ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ವಾದಿರಾಜ ಯತಿಯಾ ನೆನಸುವದು ನಿರುತ ಕರುಣಿಪ ಮತಿಯಾ ಪ ಆರ್ತನಾ ಸರಿದಾರು ನವನ ವರ್ತಮಾನವನೆ ಕೇಳಿ ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ 1 ದುರಿತ ರಾಶಿಗಳ ಶೀಳಿ ಹೊರದೆಗೆದು ಮರುತ ಶಾಸ್ತ್ರವನೆ ಪೇಳಿ ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ ಧರಿಯೊಳಗೆ ಮೆರೆದೆ ಧೀರ 2 ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ ನಂದ ಸತ್ಕೀರ್ತಿ ಭೂಪ ವಂದಿಸಿದವರಿಗೆ ಲೇಸಾಗಿ ಕೊಡುವ ಮು ಕುಂದನಂಘ್ರಿಯ ದಾಸ 3 ತೀರ್ಥಯಾತ್ರೆಯನೆ ಮಾಡಿ ಹರಿ ಭೇದಾರ್ಥದಿಂದಲೆ ಕೊಂಡಾಡಿ ಅರ್ಥಾಸೆಗಳ ಈಡಾಡಿ ಹಯಮೊಗನ ಅರ್ಥಿಯಿಂದಲಿ ಪೂಜಿಪ4 ತ್ರಿಜಗದೊಳಗಿನವರಿಗೆ ಎಣೆಗಾಣೆ ಕುಜನ ಮತ ಸೋಲಿಸುವಲ್ಲಿ ವಿಜಯವಿಠ್ಠಲನೆ ದೈವವೆಂದು ಧ್ವಜವೆತ್ತಿ ತಿರುಗಿದ ಮುನಿಪ 5
--------------
ವಿಜಯದಾಸ
ಚರಣವದೋರಿ ಸಲಹೋ ಮುರಾರಿ | ಧರಿಯೊಳು ಸಾರಿದವರ ಸಹಕಾರಿ ಪ ಸುರಧೇನು ನೀನು | ಕರೆದುಂಬೆ ನಾನು | ಸುರತರು ನೀನು | ಆಶ್ರಯಿಸುವೆ ನಾನು 1 ಸುರಮಣಿ ನೀನು | ಅರ್ಥಾರ್ಥಿ ನಾನು | ದೊರೆಯನ್ನ ನೀನು | ಸುಖಿಸುವೆ ನಾನು 2 ಗುರುಮಹಿಪತಿ ಪ್ರಭು | ಪರದೈವ ನೀನು |
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಿನವೇ ಸುದಿನವು ಧ್ಯಾನ ಮಾಳ್ಪ ಜನವೇ ಸುಜನವು ಪ ಮಹಿಮೆಯ ಪಾಡುವ ಅ.ಪ. ಯುಕ್ತದಿ ಕೂಡಿ ಆಯುಕ್ತವಿರಕ್ತಿಯ ಮಾಡಿ ಭಕ್ತಿಗಾಗಲಿ ಭವಮುಕ್ತಿಗಾಗಲಿ ಹರಿಭಕ್ತರನೊಡಗೂಡಿ ರಕ್ತಿಲಿ ಪಾಡುವ ದಿನವೇ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿ-ಶ್ರುತಿಯ ಕಥೆಪೇಳವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನ್ನು ವ್ಯರ್ಥಮಾಡದಲೆ ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘುರಾಮ ನಾಮಗಳ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರುಹರ ನಾಮಗಳನು ಹರಿದಾಸರೊಡಗೂಡಿ ಹರುಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ ದಿನವೇ 5
--------------
