ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆಸು ಮನವೆ ನಲಿವಿನಿಂದಲಿ ನೆನೆಸು ಮನವೆ ನಲಿವಿನಿಂದಲಿ ಮನಸಿಜನ್ನ ಪೆತ್ತ ಹರಿಯ ವನಜ ಚರಣವನ್ನು ಹೃ ದ್ವನಜದೊಳಗೆ ನಿಲಿಸಿ ನಗುತ ಪ ಪ್ರಳಯದಲ್ಲಿ ವರ ರಮಾ ಕ ಳವ ತಾಳಿ ಲೀಲೆಯಲ್ಲಿ ಪೊಳವ ಕಂಗಳಿಂದ ಕಿಡಿ ಗಳನು ತೋರಿ ಕುಣಿವುತ ಜಲಜ ಪೀಠ ಸುರಪ ಪುಲಿದೊ ಗಲ ವಸನ ಉಳಿದ ಸುರರ ಅಳಿದು ಏಕಮೇವನಾಗಿ ನಲಿವ ನಾರಸಿಂಹನೆಂದು 1 ಜರಾಮರಣರಹಿತ ಸುಜ ನರನ ಕಾಯ್ದು ಕರುಣದಲ್ಲಿ ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ ಪರಮನೆಂದೆನಿಸಿ ಚರಿಸುತಿಪ್ಪ ಅರುಣಪ್ರಭೆಗೆ ಕೋಟಿ ಮಿಗಿಲು ಪರಮಪುರುಷ ಸಿರಿಧರನ್ನ 2 ಕೆಡದೆ ಪರಮ ಭಕುತಿ ಮಾರ್ಗ ವಿಡಿದು ಗರ್ವವೆಂಬ ಕವಚ ದುರುಳ ಚೇತನಕ್ಕೆ ಕೊಡದೆ ಮನಸು ವಿನಯದಿಂದ ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ ಬಿಡದೆ ನುಡಿಯೆ ಬಂದ ಅವ ಘಡವ ದಾಟಿಸು ವೊಲಿದು ಕಾಯುವಾ3
--------------
ವಿಜಯದಾಸ
ಪೇಳಿದರೆ ತಿಳಿಯುವುದೆ ಮಾಯಮೋಹಿಗಳಿಗೆ ನೀಲಶ್ಯಾಮನ ದಿವ್ಯಗೂಢದಿಹಮಹಿಮೆ ಪ ಬಂಜೆಗ್ಹೊಳೆವುದೆ ಪ್ರಸೂತಿವೇದನೆ ಸುದ್ದಿ ಸಂಜೀವನ ಮಹಿಮೆ ತಿಪ್ಪೆ ತೃಣಕೆ ತಿಳಿಯುವುದೆ ಅಂಜುಬುರುಕಗ್ವೀರತ್ವ ಸಾರಸವಿದೋರುವುದೆ ವಂಜಗೊಳುಪಾಗುವುದೆ ಹರಿಭಕ್ತಿಸಾರ 1 ನಾಗನ್ಹೆಡೆಯೆತ್ತಾಡಲಮೇಧ್ಯಜಂತರಿಯುವುದೆ ಕೋಗಿಲೆಯು ಕೂಗಲು ಕಾಗೆ ತಿಳಿಯುವುದೆ ಗೂಗೆಗ್ಹೇಳಲು ಅರುಣಪ್ರಭೆ ನೋಡಬಲ್ಲುದೆ ಭಾಗವತರ ನಡೆ ಭವರೋಗಿಗ್ಹೊಳಪಹ್ಯದೆ 2 ರಾಜ್ಯದಾಡಳಿತವನು ಚಾಂಡಾಳ ತಿಳಿಯುವನೆ ತೇಜಿಯ ಮಹಯೋಗ ಪಾಜಿಗ್ಹುಟ್ವುದೆ ಭೋಜನದ ಸವಿಸಾರ ರೋಗಿಗ್ಹೇಳಲು ಫಲವೆ ರಾಜಿಪ ಪರಲೋಕ ಕುಜನರರಿಯುವರೆ 3 ಹೀನನಿಗತಿ ತಿಳಿಯುವುದೆ ಜ್ಞಾನಬೋಧಾಮೃತ ಶ್ವಾನನಿಗೆ ಸೇರುವುದೆ ರಾಗ ಸುಖಸ್ವಾದ ಕೋಣಗ್ಹೊಳೆವುದೆ ವೇಣು ಮೃದಂಗ ಸುಖವಾದ್ಯ ಧ್ಯಾನಮಹಿಮೆಯ ಫಲವು ಭವಿಗೆ ತಿಳಿಬಲ್ಲುದೆ 4 ನೇಮದೊರುಷವು ಸುರಿಯೆ ಕಲ್ಲು ನೀರು ಕುಡಿಯುವುದೆ ಕಾಮಿಗಳಗನುಭವದ ಹಾದಿ ತಿಳಿ ಬಲ್ಲುದೆ ಪಾಮರಧಮರಿಗಿಲ್ಲ ದೀನಜನನಾಥ ಶ್ರೀ ರಾಮನಡಿ ನಿಜಭಕ್ತಿ ಸಾಧ್ಯವಾಗುವುದೆ 5
--------------
ರಾಮದಾಸರು