ಒಟ್ಟು 8 ಕಡೆಗಳಲ್ಲಿ , 8 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಾಗಿರೊ ವೈಷ್ಣವ ದಾಸರಾಗಿರೊ ದಾಸರಾಗಿ ಬಯಲಾಸೆಯ ನೀಗಿ ರ- ಮೇಶನ ಗುಣವಾರಾಶಿಯೊಳಿರಿಸುವ ಪ. ಸುಂದರ ಮಾನಾನಂದತೀರ್ಥಮತ ಸಾಂದ್ರ ಸುಖಾಂಬುಧಿಮಿಂದ ಮಹಾತ್ಮರ 1 ದಿವ್ಯಲೋಕಜನ ಭವ್ಯೋಭಯವಿಧ ಕಾವ್ಯರಚನ ಲಾತವ್ಯಯತೀಂದ್ರರ 2 ಸೀತಾಪತಿ ರಘುನಾಥನ ಮನದೊಳ- ಗಾತು ಭಜಿಪ ಗಣನಾಥ ಜನಕನ 3 ಶ್ರೀ ಮಹೇಶ ವಟು ವಾಮನ ಪದಯುಗ ಸಾಮಜವಾಹನ 4 ಕಾಕರಟನದೊಳ ಭೀಕರ ಮತವ ನಿ- ರಾಕರಿಸಿರುವ ಸುಧಾಕರ ಮೂರ್ತಿಯ 5 ತಂತ್ರ ದೀಪಿಕಾ ಯಂತ್ರವ ರಚಿಸಿದ ಮಂತ್ರಾಲಯವರ ಮಂತ್ರದೇವತೆಯ 6 ಗೋಪಿನಾಥನೆ ಭೂಪನೆಂದು ಸಂ- ತಾಪವ ಬಿಡಿಸುವ ಶ್ರೀಪಾದರ ಪದ 7 ಮಂದಕಲಿಯ ಕಾಲಿಂದಲೊರಿಸಿದ ಪು- ರಂದರದಾಸರ ಹೊಂದಿ ಹರಿಯ ನಿಜ8 ಸುಜನ ಹೃದಂಬುಜ ಸುಖಕರ ದಿನಮಣಿ ವಿಜಯರಾಜ ಪದ ಭಜನೆಯ ಮಾಡುತ 9 ಭಂಗುರ ಭವಭಯ ಭಂಗದ ಸುಗುಣ ತರಂಗನ ಒಲಿಸಿದ ಮಂಗಳ ಮಹಿಮರ 10 ಹರಿಕಥಾಮೃತದ ತೆರೆಗಳೊಳಾಡುವ ಪರತರಸಾರವ ಸುರಿದ ಮಹಾತ್ಮರ 11 ಸಿಡುಕರ ಸಂಸ್ಕøತಿ ಕಡಲೊಳು ಮುಳುಗಲು ಬಿಡದಲೆ ಕೈಪಿಡಿದೊಡೆಯನ ತೋರ್ಪರ 12 ಅರಿಷಡ್ವರ್ಗವ ತರಿದು ಬಿಸುಟು ಶ್ರೀ- ವರನ ಕೃಪಾರಸ ಸುರಿಸಿದ ಧನ್ಯರ 13 ಮೂಕನ ವಾಗ್ಮಿಯ ಮಾಡಿ ಮುರಾರಿಗೆ ಸಾಕ ಕೊಟ್ಟಿ ದೀನಾಕರದಾಸರ 14 ಮಾತಿಗೆ ಕಂಸಾರಾತಿನಲಿಯೆ ಜಗ ನ್ನಾಥರೆಂ¨ ವಿಖ್ಯಾತಿ ಪಡೆದವರ 15 ತಾಪತ್ರಯಗಳ ತಪ್ಪಿಸಿ ವೆಂಕಟ ಭೂಪನ ಸದಯಾರೋಪಗೈದವರು 16
--------------
ತುಪಾಕಿ ವೆಂಕಟರಮಣಾಚಾರ್ಯ
