ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಜನವಾಗಲಿ ನಾನು ಭುಜಿಸುವುದು ಎಲ್ಲ ಪ ಅಜಪಿತನೆ ಅದರ ಅನುಸಂಧಾನವನು ಅರಿಯೆ ಅ.ಪ ದೇಹವೆಂಬುದೆ ಯಜ್ಞಶಾಲೆಯಾಗಿ ಮಹಯಜ್ಞಕುಂಡವು ಎನ್ನ ವದನವಾಗಿ ಆವಹನೀಯಾಗ್ನಿಯು ಮುಖದಲ್ಲಿ ಹೃದಯದೊಳು ಗಾರ್ಹಸ್ಪತೀ ದಕ್ಷಿಣಾಗ್ನಿಯು ಸುನಾಭಿಯಲ್ಲಿ 1 ಅರಿ ಪಂಚಾಗ್ನಿಯೊಳು ಆಕ್ಷಣದಿ ಪ್ರಾಣಾದಿ ಪಂಚರೂಪಗಳು ಹೋತಾಉದ್ಗಾತಾದಿ ಋತ್ವಿಕ್ಕುಗಳಾಗಿ ನಿಂತಿಹರೆಂದು2 ಆಹುತಿಯ ಕೊಡತಕ್ಕ ಶೃಕಶೃಕ್‍ಶೃವಗಳು ಬಾಹುಗಳು ಇಹಭೋಜ್ಯವಸ್ತುವೆಲ್ಲ ಆಹುತಿಯು ದೇಹಗತ ತತ್ವರು ಪರಮಾತ್ಮ ಬ್ರಾಹ್ಮಣರು ಜೀವ ದೀಕ್ಷಿತನು ಬುದ್ಧಿತತ್ಪತ್ನಿ 3 ಅಹಂಮಮತಾದಿ ಅರಿಷಡ್ವರ್ಗಗಳು ವುಹಯಜ್ಞದ ಯೂಪಸ್ಥಂಭದ ಪಶುಗಳು ಅಹರಹ ಬಹ ನೀರಡಿಕೆಯು ಕುಡಿವನೀರೆಲ್ಲವು ಯಜನಕಾರ್ಯದ ಮಧ್ಯ ಪರಿಷಂಚಾಮಿ4 ಇಷ್ಟಾದರನುಸಂಧಾನವನೆ ಕೊಡುಕಂಡ್ಯ ಶ್ರೇಷ್ಠಮೂರುತಿ ಶ್ರೀ ವೇಂಕಟೇಶ ನಿಷ್ಠೆಯೆನ್ನೊಳಗಿಲ್ಲ ಉರಗಾದ್ರಿವಾಸವಿಠಲ ಹೊಟ್ಟೆಹೊರೆವುದು ನಿನಗೆ ತುಷ್ಟವಾಗಲಿ ದೇವ 5
--------------
ಉರಗಾದ್ರಿವಾಸವಿಠಲದಾಸರು
ಲೋಕನೀತಿ ಮತ್ಸರಿಸುವವರಲ್ಲಿ ಮಾನ್ಯವಿರಲೀ ಪ ಬಚ್ಚಲಿಲ್ಲದ ಮನೆಯು ಸ್ವಚ್ಛತಾನಾಗಿಹುದೆ ಅ.ಪ ಅರಿಷಡ್ವರ್ಗಗಳು ತುಂಬಿಕೊಂಡಿಹ ದೇಹ ಪರಿಶುದ್ಧವಹುದೇನೊ ಆವಾಗಲೂ ಪರಿಪರಿಯಿಂದಲಿ ಪರಿವಾರ ಜನಗಳು ಪರಿಹಾಸ್ಯಮಾಡಿ ಅಘವ ಕದ್ದೊಯ್ವರಯ್ಯ 1 ಗುಣತ್ರಯಗಳಿಂದಲಿ ನಿಬಿಡವಾದೀದೇಹ ಗುಣಕಾರ್ಯ ಮಾಡದೇ ಬಿಡದೆಂದಿಗೂ ಅಣಿಯಾಗಿ ದುರ್ಗುಣಗಳೊಕ್ಕಣಿಸಿ ಪೇಳುವಡೆ ಗುಣವ ತಿದ್ದಲು ತಾವು ಋಣಿಯಾಗುವರಯ್ಯ2 ಅಭಿಮಾನವೆಂಬುದು ನಭೋಮಂಡಲವರೆಗಿಹುದು ಶುಭವೆಂತೊ ಡಾಂಭಿಕದ ಹೇ ಮಾನವಾ ತುಂಬಿತುಳುಕುವ ದುರಭಿಮಾನವನೆ ತೊಲಗಿಸಿ ಇಂಬು ತೋರುವರಯ್ಯ ಮನಸ್ಥೈರ್ಯಕೇ3 ಕಕ್ಕುಲತೆ ಪಡದೆ ನಕ್ಕುಸಂತೈಸಿಲಾಲಿಸುವ ತೆರದಿ ಅಕ್ಕರದಿ ತನ್ನ ಅಪರಾಧಗಳನೆಲ್ಲ ಲೆಕ್ಕಿಸದೆ ಪೇಳ್ವರದು ಉಪಕಾರವಯ್ಯ 4 ಮಚ್ಚರದಿ ನಿಂದಿಸೆ ಅಚ್ಚುತನ ಭಕುತರಿಗೆ ನಿಚ್ಚದಲಿ ಸ್ವಚ್ಛಭಕುತಿ ಇಹುದು ಮಚ್ಚರಕೆ ಸ್ವೇಚ್ಛೆಯಿಂದೆದುರು ಉಚ್ಚರಿಸದಿರೆ ಮೆಚ್ಚಿ ಕಾಯುವನಯ್ಯ ಶ್ರೀ ವೇಂಕಟೇಶ 5
--------------
ಉರಗಾದ್ರಿವಾಸವಿಠಲದಾಸರು
ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ 1 ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ 2 ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ 3 ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು 4 ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ 5 ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ6 ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ 7
--------------
ವ್ಯಾಸರಾಯರು