ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿಮಂದಿರದಲಿ ನೀ ಸುಖವಾಗಿ ಬಾಳು ನಿನ್ನ ಪತಿಗಹಿತಕರ ಸಂಗ ತ್ಯಜಿಸಮ್ಮ ಮಗಳೆ ಪ ಉದಯ ಪೂರ್ವಕೆ ಎದ್ದು ಹರಿಯ ಸ್ಮರಣೆಯ ಮಾಡು ಮುದದಿ ಗುರುಹಿರಿಯರಿಗೆ ವಂದನೆಯ ಮಾಡು ಮದನನಯ್ಯನ ಭಜಕರನು ಕಂಡು ನಲಿದಾಡು ಪದುಮನಾಭಗೆ ಪಟ್ಟದರಸಿಯಾಗಮ್ಮ1 ರತ್ನಾಕರನು ತಂದೆ ಎನುತ ಗರ್ವಿಸಬೇಡ ಮತ್ತೆನಗೆ ಸರಿಯಾರು ಎಂದೆನಲು ಬೇಡ ಚಿತ್ತಜನಯ್ಯನ ಮನವರಿತು ನಡೆಯಮ್ಮ ಹೊತ್ತು ಹೊತ್ತಿಗೆ ಪತಿಯ ಸೇವೆ ನಿರತಳಾಗಿ2 ಬಿಟ್ಟಕಂಗಳು ಮುಚ್ಚದವನು ಎಂದೆನಬೇಡ ಬೆಟ್ಟ ಬೆನ್ನಿಲಿ ಪೊತ್ತನೆನಲು ಬೇಡ ಗಟ್ಟಿ ನೆಲವನು ಕೆದರಿ ಅಲಸಿದನೆನಬೇಡ ಹೊಟ್ಟೆಯ ಕರುಳನು ಬಗೆದವ ನೆನೆಬೇಡ 3 ಕಡುಲೋಭಿದಾನ ಬೇಡಿದನು ಎಂದೆನಬೇಡ ಪೊಡವಿಪಾಲಕರ ಕೆಡಹಿದನು ಎನಬೇಡ ಮಡದಿಯ ತಂದ ಕಪಿವಡೆಯನು ಎನಬೇಡ ತುಡುಗತನದಿ ಪಾಲ್ಬೆಣ್ಣೆ ಚೋರನೆಂದೆನಬೇಡ 4 ಉಡಿಗೆ ಉಡದ ಮಾನಗೇಡಿ ಇವನೆನಬೇಡ ತುಡಗತನದಿ ರಾಹುತನಾದನೆನಬೇಡ ಕಡಲಶಯನ ಕಮಲನಾಭ ವಿಠ್ಠಲನ ಗುಣ ಒಡೆದು ಪೇಳದೆ ಗುಟ್ಟಾಗಡಗಿಸಿ ನಡೆಯಮ್ಮ 5
--------------
ನಿಡಗುರುಕಿ ಜೀವೂಬಾಯಿ
ಆದದ್ದೆಲ್ಲ ಒಳತೇ ಆಯಿತು ನಮ್ಮ |ಶ್ರೀಧರನ ಸೇವೆಯ ಮಾಡಲು | ----- ಪಸಾಧನ ಸಂಪತ್ತಾಯಿತು ---------- ಅ.ಪದಂಡಿಗೆ ಬೆತ್ತ ಹಿಡಿಯುವುದಕ್ಕೆ |ಮಂಡೆತಗ್ಗಿಸಿ ನಾಚುತಲಿದ್ದೆ ||ಹೆಂಡತಿ ಸಂತತಿ ಸಾವಿರವಾಗಲಿ |ದಂಡಿಗೆ ಬೆತ್ತ ಹಿಡಿಸಿದಳಯ್ಯ 1ಗೋಪಾಳ ಬುಟ್ಟಿ ಹಿಡಿಯುವುದಕ್ಕೆ |ಭೂಪತಿಯಂತೆ ನಾಚುತಲಿದ್ದೆ ||ಆ ಪತ್ನಿಯು ತಾ ಪ್ರೀತಿಯಿಂದಲಿ |ಗೋಪಾಳ ಬುಟ್ಟಿಯ ಹಿಡಿಸಿದಳಯ್ಯ 2ತುಳಸಿಮಾಲೆಯ ಹಾಕುವುದಕ್ಕೆ |ಅಲಸಿಕೊಂಡು ನಡೆಯುತಲಿದ್ದೆ ||ಜಲಜಾಕ್ಷಿಯು ಶ್ರೀ ಪುರಂದರವಿಠಲ |ತುಳಸಿ | ಮಾಲೆಯ ಹಾಕಿಸಿದಳು 3
--------------
ಪುರಂದರದಾಸರು
ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|ಕೊಡು ಕಂಡೆಯಾ ಹರಿಯೆ ಪಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |ಸಡಗರದಿಂ ಭಾಗ್ಯ ಬೇಡಲಿಲ್ಲ ||ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |ನಾನಾಯೋನಿಗಳಲ್ಲಿ ಬಳಲಿ ಬಂದೆ ||ದೀನರಕ್ಷಕ ನೀನೆ ದಯದಿಂದಲೆನಗಿನ್ನು |ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |ಅಲಸಿ ಕೋಟಲೆಯ ಸಂಸಾರದಿಂದ |ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |ಸಲಹೊ ದೇವರ ದೇವಪುರಂದರವಿಠಲ3
--------------
ಪುರಂದರದಾಸರು
ತಪ್ಪುಗಳೆಲ್ಲ ಪರಿಹರಿಸುವ ನಮ್ಮಪ್ಪನಲ್ಲವೆ ನೀನುಒಪ್ಪಿದ ಬಳಿಕವಗುಣ ನೋಡದ ತಿಮ್ಮಪ್ಪನಲ್ಲವೆ ನೀನು ಪ.ಬೆಳಗಿನ ಜಾವದಿಹರಿನಿನ್ನ ಸ್ಮರಣೆಗೆಹಳವಿಗೆಗೊಳ್ಳದ ತಪ್ಪುಮಲಮೂತ್ರವಿಸರ್ಜನೆಯ ಮೃತ್ತಿಕೆಯಲಿಮಲಿನವ ತೊಳೆಯದ ತಪ್ಪುತುಲಸಿ ವೃಂದಾವನ ಗೋಸೇವೆಗೆಅಲಸಿಕೆ ಮಾಡುವ ತಪ್ಪುನಳಿನಸಖೋದಯಕಘ್ರ್ಯವ ನೀಡದಕಲಿವ್ಯಾಸಂಗದ ತಪ್ಪು 1ದಿನದಿನ ಉದಯದಿ ಸ್ನಾನವ ಮಾಡದತನುವಂಚನೆಯ ತಪ್ಪುಕ್ಷಣ ಶ್ರೀ ಹರಿಗುಣ ಜಿಜ್ಞಾಸಿಲ್ಲದಮನವಂಚನೆಯ ತಪ್ಪುಮುನಿಸುರ ಭೂಸುರರಾರಾಧಿಸದಧನ ವಂಚನೆಯ ತಪ್ಪುವನಜಾಕ್ಷನೆ ನಿನ್ನಪಾದವಿಮುಖ ದುರ್ಜನ ಸಂಸರ್ಗದ ತಪ್ಪು 2ಕಣ್ಣಲಿ ಕೃಷ್ಣಾಕೃತಿ ನೋಡದೆಪರಹೆಣ್ಣಿನ ನೋಟದ ತಪ್ಪುನಿನ್ನ ಕಥಾಮೃತ ಒಲ್ಲದೆ ಹರಟೆಯಮನ್ನಿಸುವ ಕಿವಿ ತಪ್ಪುಅನ್ನವ ನಿನಗರ್ಪಿಸದಲೆ ಹರುಷದಿಉಣ್ಣುವ ನಾಲಿಗೆ ತಪ್ಪುಚಿನ್ಮಯ ಚರಣಕ್ಕೆರಗದೆಉನ್ಮತ್ತರ ನಮಿಸುವ ತಲೆ ತಪ್ಪು 3ಶ್ರೀ ನಿರ್ಮಾಲ್ಯದ ವಿರಹಿತ ಸುರಭಿಯಘ್ರಾಣಿಪನಾಸಿಕತಪ್ಪುಆನಂದದಿ ಸಂಕೀರ್ತನೆ ಮಾಡದಹೀನವಿವಾದದ ಬಾಯ ತಪ್ಪುಶ್ರೀನಾಥಾರ್ಚನೆ ಇಲ್ಲದೂಳಿಗಮಾಣದಿರುವ ಕೈ ತಪ್ಪುಶ್ರೀನಾರಾಯಣ ವೇಶ್ಮನಿಗೈದದನಾನಾಟನಪಾದತಪ್ಪು4ಯಜ್ಞಾತ್ಮಗೆ ಯಜ್ಞಾರ್ಪಿಸದೆ ಸುಖಮಗ್ನಾದ ಮೇಢ್ರದ ತಪ್ಪುಅಗ್ರದ ಕರ್ಮವ ಶೌಚವ ಜರಿದ ಸಮಗ್ರ ಗುಹ್ಯಕೃತ ತಪ್ಪುಅಜ್ಞಾನ ಜ್ಞಾನದಿ ಕ್ಷಣಲವಶತವೆಗ್ಗಳಘ ಗಳಿಸುವ ತಪ್ಪುಯಜೆÕೀಶ ಪ್ರಸನ್ವೆಂಕಟ ಕೃಷ್ಣ ನಾಮಾಗ್ನಿಗೆ ತೃಣವೀ ತಪ್ಪು 5
--------------
ಪ್ರಸನ್ನವೆಂಕಟದಾಸರು