ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ವಾದಿರಾಜರ ಪ್ರಾರ್ಥನೆ) ಭಾವಿಭಾರತಿವರನೆ ದಾಸನ ಬೇಗ ಕಾವ ಕಲುಷಹರನೆ ದೇವ ಋಜು ಗಣನಾಥನೀಪರಿ ಸಾವಕಾಶಕೆ ಸಮಯವಲ್ಲಿದು ಪ. ಅರಿಷಡ್ವರ್ಗದಿ ಸಿಲುಕಿ ಕ್ಷಣಕ್ಷಣ ಕರಗಿ ಕುಂದುತ ಬಂದೆನು ನಾನಾ ಪರಿಯ ಕ್ಲೇಶದಿ ನೊಂದೆನು ಮುಂದೇನು ದುರಿತಾರಾಶಿಗಳನ್ನು ಬೇಗದಿ ತರಿದು ಸಜ್ಜನಗುಣವ ಸುಲಭದಿ ಪೊರೆದನೆಂಬೈತಿಹ್ಯ ವಚನದಿ ಭರವಸದಿ ನಂಬಿರುವೆ ನಿನ್ನನು 1 ತುರಗ ವದನ ದೇವನ ವಲಿಸಿ ದೇವ ನರವರ ಸಂಘವನು ಕರದು ತಂಪೇರಿಸಿ ಸರಿಯೆನಿಸಿದನೆ ಹರಿಯೆ ತಾನೆಂದೊದರಿಕೊಂಡಿಹ ನರಕಭಾಜಿಗಳಾದ ಮೈಗಳ- ನರಿದು ವಾದದಿ ಮುರಿದು ಹಲ್ಲನು ಸಿರಿವರನ ಸತ್ಕರಿಸಿ ಪೂಜಿಪ2 ವನಜಾಕ್ಷ ರಾಮಭಕ್ತನಾಗಿಹ ವಿಭೀಷಣಗೆ ಮಾರುತಿಯಿಂದುತ್ತ- ಮುಂದಿನ ಫಲ ನೀಡೆಂದು ಮಣಿದು ಬೇಡುವೆ ನಿನ್ನ ಪದಯುಗ ವನರುಹಗಳನುವಶ್ಯದಾಯಕ ನಿತ್ಯ ಕರುಣಿಸು 3
--------------
ತುಪಾಕಿ ವೆಂಕಟರಮಣಾಚಾರ್ಯ
ಕೊಂಡಾಡಬಹುದೆ ಯತೀಂದ್ರ ಎನ್ನಾ ಪಾಂಡವಪ್ರಿಯನಾಭಜಕ ವಾದಿರಾಜಯತಿ ಪ ನಾನಾ ಜನುಮದಾ ಯೋನಿಮುಖದಲಿ ಬಂದು ಮಾನವಳಿದು ಜ್ಞಾನಶೂನ್ಯನಾಗಿಹ ಶ್ವಾನಮನದ ಮೂಢಮನುಷ್ಯನಾಗಿ ಹೀನ ಅಹಂಕಾರಪೂರಿತ ದೋಷಿಂiÀi1 ಅರಿಷಡ್ವರ್ಗದೊಳು ಸಿಲುಕಿ ನರಗುರಿಯಾಗಿ ಪರರವಾರ್ತೆಯ ಸವಿವ ಹಗಲು ಇರಳೂ ದುರುಳ ದುಶ್ಚೇಷ್ಟಿಕನು ಬಹುದುರಾತ್ಮನು ನಾನು ಗುರುಹಿರಿಯರಿಗೆ ಎರಗದ ಗೂಢಪಾಪಿಯನು 2 ಒಡೆಯ ವೈಕುಂಠ ವಿಠಲನ ಭಜಿಸದೆ ಪೊಡವಿಯೊಳು ಕ್ಷುದ್ರ ದೈವಗಳಿಗೆಲ್ಲ ಪೊಡಮಡುತಿಹೆ ಸ್ವಾಮಿದ್ರೋಹಿ ಗರುವಿಯಾ ಕಡುಪಾತಕನ್ನ ನಡತೆಯನು ನೀನರಿಯದಲೇ 3
--------------
ಬೇಲೂರು ವೈಕುಂಠದಾಸರು
ನಾರಾಯಣ ನಾರಾಯಣ ನಾರಾಯಣನಾರಾಯಣ ಪ. ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ-ರ್ವೋತ್ತಮವೆಂಬೊ ನೆನವಿರಬೇಕು1 ಅರಿಷಡ್ವರ್ಗದ ವಿಜಯ ಬೇಕು ಗುರುಕುಲತಿಲಕಗುರುಮಧ್ವಮತ ಬೇಕು ಗುರುಭಕ್ತಿ ಬೇಕು 2 ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ-ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು 3 ವೇದದಭ್ಯಾಸವು ಬೇಕು ಅದರರ್ಥ ಹರಿಯೆಂಬಬೋಧವಿರಲುಬೇಕು ಖಳರಳಿಯಲುಬೇಕು4 ವಾದಿರಾಜನೊಡೆಯ ಹಯವದನನ್ನ ದಿವ್ಯ-ಪಾದ ನಂಬಿಯಿರಬೇಕು ವರಾದಿಗಳ ಬಯಸುವೋರು 5
--------------
ವಾದಿರಾಜ
