ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಬೋಧ ಪರಮಸುಖಕಾರಿ ಬಾರಿ ಬಾರಿಗೂ ಕೇಳೈ ಭವರೋಗೀ ಪ ಬಿಡು ಬಾಳಿನ ಭ್ರಮೆಯ ಸಂಸಾರಿ ದುಃಖದ ಬಾಳಿದು ವಿನಾಶಕಾರಿ ಇದರೊಳು ಸಿಗುತಿಹ ಸುಖವು ವಿಕಾರಿ ತಿಳಿಯೈ ಮುಕ್ತನಾಗಲಿದು ದಾರಿ 1 ಆರಿ ನಿನ್ನಯ ನಿಜವಾ ಸುವಿಚಾರಿ ಅರಿವೇ ನಿನ್ನಯ ಈ ಭವತಾರಿ ಬೇರಾವುದು ನಿನಗಾಗದು ದಾರಿ ಈ ನುಡಿ ಪೇಳುತಿಹುದು ಶೃತಿಸಾರಿ 2 ಜಾಗರಾ ಕನಸು ನಿದ್ರೆಯ ಮೀರಿ ಅಮರವಾಗಿರುವ ಪದವನೆ ತೋರಿ ಅದೆ ನೀನೆನ್ನುತ ಪರಿಪರಿ ಸಾರಿ ಶಂಕರಭೋಧವಿದುವೆ ಭವಹಾರಿ3
--------------
ಶಂಕರಭಟ್ಟ ಅಗ್ನಿಹೋತ್ರಿ
ನಿನ್ನೊಳು ನೀ ತಿಳಿಯೋ ಮನುಜ ಪ ಪರಮಾತ್ಮನೆ ನೀನಿರುವಿಯೊ ಮನುಜಾ ಅರಿತು ನೋಡು ನಿನ್ನಯ ನಿಜವಾ ಮರೆತಿರುವಿಯೊ ನೀ ನಿನ್ನಿರುವಿಕೆಯಾ ತೋರುವ ದೇಹವು ನಾನಲ್ಲೆಂದು 1 ನನಸಿನ ದೇಹವು ಕನಸಿನೊಳುಂಟೆ ನೆನಸಿ ನೋಡು ನಿನ್ನಿರುವಿಕೆ ಸಮವು ನನಸಿನ ದೇಹವು ನಾನಲ್ಲೆಂದು 2 ಗಾಢನಿದ್ರೆಯಲಿ ಅಡಗಿತು ಬುಧ್ಧಿಯು ಗಡನೆ ನೋಡು ನಿನ್ನಿರುವಿಕೆಯಾ ಜಡದೇಹವು ಮನಬುದ್ಧ್ಯಾದಿಗಳಿಂ ಬಿಡಿಯಾದಿರುವಿಕೆಯುಳಿವುದು ನೀನೇ 3 ಮೂರು ಜಾಗೆಯಲಿ ನಿರುತದೊಳಿರುತಿಹ ಇರವರಿವಾನಂದವೆ ನೀನೈ ಮರೆತು ಇದನು ನೀ ಬರಿದೇ ಮಿಡುಕುವಿ ದೊರಕುವದೇ ಸುಖ ಹೊರಗೆ ಹುಡುಕಲು 4 ತೋರಿಕೆ ಅನಿಸಿಕೆಗಳು ಕ್ಷಣಭಂಗುರ ಮರಣರಹಿತ ಪರವಸ್ತುವು ನೀನೆ ಅರಿವೇ ಪರಬ್ರಹ್ಮವು ತಾನೆಂದು ವರಶ್ರುತಿ ಸಾರಿತು ಬ್ರಹ್ಮನೆ ನೀನೈ 5 ಗರುವಿನ ಕರುಣದಿ ತಿಳಿಯೇ ವಿಷಯವ ಮರುಳಾಗದಿರೈ ಮಾಯಾಕಾರ್ಯಕೆ ಗುರುಶಂಕರನಾ ಪದವಿಯ ಪಡೆಯುವಿ6
--------------
ಶಂಕರಭಟ್ಟ ಅಗ್ನಿಹೋತ್ರಿ