ನಿನಗೇನು ಕಡಿಮೆ ಪೇಳೈ ಎನಗೆಲೊ ರಂಗಾ ಪ ಕ್ಷೀರಾಬ್ಧಿ ನಿನ್ನದು ಸಂಸಾರಾಬ್ಧಿ ಎನ್ನದಯ್ಯ ಮೂರೇಳವತಾರ ನಿನಗೆ ನೂರೆಂಟು ಎನಗೇ1 ನಿನಗೆ ಸುರಮುನಿಗಣ ಎನಗೆ ಭೂಸುರಗಣ ನಿನಗೆ ಸತ್ವದ ಗುಣ ಎನಗಾಸೆ ದ್ವಿಗುಣ2 ಜಗವು ಉದರವೆಂದು ಬಗೆದು ಪೋಪೆನೀ ಜಗದ ಸರ್ವಾರ್ಥವ ಮಿಗೆ ಬಯಸುವೆನಾ 3 ನಿನಗೆ ಭಕ್ತರೆ ಪ್ರಿಯ ಎನಗೆ ಮುಕ್ತಿಯೆ ದೈವ ನಿನಗೆ ರಕ್ಷಣೆನಾಮಾ ಎನಗೆ ಭಕ್ಷಣೆ ಕಾರ್ಯಾ 4 ವರಷಡ್ಗುಣವು ನಿನಗೆ ಅರಿಷಡ್ವರ್ಗವು ಯನಗೆ ದುರಿತ ತೃಪ್ತತೆ ಯೆನಗೆ 5 ನಿನಗೆ ನಾನೆಂಬುದಿಲ್ಲ ಎನಗೆ ನಾನೆಂಬುದುಂಟು ರಂಗನಾಥ ಶ್ರೀಶ ತುಂಗವಿಕ್ರಮ ನೀ 6 ಕ್ಷಮಿಸೆನ್ನಪರಾಧವ ವಿಮಲಾಂಗ ಮಾಧವ ಕಮಲಾಕ್ಷ ಪೊರೆದೇವ ರಾಮದಾಸನುತಾ 7
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರಮಹಂಸ ಪರಿವ್ರಾಜಕ ಗುರುವರ್ಯ | ಶಿರಬಾಗುವೆ ಆರ್ಯ ಪ ಚರಣಕಮಲ ನೆರೆನಂಬಿಹೆ ನಾನಿನ್ನು | ಭಜಕರ ಸುರಧೇನು ಅ.ಪ ಪುರುಷೋತ್ತಮ ಯತಿಕರ ಸರಸಿಜ ಜಾತ | ಜಗದೊಳಗೆ ಪುನೀತ ಅರಿಷಡ್ವರ್ಗವ ದೂರಗೈದ ಧೀರ | ಶರಣರಿಗಾಧಾರ ತರಣಿ ಸದೃಶ ಸುವಿರಾಜಿತ ಶುಭಗಾತ್ರ | ಪಾವನ ಚರಿತ್ರ ನಿರುತ ನಿಮ್ಮ ಸಂಸ್ಮರಿಸುವ ನರಧನ್ಯ | ಭುವಿಯೊಳು ಸನ್ಮಾನ್ಯ 1 ವ್ಯಾಸರಾಯ ಕರಪೂಜಿತ ಶ್ರೀ ಚರಣ | ನಿಗಮಾಗಮ ನಿಪುಣ ಶ್ರೀ ಸಮೀರಮತ ಸ್ಥಾಪಕ ಧುರೀಣ | ಸುಜ್ಞಾನಿವರೇಣ್ಯ ಭೂಸಿತ ಸದ್ಗುಣ ಸುಮಲಾಭರಣ | ಶರಣ ಸಂಜೀವನ ಭಾಸುರ ಸೂರ್ಯಾಂಶಜ ಯತಿಕುಲರತ್ನ | ಭೂಸುರ ಸನ್ಮಾನ್ಯ 2 ಯೋಗಿವರ್ಯ ಕರುಣಾಕರ ಗುಣನಿಲಯ | ಶುಭನಾಮಧೇಯ ನಾಗಶಯನ ಶ್ರೀ ಕರಿಗಿರಿನಿಲಯನ್ನ | ಪೂಜಿಪ ಗುರುರನ್ನ ಶುಭ ಚರಿತ | ದೂರೀಕೃತದುರಿತ ಬಾಗಿ ದೈನ್ಯದಲಿ ಬೇಡುವೆ ತವಚರಣ | ಭಕ್ತಿಯನುದಿನ 3
--------------
ವರಾವಾಣಿರಾಮರಾಯದಾಸರು
ಪರಿ ಸಾಧನವರ್ಗವಾ ಅರಿಷಡ್ವರ್ಗವೆಂಬ ದುರ್ಗವಾ ತನ್ನಯ ದಿವ್ಯಕರುಣಾರಸವೆಂಬ ಸ್ವರ್ಗವಾ ಕರೆದಿತ್ತಾ ಪರಿವುತ್ತಾ ಪರವುತ್ತಾ ಅರಿಸುತ್ತಾ 1ಕಾಳಗತ್ತಲೆಯ ಯೂಥವಾ ಮನದೊಳಿದ್ದಕೀಳು ಬುದ್ಧಿಯಪರಾಧವಾಮೂಳ ವಾಸನೆಯ ಮುಖವಾ ವೇದಾಂತ ಸಂಮೇಳದಿಂದ ಬಹ ಸುಖವಾಪೇಳುತ್ತಾ ಸೀಳುತ್ತಾ ತಾಳುತ್ತಾ ಕೀಳುತ್ತಾ 2ಸಾರ ಸತ್ಸಂಗದ ದಾರಿಯಾ ಮುಂದುಗಾಣಿಸದಕ್ರೂರ ಕರ್ಮಂಗಳ ಪರಿಯಾ ಘೋರ ಮಾಯೆಯೆಂಬ ತೊರೆಯಾ ಗೋಪಾಲಾರ್ಯಸಾರಾನಂದವೆಂಬ ಪುರಿಯಾತೋರಿಸುತಾ ಹೀರಿಸುತಾ ಹಾರಿಸುತಾ ಸೇರಿಸುತಾ 3
--------------
ಗೋಪಾಲಾರ್ಯರು
ಶ್ರೀಜಗನ್ನಾಥದಾಸರಾಯರಸ್ತೋತ್ರ ದಾಸಾರ್ಯರ ಚರಣ ಕಮಲಕಾನಮಿಪೆ ಶಿರಬಾಗಿ ಬಿನ್ನೈಪೆ ಏಸು ಜನ್ಮದ ದುಷ್ಕøತ ಪರಿಹರಿಪೆ ಕರುಣವನು ಪಡೆದು ಭೂಸುರಜನ್ಮವ ಸಾರ್ಥಕಗೊಳಿಪೆ ಕೃತಕೃತ್ಯನೆಂದೆನಿಪೆ ದೋಷರಾಶಿಗಳ ನಾಶಗೈಸಿ ವಿ ಶೇಷ ಮಹಿಮದಿಂಭೂಷಿತ ಜಗನ್ನಾಥ ಪ ಗಾಂಗೇಯ ವಸನಸಂಜಾತ ಪ್ರಲ್ಹಾದನಭ್ರಾತ ಮತಿಮಾನಸಹ್ಲಾದ ಸುನಾಮಕನೀತ ನರಹರಿಸಂಪ್ರೀತ ದ್ವಿತಿಯ ಶಲ್ಯಾಖ್ಯನೃಪತಿ ವಿಖ್ಯಾತ ಪುರಂದರ ಸುತನೆನಿಸಿದ ದಸ ದ್ಯತಿ ವಾದೇಶ್ವರನ್ಹಿತದಲಿ ವಲಿಸಿದ 1 ನರಸಂಬಂಧಿತ ಪ್ರಾಂತದ ಕ್ಷೇತ್ರದಲಿ ಬÁ್ಯಗವಟದ ಕರಣಿಕ ಜನಿಸಿದ ಬಾಲಾರ್ಕನು ವರದೇಂದ್ರ ಗುರುವರ್ಯರ ಕರುಣದಲಿ ಶಾಸ್ತ್ರಾಖ್ಯಾಗಸದಿ ವರವಸಂತ ಋತತÀರುಣಿ ಕಿರಣದೊಲ್ ಪರಮತಗಳ ಧಿ:ಕರಿಸಿ ಮೆರೆಯುತಿಹ 2 ಮೂರು ಭಾಷಾತ್ಮಕ ವಿದ್ಯಾಧ್ಯಾತ್ಮ ಸಂಪಾದಿಸಲೋಸುಗ ಮಾರಾರಿನಾಮಕದಾಮಹಾತ್ಮರಡಿಯುಗಳನು ಸೇವಿಸಿ ಮೂರು ರೂಪಾತ್ಮಕನ ವಿಙÁ್ಞನಾತ್ಮ ಅಂಶಗಳನು ತೋರಿಪ ಮೂರು ಮೂರು ಮೂರು ಮೂರು ಮೂರು ವಂದುಸಾರವ ಗೃಹಿಸಿದ ಸೂರಿವರಾಗ್ರÀಣಿ 3 ವರದೇಶ ಶಾಸ್ತ್ರಾತ್ಮಕಪಯದಿಂದ ಸಂಪೂರಿತವಾದ ಮರುತಮತ ತತ್ವತರಂಗಗಳಿಂದ ಸಂಶೋಭಿಸುತಿಹ ಶ್ರೀ ಭೂಸುರರನು ಪಾಲಿಪ ಹರಿಯಭಕುತಿಸುರಮಣಿ ತರುವನೀವಪಯ ಶರಧಿಯನಿಪ ಹರಿ 4 ಸೂರ್ಯ ಸದ್ಭುಕುತರೆನಿಸುವ ಶರಣಜನ ಹೃತ್ಸಂತಾಪಹಭಾರ್ಯ ಕಾಮಕ್ರೋಧಾದಿ ಅರಿಷಡ್ವರ್ಗವ ಭರ್ಜಿಪಹರಿ ಶೌರ್ಯ ಸತ್ಕವಿಕುಲವರ್ಯ ವರದೇಶ ವಿಠಲನ ಚರಣಸೇವಕರ ಸುರತರುವಿನ ತೆರಪೊರೆಯುಂತ ಮೆರೆಯುವ 5
