ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲೆ ಮನವೆ ಚಲಿಸದಿರು ಕಂಡಕಡೆಗೆ ನಿಲು ನೀನು ಸ್ಥಿರವಾಗಿ ಧ್ಯಾನ ಮಂಟಪದೊಳಗೆ ಪ ಕಲುಷಪೂರಿತವಾದ ಬಲೆಯ ದೂರಕೆ ದೂಡು ಒಲಿದು ರಕ್ಷಿಪುದೆಂದು ಜಲಜಾಕ್ಷನನು ಬೇಡು ಅ.ಪ ಆರು ಮಂತ್ರಿಗಳುಂಟು ಮೂರು ದುರ್ಗಗಳುಂಟು ಮೂರು ಮತ್ತೆರಡಶ್ವ ಸಹಿತ ನೀನು ದೂರ ದೂರದ ಸಿರಿಯ ತರುವೆ ನಾನೆಂದೆನುವೆ ಧೀರ ನೀನೇ ಎಂಬೆ ಮರುಳತನದಿಂದೆ 1 ನಡೆಯೆ ಸತ್ಪಥವೆಂಬೆ ನುಡಿಧರ್ಮವೆಂದೆಂಬೆ ಕುಡುಕನಂತತ್ತಿತ್ತ ಅಲೆಯುತಿರುವೆ ಸಿಡಿಲು ಬಡಿವುದ ಮರೆತು ದುಡುಕಿ ನಿರ್ದಯವಾಂತು ಕೆಡಬೇಡ ಮಾಂಗಿರಿಯ ಅಡಿವಿಡಿದು ಸುಖಿಯಾಗು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್