ವಿಠಲನ |ತುಂಬಿ ದ್ವೈಭವದಿ | ಸಂಭ್ರಮ ಸೇವಿಪ 3
--------------
ಗುರುಗೋವಿಂದವಿಠಲರು
ನಾನು ಎಂಬೊದೆ ದೊಡ್ಡದು ನೀನೆಲ್ಲಿಹೆಯೊ ನಾನೆಲ್ಲಿ ಕಾಣಲಿ ಪ. ನಾನೆಂಬೊ ವ್ಯಾಪಾರ ನೀನೆ ಮಾಡಿಹೆ ಗಾನಲೋಲ ಸರ್ವರಂಗಲಿ ನಾನೇ ಇಹೆನೆಂದು ಅ.ಪ. ಸರ್ವರೊಳಗೆ ನಾನೆಂಬೊದೇ ಇರಲಾಗಿ ಸಾರ್ವಜನಿಕ ನೀನೆಲ್ಲಿಹೆಯೊ ಸರ್ವಧಿಕಾರಿ ನೀನೇ ಎಂಬ ವಿಬುಧರ ಸರ್ವಕಾಲದಿ ಸರ್ವ ಸುರರ ಸಹಿತಿಹೆ ನಾನು 1 ಮಿಂಚಿದ ಪಾಪವ ಮಾಡುವ ಮನುಜರ ವಂಚಕತನದಲಿ ದೇಹದೊಳಿಹೆ ನೀನು ಸಂಚಿತಾರ್ಥದ ಪುಣ್ಯವ ಗಳಿಸಿದ ಭಕ್ತರ ಮಿಂಚಿನ ಹುಳದಂತೆ ಕಂಚಿ ವರದ ಇಹೆ 2 ರಘುಪತೆ ರಾಘವನೆನುತ ಶ್ರೀ ಶ್ರೀನಿವಾಸನ ಬಗೆ ಬಗೆ ಸ್ತುತಿಸದೆ ಅಧಮರಿಗಿಲ್ಲ ಅಘಹರ ಗೋಪಿಗೆ ಮಿಗೆಯಾಟ ತೋರಿಹೆ ನಗಧರ ಅಳಗಿರಿ ಸೊಗಸಿನ ಚೆನ್ನಿಗ ನಾನು 3
--------------
ಸರಸ್ವತಿ ಬಾಯಿ
ನಿನ್ನ ಮಹಿಮೆ ಇದೇನೊ ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಪ ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ ನಿನ್ನ ಕಾಣಿವೇನೆಂಬ ತವಕದಲಿ ಬರಲು ಮಾಣದಲೆ ಅವರ ವಸನ ಸುಲಿಸಿ ತಡೆಯದೆ ಮಾನವನು ಕೊಂಬ ಅಭಿಮಾನಗೇಡಿ 1 ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ2 ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ ಒಲಿಸಿದವರಿಗೆ ನೀನು ಒಲಿದು ಎಲ್ಲಾ ಸುಲಿಗೆಯನು ಯಿತ್ತು ಸಂತತಲವರ ಪಾಲಿಪ ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ3
--------------
ವಿಜಯದಾಸ
ಪಾರ್ಥನರಸಿಯರು ಪ್ರಾರ್ಥಿಸಿ ಕೈಮುಗಿಯೆ ತೀರ್ಥಯಾತ್ರೆಗಳೆಲ್ಲಾ ಕ್ಷೇತ್ರ ಮೂರ್ತಿಗಳು ಗೆಲಿಸಲಿ ಪ. ರಾಮೇಶ್ವರ ಕಂಚಿ ಪ್ರೇಮದಿ ಕುಂಭಕೋಣಸ್ವಾಮಿ ಶ್ರೀ ರಂಗ ತೋತಾದ್ರಿಸ್ವಾಮಿ ಶ್ರೀ ರಂಗ ತೋತಾದ್ರಿಬೇಲೂರು ಚೆನ್ನನ ಮೊದಲೆ ಬಲಗೊಂಬೆ 1 ಅಹೋಬಲ ಮೊದಲಾದ ಆ ವೆಂಕಟಾದ್ರಿ ಅಲ್ಲಿರೊ ಅನಂತ ಅಳಗಿರಿಅಲ್ಲಿರೊ ಅನಂತ ಅಳಗಿರಿ ದರ್ಭಶಯನದೇವರ ಮೊದಲೆ ಬಲಗೊಂಬೆ 2 ದೇವ ಜನಾರ್ಧನ ಕಾಯೊ ಸಾರಂಗಪಾಣಿಭಾವ ಭಕ್ತಿಲೆ ನಮಿಸೇವ ಭಾವ ಭಕ್ತಿಯಲೆ ನಮಿಸೇವ ಚಕ್ರಪಾಣಿ ಬೇಗ ಗೆಲಿಸೆಂದು 3 ಅಕ್ಕ ಶ್ರೀಮುಷ್ಣಿವಾಸ ಮುಖ್ಯಚಲುವರಾಯದೇವಕ್ಕಳಿಗೆ ವರವ ಕೊಡುವೋಳುದೇವಕ್ಕಳಿಗೆ ವರವ ಕೊಡುವೋಳು ಕನ್ಯಾಕುಮಾರಿ ಮುಖ್ಯಳ ಮೊದಲೆ ಬಲಗೊಂಬೆ4 ಛಾಯಾಭಗವತಿ ನಮ್ಮ ಕಾಯೆ ಕರುಣಾಂಬುಧೆಸಹಾಯವಾಗಮ್ಮ ಕಾಲಕಾಲಸಹಾಯವಾಗಮ್ಮ ಕಾಲಕಾಲಕೆಬ್ರಮ್ಹನ ತಾಯ ಗೆದ್ದು ಬರಬೇಕು 5 ಸುಬ್ರಹ್ಮಣ್ಯ ಸಾಸಿ ಒಬ್ಬ ಶ್ರೀ ಕೃಷ್ಣರಾಯ ನಿರ್ಭಯದಿ ಸ್ವಾದಿ ನಿಲಯನೆನಿರ್ಭಯದಿ ಸ್ವಾದಿ ನಿಲಯನೆ ತನುಮನಉಬ್ಬಿ ವಂದಿಸುವೆ ಕರುಣಿಸು6 ಹಂಪಿವಿರೂಪಾಕ್ಷದಿ ನಿಂತು ಪೂಜೆಯಗೊಂಬಯಂತ್ರೋದ್ದಾರಕಗೆ ಒಲಿದವನೆಯಂತ್ರೋದ್ದಾರಕಗೆ ಒಲಿದ ರಾಮೇಶನಕಾಂತೆಯರ ಗೆದ್ದು ಬರಬೇಕು 7