ಪರಸುಖದಿರವನು ಕರುಣಿಸು ಎನಗೆ ಪರಮಪಾವನ ತವಚರಣಸೇವೆಯೆಂಬ ಪ ಅರಿಷಡ್ವರ್ಗದ ಉರುಬಾಧೆ ತಪ್ಪಿಸಿ ಮೆರೆವೆಂಟುಕೋಣಗಳು ಶಿರತರಿದ್ಹಾರಿಸಿ ಜರೆಮರಣೆಂದೆಂಬ ಉರುಲನು ಜೈಸಿದ ಹರಿಶರಣರ ಮಹ ಕರುಣಕಟಾಕ್ಷವೆಂಬ 1 ಹತ್ತು ಇಂದ್ರಿಯಗಳು ಒತ್ತಿ ಮುರಿದು ನೂಕಿ ಸುತ್ತಿಸುಳಿವ ಕಪಿನ್ಹತ್ತಿರ ಬಂಧಿಸಿ ಭವ ಕತ್ತರಿಸೊಗೆದ ಚಿತ್ತಜತಾತನ ಭೃತ್ಯಂ ನಡೆಯೆಂಬ 2 ಹರಣಪೋದರು ನಿನ್ನ ಚರಣಸ್ಮರಣೆಯನ್ನು ನೆರೆನಂಬಿ ಬಿಡದಂಥ ಪರಮದಟವ ನೀಡೋ ಶಿರದಿ ಹಸ್ತವನಿತ್ತು ವರದ ಶ್ರೀರಾಮ3
--------------
ರಾಮದಾಸರು
ಏಕೆ ಮುರ್ಖನಾದೆ - ಮನುಜಾಏಕೆ ಮುರ್ಖನಾದೆ ? ಪ.ಏಕೆ ಮೂರ್ಖನಾದೆ ನೀನುಕಾಕು ಬುದ್ಧಿಗಳನು ಬಿಟ್ಟುಲೋಕನಾಥನ ನೆನೆಯೊ ಮನುಜಾ ಅಪಮಕ್ಕಳು ಹೆಂಡರು ತನ್ನವರೆಂದುರೊಕ್ಕವನು ಗಳಿಸಿಕೊಂಡುಸೊಕ್ಕಿಂದ ತಿರುಗುವರೇನೊ ಹೇ ಮನುಜಾ 1ಕಕ್ಕಸದ ಯಮದೂತರು ಬಂದುಲೆಕ್ಕವಾಯಿತು ನಡೆಯೆಂದರೆಸಿಕ್ಕವರೆಲ್ಲ ಬಿಡಿಸುವರೇನೊ ಹೇ ಮನುಜಾ 2ಅರಿಷಡ್ವರ್ಗದ ಆಟವ ಬಿಟ್ಟುಪುರಂದರವಿಠಲನ ಹೊಂದಲುಬೇಕುಹರಿಯನು ಸೇರುವ ಮಾರ್ಗವ ನೋಡೋ ಹೇ ಮನುಜಾ 3
--------------
ಪುರಂದರದಾಸರು
ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮನಟ್ಟುಳಿದಶನವಾಯಿತು ಪ.ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿಬಿಟ್ಟು ಮುಂದಣ ಪಥವ - ಹೇ ದೇವಾ ಅಪಸತ್ಯ ಕಾಮ ಕರ್ಮವು ಧರ್ಮದ ಬಲಮತ್ತೆ ಅಡಗಿಹೋಯಿತುಎತ್ತ ನೋಡಲು ನೀಚವೃತ್ತಿಯೆತುಂಬಿಅತ್ಯಂತ ಪ್ರಬಲವಾಯ್ತೋ ಹೇ ದೇವಾ 1ಹೊತ್ತುಹೊತ್ತಿಗೆ ಹಲವು ಲಂಪಟತನದಲಿಚಿತ್ತ ಚಂಚಲವಾಯಿತುಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದುಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2ಪೇಳುವುದೇನಿನ್ನು ದುರ್ಜನರ ಸಂಗದೋಲಾಟ ಸೊಗಸಾಯಿತುಕೀಳು ಮೇಲು ಮೇಲು ಕೀಳಾಗಿ ನಡೆಯುವಕಾಲವೆಗ್ಗಳವಾಯಿತೋ ಹೇ ದೇವಾ3ಆಳುವ ಅರಸರಿಗೆಲ್ಲ ಕಾಂತನದಾಸೆಮೇಲು ಮೇಲಾಯಿತಯ್ಯನೀಲ ಮೇಘಶ್ಯಾಮ ನಿನ್ನಾಳೆಂಬರಿಗೆಕೂಳು ಹುಟ್ಟದೆ ಹೋಯಿತೋ ಹೇ ದೇವಾ 4ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದಅರಿವು ಇಲ್ಲದೆ ಹೋಯಿತುಕರಣಾಳು ಶ್ರೀ ಪುರಂದರವಿಠಲನೆ ನಿನ್ನಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5
--------------
ಪುರಂದರದಾಸರು