ಒಟ್ಟು 8 ಕಡೆಗಳಲ್ಲಿ , 6 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆರೆಯನು ದಾಟಲು ಅರಿಯದ ಜನ ಭವ ಶರಧಿಯ ದಾಟುವರೇ ಶ್ರೀ ನರಹರೆ ಪ ಕರವ ಪಿಡಿಯದಿರೆ ತೊರೆಯ ಸೇರಲಳವೆ ಈ ಧರೆಯೊಳು ಅ.ಪ ಹಲವು ಜನ್ಮಗಳಲಿ ಗಳಿಸಿದ ಅಘಗಳ ಅಲೆಗಳೊಳಗೆ ಸಿಲುಕಿ ಸಂತತ ಮುಳುಗಿ ಮುಳುಗುತ ಕಟುಜಲಗಳ ಕುಡಿಯುತ ನಳಿನನಾಭ ನಿನ್ನೊಲಮೆಯಿಂದಲ್ಲದೆ1 ಕಾಮ ಕ್ರೋಧ ಮದ ಲೋಭ ಮೋಹ ಮತ್ಸರಗಳೆಂಬ ವಿವಿಧ ಜಲಚರ ನಕ್ರ ತಿಮಿಂಗಿಲವಿರಲಾಗಿ ಕಾಮಜನಕ ನಿನ್ನ ಪ್ರೇಮವÀ ಪೊಂದದೆ 2 ಚೂರ್ಣಗಳಾದುವು ವಿವಿಧ ನಾವೆಗಳೀ ಅರ್ಣವದಲಿ ಸಿಲುಕಿ ಸುಲಭದಿ ಪೂರ್ಣ ಪ್ರಮತಿಗಳ ಮತವನರಿತು ಇನ್ನ ಪೂರ್ಣ ಪ್ರಸನ್ನತೆ ನಾವೆಯಿಂದಲ್ಲವೆ 3
--------------
ವಿದ್ಯಾಪ್ರಸನ್ನತೀರ್ಥರು
ತಂದೆಯಿಂದಲಿ ತಾಯಿ ಗರ್ಭಕೆ ನೂಕಿದ್ವಂದ್ವ ಜನ್ಮಕೆ ಕರ್ತ ಇಂದ್ರ ರಕ್ಷಿಪುದೆಂದೋ ಜನ್ಮದಿಂದ |ಇಂದ್ರಾದಿ ಪ್ರಾವರ್ತಕನಿಂದು ಪ್ರಲಯಾದಲ್ಲಿನಂದಕರ ಮುಕ್ತರಿಗೆ ಮಂದಿರವು ಸಿತ ದ್ವೀಪ ಗುರು ಗೋ-ವಿಂದ ವಿಠಲಾತ್ಮಕ ಸಂಕ್ಷೇಪ್ತø ಶರಣು ||ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣಾನಿಧಿಯೆ ಘನ್ನಸ್ವರ್ಣ ಗರ್ಭನನಯ್ಯ | ಅರ್ಣ ಸಂಪ್ರತಿಪಾದ್ಯಕರ್ಣರಹಿತ ಶಯ್ಯ | ವರ್ಣಿಸೆ ನಿನ್ನನಯ್ಯಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವನ್ನ | ಅರುಹುವುದೊಳಿತಲ್ಲೆಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿಪನ್ನಗಾಚಲವಾಸ ಪ್ರ | ಸನ್ನ ರಘನಾಶಘನ್ನ ಗುರು ಗೋವಿಂದ ವಿಠಲಾ ಗೋ ಪ್ರಸನ್ನ ||
--------------
ಗುರುಗೋವಿಂದವಿಠಲರು
ತ್ಯಜಿಸದಲೆ ಸಂಸಾರ ಭಜಿಸಬಹುದು ಪ ಅಜಭವಾದಿಗಳೆಲ್ಲ ತ್ಯಜಿಸಿ ಭಜಿಸುವರೇ ಅ.ಪ ಅರ್ಣವವ ಪೋಲುವ ಭವವನ್ನು ನೀಗಲು ವರ್ಣಾಶ್ರಮಗಳ ಧರ್ಮಗಳನರಿತು ಪೂರ್ಣ ಸುಖಜ್ಞಾನ ಪೊಂದಿದ ಹರಿಯ ಗುಣಗಳನು ನಿರ್ಣಯದ ಭಕುತಿಯಲಿ ವರ್ಣಿಸುವ ನರನು 1 ಜನ್ಮವನು ಕಳೆವುದಕೆ ತೀರ್ಮಾನ ಮಾಡಿ ದು ಷ್ಕರ್ಮಗಳ ತ್ಯಜಿಸಿ ಸತ್ಕರ್ಮಗಳನು ಮರ್ಮವರಿಯುತ ರಚಿಸಿ ಹೆಮ್ಮೆಯಿಂದಲಿ ತನ್ನ ಧರ್ಮದಲಿ ಸತಿಸುತರ ಭೋಗ ಉಣುವವರು2 ಅನ್ಯಾಯಗಳ ಬಿಟ್ಟು ಮಾನ್ಯರೆಂದೆನಿಸುತಲಿ ಘನ್ನ ಮಹಿಮನ ಸೇವೆಯೆಂದರಿಯುತ ಕನ್ಯಾದಿ ದಾನಗಳ ಮಾಡುತಲಿ ಮುದದಿಂದ ಚೆನ್ನಾಗಿ ಹರಿಯ ಪ್ರಸನ್ನತೆಯ ಪಡೆಯುವರು 3
--------------
ವಿದ್ಯಾಪ್ರಸನ್ನತೀರ್ಥರು
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ
ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ. ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು 1 ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ ದುರ್ನಿವಾರ ಮನಸಿನಿಂದ ಶೀರ್ಣನಾದೆನು ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ- ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ 2 ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ ದೋಷ ದುರಿತಂಗಳಿಗವಕಾಶನಾದೆನು ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀ ವ್ಯಾಸರಾಜರು ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ. ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1 ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2 ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3 ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4 ಪುರಂದರ | ದಾಸರೆಂದೆನಿಸೀದ 5 ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6 ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7
--------------
ಗುರುಗೋವಿಂದವಿಠಲರು
ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ ಸುಖದಾತ ಸುಂದರನ ಪ್ರಾಣಸಖನ ಕಡುದೈನ್ಯದಿಂದೆರೆಯಲೊಡನೆ ಬಂದು ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ ಕ್ರೋಧಿರಕ್ಕಸನುರವ ಛೇದಿಸುತೆ ವೇದವ ನ್ನಾದರಿಸಿ ತಂದೀಯುತ ಜಗಕೆನಲವಿಂ ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ ಸ್ವರ್ಣಗರ್ಭನನಂತು ಮೀನನಾಗಿ ಅರ್ಣವದಿ ನೆಲೆಯಾಗಿ ನಿಂತ ಸುಗುಣ
--------------
ನಂಜನಗೂಡು ತಿರುಮಲಾಂಬಾ
ಯಾತರಭಿಜÕತೆ ಯಾತರ ಭಕುತಿ ಶ್ರೀನಾಥಾಂಘ್ರಿ ವಿಮುಖಾದ ಸೂತಕಿಗಯ್ಯ ಪ.ಕಪಟನಾಟಕಸೂತ್ರಅನಂತಗುಣನಿತ್ಯತೃಪುತಮುಕುತನಿತ್ಯಸ್ವತಂತ್ರಗೆಉಪಾಧಿಸಗುಣನೆಂದನಾದಿ ನಿರ್ಗುಣನೆಂದುಉಪಾಸನೆವಿಡಿದ ಸೋಹಂಭಾವದವಗೆ 1ಅಪುಶಾಯಿಅಗಣಿತಆನಂದ ಬ್ರಹ್ಮಾದಿತಾಪಸರರಸ ಪುರುಷೋತ್ತಮಗೆಉಪಚಾರಕ್ಹರಿಯೆಂದು ಹರಕರ್ಮ ರವಿಗಣಾಧಿಪರೆ ಉತ್ತಮರೆಂಬ ಕಪಟಮಾನಿಸಗೆ 2ಪೂರ್ಣಪ್ರಜÕರ ಮತ ನವಭಕುತಿಗಳನಿರ್ಣಯದಲಿ ತರತಮವಿಲ್ಲದೆಅರ್ಣವಕಲಿತೇನಿನ್ನಾಕಾಶ ಚರಿಸೇನುಪೂರ್ಣ ಪ್ರಸನ್ವೆಂಕಟೇಶನೊಪ್ಪಿರದೆ 3
--------------
ಪ್ರಸನ್ನವೆಂಕಟದಾಸರು