ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಗ) ನದಿಸರೋವರಗಳು ನದನದಿಗಳನು ಸ್ಮರಿಸಿರೋ ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ ಪದವಿಗೆ ಸೋಪಾನದಂತಾಗುವದು ಶ್ರೀ ಪದುಮನಾಭನು ವೊಲಿವನು ಪ ಸಿಂಧು ಮರುಧೃತಿ ಹೇಮವತಿ ನೇಮಿ ನೇತ್ರವತಿ ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ ಗರುಡ ಸಾಧರ್ಮಾ ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ ವರದಕಾಗಿಣಿ ಕೃಷ್ಣವೇಣಿ ವೇದವತಿ ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ ಜರಫಣಿ ಭೀಮರಥಿನೀ 1 ಧಾರಿ ತುಂಗಾ ಭದ್ರಿಗಣಪತಿ ಶತಭಾಗ ನಾರದಿ ಉಭಯಪಿನಾಕಿ ಚಿತ್ರವತೀ ಮೂರು ಲೋಕೋದ್ಭವ ಭವಾನೀ ಚಾರು ಗಂಡಿಕೆ ಸರಯು ಶ್ರೋಣಿ ಭದ್ರನೀಲ ಕ್ಷೀರನದಿ ಪಾಪಘ್ನ ಮಹಾನದಿ ಅಘನಾಶಿ ವಾರಿಜಾಪ್ತಾವತಿ ಸುರ್ವಣ ಮುಖರೀ ವಿಸ್ತಾರ ಹಾಟಕ ಅತ್ರಿಣೀ 2 ಸುಲಭ ಮಂದಾಕಿನಿ ಕೌಮೋದಕಿ ಶಾಂತಿ ಕಪಿಲ ಚಂದ್ರಭಾಗ ಅರುಣೀ ಪೊಳೆವ ಕಾಳಾವತಿ ತ್ರಿಪಥಿ ಗೌರಿ ಕುಂತಿ ಅಳಕನಂದನ ಅಮಲವತಿ ಭೀಮಸಂಭೆ ಸಿ ತಾಂಬ್ರ ಪರ್ಣಿಯು ಜಯ ಮಂ ಸತಿ ಸತ್ಯವತಿ ವೈಷ್ಣವೀ 3 ಕನಿಕ ಶುಕ್ಲಾವತೀ ಬಾಹುನದಿಗೋವಿಂದ ಮಿನಗುವ ಭೋಗವತಿ ಕಾಶ್ಯಪಿಂಕಾಳಿಂದಿ ಅನುಸಿಂಧು ಐರಾವತಿ ಋಣ ವಿಮೋಚನ ಮಯೂರ ಸಂಭವೆ ನಿತ್ಯ ಪುಷ್ಕರಣಿ ಪಯೋ ಶ್ವಿನಿ ಮಹಾಪಗ ಭದ್ರ ಭೈರವಿ ವಿಚಿತ್ರ ನದಿಗಳನು 4 ಅರುಣೋದಯಲೆದ್ದು ಧರೆಯೊಳುಗಳ್ಳ ಬಲು ಸರಿತಗಳ ನೆನೆದು ಪುಳಕೋತ್ಸವದಲಿ ಪರಮ ಧನ್ಯರಾಗಿ ಪಾಪಗಳ ಪೋಗಾಡಿ ನಿರುತ ಮಾರುತ ಮತದಲೀ ಚರಿಸಿ ನಿಜಭಕುತಿಯಲಿ ಹಗಲು ಇರಳು ಇನಿತು ಸಿರಿಯರಸ ವಿಜಯವಿಠ್ಠಲನ ಚರಣಾಂಬುಜವ ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ ಕರಣದಲಿ ತಿಳಿದು ನಿತ್ಯಾ5
--------------
ವಿಜಯದಾಸ
ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ನದಿಗಳು ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ ನೀ ಮುದ್ದು ಮಂಗಳಾಂಗನ ಮುಖ ತೋರಿಸೆ ಗಂಗಾದೇವಿ ಪ ವಾಮನನಖದಿಂದ ಒಡೆದÀು ಬ್ರಹ್ಮಾಂಡ ಬಹಿರಾವರಣದಿಂದಿಳಿದೆಯೆ ಬಹಿರಾವರಣದಿ ಇಳಿದು ನಿರಂಜನ ಆಲಯದೊಳು ಬಂದೆ ಭರದಿಂದ1 ಹರಿಪಾದೋದಕವಾಗಿ ಹರಿದು ಬಂದೆಯೆ ನೀನು ಹರನ ಜಟೆಯಲ್ವಾಸವ ಮಾಡಿ ಹರನ ಜಟೆಯಲ್ವಾಸವ ಮಾಡಿ ನೀ ಮೇರುಗಿರಿಯಲ್ಲಿ ನಾಲ್ಕು ಸೀಳಾದೆಯೆ 2 ಜಕ್ಷು ಭದ್ರಾ ಸೀತಾ ಎಂಬ ಮೂವರ ಬಿಟ್ಟು ಭರತಖಂಡಕೆ ಬಂದೆ ಬಹುದೂರ ಭಾಗಮ್ಮ ಪ್ರತ್ಯಕ್ಷ ಅಳಕನಂದನ ತಾಯಿ 3 ಸಾಗರನರಸಿ ಪ್ರಯಾಗದಿ ಮರದ ಬಾಗಿಣವನು ಕೊಂಬೆ ವೇಣಿಯ ದಾನ ಕೊಂಬೆ ವೇಣಿಯ ದಾನ ಮುತ್ತೈದೇ- ರಾಗಿರೆಂದ್ಹರಸಿ ಪೂಜೆಯಗೊಂಬೆ 4 ಸಗರನ ಮಕ್ಕಳ ಅಗಿವೆ ಕಡಿವೆನೆಂದು ಭಗೀರಥನ್ಹಿಂದೆ ಬಂದೆಯೆ ನೀನು ಭಗೀರಥನ್ಹಿಂದೆ ಬಂದೆಯೆ ಹಿಮಾಲಯ ದಾಟಿ ಜಾಹ್ನವಿ 5 ಗಮನ ಮಾಡುವ ಗಂಗಾ ಸಮನಾಗಿ ಹರಿದೆ ಸಂಗಮಳಾಗಿ ಸಮನಾಗಿ ಹರಿದೆ ಸಂಗಮಳಾಗಿ ತ್ರಿವೇಣಿ ಯುಗಳ ಪಾದಗಳಾರು ತೋರಿಸೆ 6 ಭೀಷ್ಮನ ಜನನಿ ಭೀಮೇಶ ಕೃಷ್ಣನ ಪುತ್ರನ(ತ್ರಿ ನೀ?) ದೋಷವ ಕಳೆದÀು ಸಂತೋಷದಿ ದೋಷವ ಕಳೆದÀು ಸಂತೋಷದಿ ಸಾಯುಜ್ಯ ಬ್ಯಾಸರದಲೆ ಕೊಟ್ಟು ಸಲಹಮ್ಮ 7
--------------
ಹರಪನಹಳ್ಳಿಭೀಮವ್ವ
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಪ ಉಪೇಂದ್ರ ಭಗವಂತ ಪಟುರೂಪ ಧರಿಸಿ ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ 1 ಕಮಲವನು ತೊಳಿಯಲಾವೇಗದಿಂದ ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ2 ಧ್ರುವಲೋಕಕಿಳಿದು ಅಮರಾಲಯವ ಸಾರಿದೆ ತವಕದಿಂದಲಿ ಧುಮುಕಿ ಚತುರಭಾಗವಾದೆ ಭವ ಪರಿಹರಿಸಿ ಭಾಗೀರಥಿ ಎನಿಸಿದೆ 3 ಭವದೊರೆ ಭಗೀರಥಗೆ ಒಲಿದು ಬರುತ ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ4 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಉದ್ಧಾರ ನಿಃಸಂದೇಹಾ ಮಜ್ಜನ ಪೊಳೆವ ವೈಕುಂಠಪುರ ಅವನ ಹೃದಯದಲಿ5 ಕುಲಪ್ರವಹವಾಗಿದ್ದ ಜೀವರ ಪುಣ್ಯವನು ಹೇಳಿ ಕೇಳುವವನಾರು ಮೂಲೋಕದಿ ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು 6 ದೇಶದೇಶದಲಿಂದ ಬಂದ ಸುಜನರ ಪಾಪ ಮಾಧವ ಚಲುವ ಶ್ರೀನಿವಾಸ ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ 7
--------------
ವಿಜಯದಾಸ