ತಾಳು ತಾಳೆಲೆ ಮನವೆ ತಾಳ್ಮೆಯ
ತಾಳು ತಾಳೆಲೆ ಮನವೆ ಪ.
ತಾಳು ತಾಳು ನಿನ್ನಾಳುವ ದೊರೆಯಿಹ ಅವ
ಗಾಳಾಗಿ ನೀ ಬಾಳಲು ಕಾಳು ಮಾಡನು ಹರಿ ಅ.ಪ.
ದುರ್ಜನರಾಡಿದ ನುಡಿ ಮನಕದ
ಸಜ್ಜುಗೊಳಿಸಬೇಡ
ಅರ್ಜುನ ಸಖನೇ ನಿನ್ನ ಪರೀಕ್ಷಿಸೆ
ನಿರ್ಜರೇಶನೀಪರಿ ಮಾಡಿಹನೆಂದ 1
ಅಳಕು ಮನವ ಬಿಡು ನಿ
ನ್ನಳದು ನೋಡುವ ಹರಿಯು
ಅಳವಲ್ಲವನ ಲೀಲೆ ಕಂಡ್ಯ
ಝಳ ಝಳ ಮನದಲಿ ಕಳೆ ಕಲೆ ಹರಿರೂಪ
ಪೊಳೆದು ನಿನ್ನ ಮನದಳಕನೆ ದೂಡುವ 2
ಅಂಜದಿರಭಯವ ಅಂಜನಾಸುತ ಸೇವ್ಯ
ಶ್ರೀ ಶ್ರೀನಿವಾಸ ಶ್ರೀರಾಮ ನಿ
ನ್ನಂಜಿಸುವರನು ಅಂಜಿಸೆ ಕಾದಿಹ
ಸಂಜಯ ಪ್ರಿಯ ಕಂಜನಾಭ ಹರಿ 3