--------------
ವರದೇಶವಿಠಲ
ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ. ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ. ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ 1 ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ 2 ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ3 ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ 4 ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು 5
--------------
ವಾದಿರಾಜ
ಸುತ್ತಬೇಕು ಜನ್ಮವೆತ್ತಬೇಕು ಪ ಕತ್ತಲೆ ಸಂಸಾರದೊಳು ಹೊತ್ತು ಹೊರೆಯ ನಿತ್ಯ ಅ.ಪ ಭರತಖಂಡದೊಳು ಪುಟ್ಟಿ ಮರುತ ಮತವ ಪೊಂದಿಕೊಂಡು ಗುರುಕೃಪೆಯನು ಪಡೆದು ಹರಿ ಸರ್ವೋತ್ತಮನೆಂದರಿಯೋ ತನಕ 1 ಅರಿಷಡ್ವರ್ಗವನ್ನೆ ತ್ಯಜಿಸಿ ದುರುಳರ ಸಂಗ ಕತ್ತರಿಸಿ ಪರಿ ಕಾರ್ಯ ಕರ್ಮದೊಳು ಹರಿಯು ತೋರುವ ತನಕ 2 ಬಿಂಬ ವಿಜಯ ರಾಮಚಂದ್ರ - ವಿಠಲರಾಯನು ಹೃದಯ ಅಂಬರದೊಳಗೆ ಪೊಳೆದು ಅಂಬವಿರಜೆಯಲಿ ಮುಳುಗೊ ತನಕ 3
--------------
ವಿಜಯ ರಾಮಚಂದ್ರವಿಠಲ
ಜಯಿಸಬೇಕು | ಮನವನು | ವೈಸಬೇಕು ಪಜಯಿಸಬೇಕು ಅರಿಷಡ್ವರ್ಗವನು |ವೈಸಬೇಕು ಹರಿಚರಣದಿ ಮನವ |ಸೈಸಬೇಕು ಶೀತೋಷ್ಣದ ಬಾಧೆಯ |ಲೈಸಬೇಕು ಭವದುರಿತವನೂ1ಗ್ರಹಿಸಬೇಕು ತವರ್ಚನ ಮರಣಸ್ಥಿತಿ |ಕಾಯಿಸಬೇಕು ಸುಕಾರ್ಯದಲಿ |ಗೈಸಬೇಕುಪರಸೇವೆಗೆ ತನುವನು |ಮೋಹಿಸಬೇಕು ಕುಲಸತಿ ಪತಿಯ2ಕೊೈಸಬೇಕು ದುರ್ವಾಕ್ಯದ ರಸನೆಯ |ಸಾೈಸಬೇಕು ಋಣ ರೋಗ ಸಸಿ |ಈಸಬೇಕು ಬಡತನದಲಿ ಮಾನವಾ |ಬೈಸಬೇಕುಗೋವಿಂದ ದಾಸರ ಸಂಗ3<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