ಪರ ಅಕ್ಷರವ ಧ್ರುವ ಕ್ಷರ ಅಕ್ಷರವ ಸೆÉರಗ ಪಿಡಿಯೋ ಗುರು ಮುಖದಲಿ ನೀ ಪೂರ್ಣ ಪರಮಾನಂದ ಸುಖದೋರುವ ಬಗೆ ಅರಿಯೋ ಕೂಟ ಸ್ಥಳದಲಿ ಪ್ರಾಣಿ 1 ರೇಚಕ ಪೂರ್ವಕದನುಭವ ತಿಳಿದು ಯೋಚಿಸಿ ನೋಡಲಿಂದ ಸೂಚಿಸಿ ತಾನೆ ಭಾಸುವ ಕ್ರಮವಿದು ಅಚರಿಸೋ ಅನುಭವದಲಿ ಪ್ರಾಣಿ 2 ಕ್ಷರ ಅಕ್ಷರವ ತಿಳಿಯದೆ ಬರೆÀವಾ ಅಕ್ಷರದಾ ಖೂನ್ಯಾಕ ಎರಡೇ ಮಾತಿನ ಅರಿವೇ ಅದರೆ ಪರಲೋಕಕ್ಕೆ ಸೋಪಾನವಿದು ಪ್ರಾಣಿ 3 ಇದೇ ಹೇಳಿದ ಗೀತೆಯಲ್ಲಿ ಶ್ರೀಕೃಷ್ಣನೆ ತಾಂ ಅರ್ಜುನಗೆ ಇದರಿಟ್ಟಿದು ಘನಸುಖ ಆ ಮಹಿಮನೆ ಇದರಿಂದಲಿ ತಿಳಿವದು ನೀ ಪ್ರಾಣಿ 4 ಇಡಾ ಪಿಂಗಳ ನಾಡಿ ನಡುವಿದು ಸಾಧಿಸಿ ಮಾತಿನ ಖೂನ ಎಡಬಲ ನೋಡದೆ ಪಡಕೋ ಮಹಿಪತಿ ಒಡನೆ ನಿನ್ನೊಳು ನಿಧಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮತವಿದು ಮುಚ್ಚಿ ಮುಚ್ಚಿಲ್ಲಾ | ಹುಚ್ಚರಾದರು ಈ ಜನರೆಲ್ಲಾ ಪ ಶಿವ ಹೇಳಿದನೋ ಶಾಂಭವಿಗೆ | ಜವನ ಭಯವಿಲ್ಲಾ ಅನುಭವಿಗೆ1 ನಡೆದರೆಲ್ಲಾ ಸಂತರು ಹಿಂದೆ | ಪಡೆದರು ಸದ್ಗತಿ ಇದರಲಿ ಒಂದೆ 2 ಭವಪಾತಕಿಗೆ ಅರಿವೇ ಇಲ್ಲಾ | ಭವತಾರಕ ತಾ ಮರೆ ಮಾಡಿಲ್ಲಾ 3
--------------
ಭಾವತರಕರು
ಮನವೇನೆಂಬುದನರಿಯೋ ಮನುಜ ಮನ ವೇನೆಂಬುದನು ಧ್ರುವ ಮನವೇನೆಂಬುದನನುಭವಕೆ ತಂದು ಖೂನದಲಿಡದೆ ಜ್ಞಾನದಲಿ ನಾನಾ ಶಾಸ್ತ್ರವ ಓದಿ ನೀ ಅನುದಿನ ಏನು ಘಳಿಸಿದ್ಯೊ ಮರುಳ ಮನುಜ1 ಉತ್ಪತ್ತಿ ಸ್ಥಿತಿ ಲಯ ಕರ್ತನೆಂದೆನಿಸಿ ಪ್ರತ್ಯೇಕರವನು ತೋರುತಲಿ ಮತ್ತೆ ಬ್ಯಾರ್ಯಾದ ಪರಬ್ರಹ್ಮೆಂದು ತಾ ಚಿತ್ತ ಭ್ರಮಿಸುದು ದಾವುದೊ ಮನುಜ 2 ಏಕೋ ವಿಷ್ಣು ವೆಂದೆನಿಸಿ ಮುಖದಲಿ ಪೋಕ ದೈವಕೆ ಬಾಯದೆರೆಸುತಲಿ ನಾಕುವೇದವ ಬಲ್ಲವನೆಂದೆನಿಸಿ ವಿಕಳಿಸುತಿಹ್ಯದು ದಾವುದೊ ಮನುಜ 3 ಉತ್ತಮೊತ್ತಮರ ಕಂಡಾಕ್ಷಣ ಹರುಷದಿ ನಿತ್ಯಿರಬೇಕೀ ಸಹವಾಸವೆನಿಸಿ ಮತ್ತೊಂದರಘಳಿ ಗಾಲಸ್ಯವ ತೋರಿ ಒತ್ತಿ ಆಳುವದು ದಾವುದೊ ಮನುಜ 4 ಪಾಪವ ಮಾಡಬಾರದು ಎಂದೆನಿಸಿ ವ್ಯಾಪಿಸಿಗೊಡದೆ ಕಾಣದನಕ ಉಪಾಯದಲಿ ಅಪಸ್ವಾರ್ಥವು ಇದಿರಡೆ ಅಪಹರಿಸುವದು ದಾವುದೊ ಮನುಜ 5 ಪ್ರಾಚೀನವೆ ತಾಂ ನಿಜವೆಂದರುಹಿಸಿ ಆಚರಣೆಯ ಬ್ಯಾರೆ ತೋರುತಲಿ ನೀಚ ಊಚ ಹೊಡೆದಾಡಿಸುತ ನಾಚಿಸುತಿಹುದು ದಾವೊದೊ ಮನುಜ 6 ಸಗುಣ ನಿರ್ಗುಣ ಬ್ಯಾರೆರಡನೆ ತೋರಿ ಬಗೆ ಬಗೆ ಸಾಧನ ತೋರಿಸುತ ಬಗೆದೊಂದೆವೆ ಭಕುತಿಗೆ ನೆಲೆಗೊಳಿಸಿದ ಪ್ರಗತಿ ತೋರುವುದು ದಾವುದೊ ಮನುಜ 7 ಧ್ಯಾನಕೆ ಕೂಡಿಸಿ ಮೋನವ ಹಿಡಿಸಿ ಅನುದಿನ ಜಪವನು ಮಾಡಿಸುತ ಘನವಾಗಿಹÀ ಅನುಭವ ಸುಖದಾಟದ ಖೂನ ದೋರಿಸುದು ದಾವುದೊ ಮನುಜ 8 ಮರವಿಗೆ ತಾನೆ ಅರಿವೇ ಕೊಟ್ಟು ತಿರಿವು ಮರವಿನಂಕುರದ ಕುರ್ಹುವಿನ ಇರಹು ತೋರಿಸುದು ದಾವುದೊ ಮನುಜ 9 ಮನವಿನ ಮೂಲವು ತಿಳಿವದು ಭಾನುಕೋಟಿ ಪ್ರಕಾಶನ ಕರುಣದಲಿ ನಾನು ನಾನೆಂಬವರಿಗೆ ಇದರ ಖೂನ ಲೇಶ ತಿಳಿಯದೊ ಮನುಜ 10 ಹರಿಯೆ ಗುರುವೆಂದರುಹಿಸಿ ಆತ್ಮಲಿ ಶರಣಹೋಗುವ ಭಾವನೆದೋರಿ ತರಳಮಹಿಪತಿ ಗುರುದಯ ಪಡಕೊಂಡಿಂದು ಯೋಗ್ಯನಾಗುವದಿದೊಂದೆ ಮನುಜ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮರವೆ ಮರವೆ ಮಾಡಿತೋಅಂತರಂಗದಲಿ ಭೋರೆಂದು ತುಂಬಿಅಂತು ಅಂತೆನಲು ಕೂಡದು ಪ್ರಣವನಾದ ಪ ಹೊಟ್ಟೆಗುಣ್ಣುವುದನೆ ಮರೆಸಿತು ಈ ಪ್ರಣವನಾದಮುಟ್ಟು ಚಟ್ಟನೆ ಮರೆಸಿತುಕೆಟ್ಟಕೇಡನೇನ ಹೇಳಲಿಉಟ್ಟ ಬಟ್ಟೆಯ ಅರಿವೇ ಇಲ್ಲ 1 ಆಸೆಯೆಂಬುದ ಮರೆಸಿತು ಈ ಪ್ರಣವನಾದದ್ವೇಷವೆಂಬುದು ತೊರೆಸಿತುನಾಶವಾಯಿತು ಜಪತಪವೆಲ್ಲಮೋಸವೆನಗಿಂತು ಮಾಡಿತು2 ಧ್ಯಾನವೆಂಬುದು ಮರೆಸಿತು ಈ ಪ್ರಣವನಾದಓಂಕಾರವೆಂಬುದು ಕಲಿಸಿತುಜ್ಞಾನಮೂರುತಿ ಚಿದಾನಂದತಾನೆ ತಾನೆ ತಾನೆ ಎಂಬ 3
--------------
ಚಿದಾನಂದ ಅವಧೂತರು