--------------
ಗಲಗಲಿಅವ್ವನವರು
161ಆರಿಗೆ ವಧುವಾದೆ - ಅಂಬುಜಾಕ್ಷಿ |ಕ್ಷೀರಾಬ್ಧಿ ಕನ್ನಿಕೆ - ಶ್ರೀ ಮಹಾಲಕುಮೀ ಪಶರಧಿಬಂಧನ ರಾಮಚಂದ್ರ ಮೂರುತಿಗೊ |ಪರಮಾತ್ಮ ಸಿರಿಯನಂತ ಪದ್ಮನಾಭನಿಗೋ ||ಸರಸಿಜಭವ ಜನಾರ್ದನ ಮೂರುತಿಗೋ |ಎರಡು ಹೊಳೆಯ ರಂಗಪಟ್ಟಣವಾಸಗೊ 1ಚೆಲುವ ಬೇಲೂರು ಚೆನ್ನಿಗರಾಯನಿಗೊ |ಕೆಳದಿ ಹೇಳುಡುಪಿಯ ಕೃಷ್ಣರಾಯನಿಗೊ ||ಇಳೆಯೊಳು ಪಂಢರಪುರ ವಿಠಲೇಶಗೊ ||ನಳಿನಾಕ್ಷಿ ಹೇಳು ಬದರೀನಾರಾಯಣನಿಗೊ 2ಮಲಯಜಗಂಧಿ, ಬಿಂದುಮಾಧವರಾಯಗೊ |ಸುಲಭದೇವ ಪುರುಷೋತ್ತಮಗೊ ||ಫಲದಾಯಕನಿತ್ಯಮಂಗಳನಾಯಕಗೊ |ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ 3ವಾಸವಾರ್ಚಿತ ಕಂಚೀವರದರಾಜ ಮೂರುತಿಗೊ |ಆ ಸುರವಂದ್ಯ ಶ್ರೀಮುಷ್ಣದಾದಿ ವರಹನಿಗೊ ||ಶೇಷಶಾಯಿಯಾದ ಶ್ರೀ ರಂಗನಾಯಕಗೊ |ಸಾಸಿರ ನಾಮದೊಡೆಯ ಅಳಗಿರಿಯೀಶಗೋ 4ಶರಣಾಗತರನು ಪೊರೆವ ಶಾರ್ಙಪಾಣಿಗೊ |ವರಗಳನೀವ ಶ್ರೀನಿವಾಸ ಮೂರುತಿಗೋ |ಕುರುಕುಲಾಂತಕ ರಾಜಗೋಪಾಲ ಮೂರುತಿಗೊ |ಸ್ಥಿರವಾದ ಪುರಂದರವಿಠಲರಾಯನಿಗೊ 5
--------------
ಪುರಂದರದಾಸರು
ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ-ಭಾಗ್ಯದ ಲಕ್ಷ್ಮೀ ಬಾರಮ್ಮಾ ಪಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||ಸಜ್ಜನ ಸಾಧು ಪೂಜೆಯ ವೇಳೆಗೆ |ಮಜ್ಜಿಗೆಯೊಳಗಿನ ಬೆಣ್ಣೆಯಂತೆ 1ಕನಕವೃಷ್ಟಿಯ ಕರೆಯುತ ಬಾರೆ |ಮನಕೆ ಮತಿಯ ಸಿದ್ದಿಯ ತೋರೆ ||ದಿನಕರಕೋಟಿ ತೇಜದಿ ಹೊಳೆಯುತ |ಜನಕರಾಜನ ಕುಮಾರಿ ಸೀತೆ 2ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |ಕಂಕಣ ಕೈಯಾ ತಿರುವುತ ಬಾರೆ ||ಕುಂಕುಮಾಂಕಿತೇ ಪಂಕಜಲೋಚನೆ |ವೆಂಕಟರಾಯನ ಮೋಹದ ರಾಣಿ 3ಅತ್ತಿತ್ತಗಲದೆ ಭಕ್ತರ ಮನೆಯಲಿ |ನಿತ್ಯಮಂಗಲವುನಿತ್ಯಮಹೋತ್ಸವ ||ಸತ್ಯವ ತೋರುವ ಸಜ್ಜನರಿಗೆ ನೀ |ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ 4ಸಕ್ಕರೆ ತುಪ್ಪದ ಕಾಲವೆ ಹರಿಸಿ |ಶುಕ್ರವಾರದ ಪೂಜೆಯ ಕೊಂಬೆ ||ಆಕ್ಕರವುಳ್ಳ ಅಳಗಿರಿ ರಂಗನಶಕ್ತಪುರಂದರವಿಠಲನ ರಾಣಿ5
--------------
ಪುರಂದರದಾಸರು