ಸರಗೂರು ವೆಂಕಟವರದಾರ್ಯರು
ದಿನವೇ ಸುದಿನವು ಧ್ಯಾನಮಾಳ್ಪ ಜನವೇ ಸುಜನವು ಪ ಘನತರ ಹರಷದಿ ಮನದಣವಂದದಿ ಮನಸಿಜನಯ್ಯನ ಮಹಿಮೆಯ ಪಾಡುತ ಅ.ಪ ಯುಕ್ತದಿ ಕೂಡಿ ಅಯುಕ್ತ ವಿರಕ್ತಿಯ ಮಾಡಿ ಭುಕ್ತಿಗಾಗಲಿ ಭವಮುಕ್ತಿಗಾಲಿ ಹರಿ ಭಕ್ತರ ನೋಡಗೂಡಿ ರಕ್ತಿಲಿ ಪಾಡುವ 1 ತಾಳ ತಂಬೂರಿಯ ತಪ್ಪದೆ ತಂದು ಮೈಳೈಸಿಶ್ರುತಿಯ ಶ್ರೀಲಾಲಮನ ಕಥೆ ಪೇಳುವ ಕೇಳುವ 2 ಅರ್ಥಾಪೇಕ್ಷೆಯಲಿ ಕಾಲಗಳನು ವ್ಯರ್ಥಮಾಡದಲೆ ಪಾರ್ಥಸಾರಥಿಯನ್ನು ಪ್ರಾರ್ಥನೆ ಮಾಡುವ 3 ಕಾಮಕ್ರೋಧಗಳ ಕಳೆವ ರಘು ರಾಮ ನಾಮಗಳ ಪ್ರೇಮದಿಂ ಪಾಡುತ್ತ ರೋಮಾಂಚದೊಡಗೂಡಿ ಭವ ತಾಮಸ ಕಳೆಯುವ 4 ಹರಿವಾಸರವನು ಸಾಧಿಸಿ ಮುರಹರ ನಾಮಗಳು ಹರಿದಾಸರೊಡಗೂಡಿ ಹರಷದಿಂದೆಚ್ಚತ್ತು ವರದ ವಿಠಲ ನರಹರಿಯೆಂದು ಪಾಡುವ 5
--------------
ವೆಂಕಟವರದಾರ್ಯರು
ಬಾಗಿ ಭಜಿಸಿರೋ | ಭಾಗಣ್ಣ ದಾಸರನಾ | ನಮಿಪರ ಬೀಷ್ಟದನಾ ಪ ಭೋಗಿ ಭೂಷಣ ಸುತನಾ | ಮನ್ಮಥ ಸದೃಶನನಾ ಅ.ಪ. ಮುರಹರ ನಾಮಕನರಸಿಯುದರದಲ್ಲಿ | ಜನುಮತಾಳಿ ಅಲ್ಲೀಸುರಪುರ ವೈದಲು ತನ್ನ ಪಿತನು ಮುಂದೇ | ಸಂಕಾರ ಪುರಸೇರ್ದೇ | ವರಚಿಂತಲ ವೇಲಿಲಿ ಧ್ಯಾನಕಾಗಿ ನಿಂದು | ಗಾಯಿತ್ರಿ ಜಪಿಸು ತಂದು ವರಮಾರುತಿ ಗುಡಿಯೊಳು ನೆಲಿಸುತ್ತಾ | ವರಪಡೆದೆಯೊ ಜಪಿಸುತ್ತಾ 1 ತ್ರಿಲಿಂಗಪುರಕೇ ಕವಿಯೈತರಲೂ | ಪಂಡಿತರನು ಗೆಲಲೂಬಲುಚಿಂತಿಸಿ ಜನಸಭೆಯ ಸೇರಿ ಆಗ | ತೀರ್ಮಾನಿಸಿ ವೇಗ |ಕಳುಹಿದರವನ ಭಾಗಣ್ಣನ ಬಳಿಗಾಗೀ | ಬಲವನು ತೋರೆನಲಾಗೀ ನಿಲಲಾರದೆ ತೆರಳಿದ ಭೀತಿಯಲೀ | ವರಕವಿ ಮೆರೆದನು ಕೀರ್ತಿಯಲೀ2 ಪರಿ ನಿತ್ಯ ಶ್ರೀ ವೆಂಕಟಕೃಷ್ಣನ ಪಾಡುತ್ತಾ | ನರ್ತನ ಗೈಯ್ಯುತ್ತಾ ಸುತ್ತಿ ಬರುವ ಜನರ ದೃಷ್ಠಾರ್ಥಾ | ಪೇಳುತ ಗಳಿಸಿದೆ ಅರ್ಥಾ 3 ತಿಮ್ಮಣ್ಣ ದಾಸಾರ್ಯರ ಬಳಿಯಲೀ | ಆದವಾನಿಯಲ್ಲೀನೆಮ್ಮದಿಲಿದ್ದಲ್ಲಿಂದಲಿ ತೆರಳಿ | ಕಾಶೀಶನ ಬಳೀಕ್ರಮ್ಮಿಸಿ ದಿನ ಗುರು ಸೇವೆಯಲ್ಲಿ ಬಹಳಾ | ಮೆಚ್ಚಿಸಿ ಗುರುಗಳ | ಹಮ್ಮಿನ ವಿಜಯರಿಂದುಪದೇಶಾ | ಗೋಪಾಲ ವಿಠ್ಠಲದಾಸ 4 ವೆಂಕಟರಾಮಗೆ ರಾತ್ರಿಕಾಲದಲ್ಲೀ | ಆಘ್ರ್ಯವ ಕೊಡುವಲ್ಲೀ ಪಂಕಜಮಿತ್ರನ ತೋರುತಲವರೀಗೆ | ಸಂಶಯ ಕಳೆದವಗೆ | ವೆಂಕಟೇಶನೊಳ್ ಭಕುತಿ ಪುಟ್ಟುವಂತೆ | ಸೇವೆ ವಿಧಿಸಿ ಅಂತೇ ಪಂಕಜನಾಭನ ಕೀರ್ತನಾದಿಗಳನೂ | ಮಾಡಿ ಕಳೆದ ದಿನಗಳನೂ 5 ವೆಂಕಟೇಶನ ಪರೋಕ್ಷಿ ದಾಸರೆಂದು | ಪೇಳೆ ಜನರು ಅಂದು ವೆಂಕಟ ನರಸಿಂಹಾಚಾರ್ಯಾ | ದಾಸರೊಳು ಮಾತ್ಸರ್ಯಾ | ಶಂಕೆಪಟ್ಟು ಭಜನೆಯೊಳಿರುವಂದೂ | ಮುಂದಿನ ಪೀಠದಲೊಂದೂ ಲಂಕೆಯ ಪುರವನು ದಹಿಸಿದನಾ | ಕಂಡರು ಕೋಡಗನಾ 6 ವಾಸುದೇವ ವಿಠಲನ್ನಾ | ಕಾಣುತಲಿ ಮುನ್ನಾ ಅಂಕಿತ ನಾಮದಿ ಪದಪದ್ಯಾ | ರಚಿಸಿ ಮೆರೆದ ನಿರವದ್ಯಾ7 ರೋಗದಿ ಶ್ರೀನಿವಾಸಾಚಾರ್ಯಾ | ಬರಲಾಗ ದಾಸಾರ್ಯ ಜಾಗ ಗುಡಿಯಲಿ ಶುದ್ಧಿ ಮಾಡುತಿರಲು | ಕೇಳಿ ಗೃಹಕೆ ಹೋಗಲು | ವೇಗದಿ ಮಂತ್ರಿತ ರೊಟ್ಟಿ ತಿಂದು ಇನ್ನ | ಕಳೆದ ರೋಗವನ್ನ ನಾಗಶಯನ ಶ್ರೀ ಜಗನ್ನಾಥ ವಿಠಲನ್ನಾ | ತೋರ್ಯರ್ಧಾಯು ಇತ್ತವನ್ನಾ 8 ಮುದದಲಿ ನಿಜಜನರನು ಪೊರೆಯೇ | ಶಾಸ್ತ್ರರ್ಥವ ನೊರೆಯೆ ಪದ ಸುಳಾದಿಯನೆ ಬಲುರಚಿಸೀ | ಭಕುತಿ ಮಾರ್ಗ ಬೆಸಸೀ | ಸುಧೆಸಮವೆನೆ ಹರಿಕಥೆಸಾರ | ರಚಿಸಿ ಜನೋದ್ಧಾರ ಮುದಮುನಿ ಮತಗ್ರಂಥಗಳೊರೆದೇ | ಸಚ್ಛಾಸ್ತ್ರಪೊರೆದೇ 9 ಹತ್ತೆಂಟು ಒಂದು ಮೊಗದ ರೂಪ | ಶ್ರೀ ವಿಶ್ವರೂಪನಿತ್ಯ ಚಿಂತಿಪ ತನ್ನ ಬಿಂಬರೂಪ | ಅಂಶದಿಹನು ಗಣಪಚಿತ್ರಿಸಿರುವ ಚಕ್ರಾಬ್ಜ ವಲಯವನ್ನ | ಧೇನಿಸಿ ವಿಜಯರನ್ನಕೃತ್ಯ ಪೇಳಲೊಶವೆ ಅಪರೋಕ್ಷಿಗಳ | ಮಂದನು ನಾ ಬಹಳ 10 ಚಿತ್ರಮಾರ್ಗದಿ ಭ್ರಾತೃವರ್ಗವನ್ನ | ದೂರಕಳಿಸಿ ಮುನ್ನಚಿತ್ರಭಾನು ಸಂವತ್ಸರದಲ್ಲಿ | ದಶಮಾಸಾಷ್ಟಮಿಲೀ |ಚಿಂತಿಸುತ ಯೋಗಮಾರ್ಗದಲ್ಲಿ | ದಹಿಸಿ ದೇಹವಲ್ಲೀ |ಚಿತ್ರ ಚರಿತ ಗುರುಗೋವಿಂದ ವಿಠ್ಠಲನಾ | ಪದಕಮಲವ ಸೇರಿದನ 11
--------------
ಗುರುಗೋವಿಂದವಿಠಲರು
ವಿಘ್ನೇಶಾ - ಪಾಲಿಸೊ - ಎನ್ನ - ವಿಘ್ನೇಶಾ ಪ ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ. ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ 1 ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ 2 ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ 3 ಪರಿ | ಶುದ್ಧ ಭಕ್ತಿಯನಿತ್ತು 8 ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ 5
--------------
ಗುರುಗೋವಿಂದವಿಠಲರು