ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ 1 ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದ್ರವಾದ ಸುವಸ್ತುವಳಗೊಂದದೆ ಅಚಲ ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ 2 ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಮ್ಮ ದೇವದತ್ತ ಬ್ರಹ್ಮಾನಂದ ಅವಧೂತ ಸಮಸ್ತಜನದಾತ ಬ್ರಹ್ಮಾದಿಗಳೊಂದಿತ ಧ್ರುವ ಕುಡಲಿಕ್ಕೆ ತಾ ಉದಾರಿ ಬಲು ದೊಡ್ಡ ಉಪಕಾರಿ ಕಡೆಗಾಣಿಸುವ ಧೊರಿ ನಿಜ ನೀಡುತಿಹ್ಯ ಸಾರಿ ಬಡವರಿಗೆ ಆಧಾರಿ ಭಕ್ತಜನ ಸಹಕಾರಿ ಪರಿ ಮಾಡುತಿಹ್ಯ ಮನೋಹರಿ 1 ಬೀರುತಿಹ್ಯ ನಿಜನೋಡಿ ಕರದಲ್ಲಭಯ ನೀಡಿ ಗುರುತಿಟ್ಟಿದೆ ಸೂರ್ಯಾಡಿ ಶರಣರು ನಿಜಗೂಡಿ ಅರುವ್ಹೆ ಅಂಜನ ಮಾಡಿ ಕುರುವ್ಹೆದೋರುದಿದರಡಿ ಧರೆಯೊಳಿದೆ ಕೊಂಡಾಡಿ ಗುರುನಾಥನೆಂದು ಪಾಡಿ 2 ಅನಾಥ ಬಂಧುನೀತ ದೀನದಯಾಳು ಸಾಕ್ಷಾತ ಅನುದಿನದೆ ಪ್ರಖ್ಯಾತ ಘನಗುರು ಶ್ರೀನಾಥ ಮನೋಭಾವ ಪೂರಿತ ಎನಗುಳ್ಳ ದೇವದತ್ತ ದಾತ ಭಾನುಕೋಟಿ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು