ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು
ಲಕ್ಷ್ಮೀ ಮನೋಜ್ಞ ವಿಠಲ | ಕಾಪಾಡೊ ಇವಳಾ ಪ ಪಕ್ಷೀಂದ್ರವಹ ಹರಿಯೆ | ಇಕ್ಷುಶರ ಪಿತನೇ ಅ.ಪ. ಸುಕೃತ | ದಿಂದ ಫಲ ತೊರೆತಿಹುದುಮಂದಾಕೀನಿ ಜನಕ | ಇಂದಿವಳ ಪೊರೆಯೆ 1 ಹರಿಯೆ ಪರತರನೆಂಬ | ಸುರರ ಮನೊ ಭಾವದಲಿಹರಿ ಗುರು ಹಿರಿಯರಲಿ | ವರಭಕ್ತಿಯುತಳೂತರತಮದ ಸುಜ್ಞಾನ | ವರಭೇದ ಪಂಚಕದಅರಿವಿತ್ತು ಪೊರೆ ಇವಳ | ಮರುತಾಂತರಾತ್ಮ 2 ಕಂಸಾರಿ ಪೂಜೆ ಎಬಂಶವನು ತಿಳಿಸುತ್ತ | ಕಾಪಾಡೊ ಹರಿಯೇಸಂಶಯವುರಹಿತ ತ | ತ್ವಾಂಶ ದರಿವಿತ್ತು ವಿಪಾಂಸಗನು ಹರಿಯಪದ | ಪಾಂಸುವನೆ ತೊಡಿಸೋ 3 ಅಕ್ಷಯ ಫಲದಾತಈಕ್ಷಿಸೋ ಇವಳ ಕರು | ಣೇಕ್ಷಣದಿ ಹರಿಯೇ 4 ಗೋವತ್ಸ ದನಿಕೇಳಿ | ಧಾವಿಸುವ ಪರಿಯಂತೆಶ್ರೀವರನೆ ನೀನಾಗಿ | ಓವಿ ಪೊರೆ ಎಂಬಾಆವ ಈ ಬಿನ್ನಪವ | ನೀವೊಲಿದು ಸಲಿಸುವುದುಗೋವಿದಾಂಪತಿ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಲಕ್ಷ್ಮೀಶ ನರಹರಿ ವಿಠ್ಠಲನೆ ಸಲಹೊ ಪ ಪಕ್ಷೀಂದ್ರ ವಾಹನನೆ ಈಕ್ಷಿಸುತ ಕರುಣದಿಂರಕ್ಷಿಸಲಿ ಬೇಕಿವಳ ಲಕ್ಷ್ಮಣಾಗ್ರಜನೇ ಅ.ಪ. ದೀನಜನ ಮಂದಾರ ಜ್ಞಾನದಾಯಕನೆ ಸುರ-ಧೇನು ಭಕ್ತರಿಗೆ ಕಾಮಿತವ ಕೊಡುವಲ್ಲಿ |ನೀನಿವಳಿಗೇ ಮೋಕ್ಷಜ್ಞಾನವನೇ ಪಾಲಿಸುತಸಾನುರಾಗದಿ ಸಲಹೊ ಪ್ರಾಣಾಂತರಾತ್ಮ 1 ಸೃಷ್ಟಿ ಸ್ಥಿತಿ ಸಂಹಾರ ಕರ್ತನೀನೆಂದೆನಿಪೆವೃಷ್ಟಿಕುಲ ಸಂಪನ್ನ ಜಿಷ್ಣು ಸಖ ಹರಿಯೇ |ಕಷ್ಟನಿಷ್ಠೂರಗಳ ಸಹಿಸುವಡೆ ಧೈರ್ಯವನುಕೊಟ್ಟು ಕೈ ಪಿಡಿಯುವುದು ಕೃಷ್ಣ ಮೂರುತಿಯೇ2 ಪತಿಯೆ ಪರದೈವ ವೆಂಬುನ್ನತದ ಮತಿಯಿತ್ತುಹಿತದಿಂದ ಹರಿಗುರು ಸೇವೆಯಲಿ ರತಿಯಸತತ ನಿನ್ನಯ ನಾಮ ಸ್ಮøತಿಯನ್ನೇ ವದಗಿಸುತಕೃತಿಪತಿಯೆ ನೀನಿವಳ ಉದ್ಧರಿಸು ಹರಿಯೇ 3 ತಾರತಮ್ಯ ಜ್ಞಾನ ವೈರಾಗ್ಯ ಭಕುತಿ ಕೊಡುಮೂರೆರಡು ಭೇಧಗಳ ಅರಿವಿತ್ತು ಹರಿಯೇಮಾರಪಿತ ಇವಳ ಹೃದ್ವಾರಿಜದಿ ತವ ರೂಪತೋರುತಲಿ ಸನ್ಮುದವ ಬೀರುವುದು ಹರಿಯೇ 4 ಸರ್ವಾಂತರಾತ್ಮನೆ ಗುರುಡವಾಹನ ದೇವಸರ್ವಜ್ಞ ಸರ್ವೇಶ ಮಮ ಕುಲ ಸ್ವಾಮೀ |ನಿರ್ವಿಘ್ನದಿಂದೆನ್ನ ಪ್ರಾರ್ಥನೆಯ ಪೂರೈಸೊಸರ್ವಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದ ಗುರು ಗೋವಿಂದ ವಿಠಲ ಪೊರೆ ಇವನಾ ಪ ತರಳನನು ಒಪ್ಪಿಸಿಹೆ | ಕರಪಿಡಿಯೊ ಹರಿಯೆ ಅ.ಪ. ಮರುತ ಮತದಲಿ ಭಾವಿ | ಮರುತರೆಂದೆನಿಸುತಿಹಗುರುರಾಜ ಸಚ್ಚರಣ | ಕರುಣ ಪಾತ್ರಾಇರುವ ಈ ಶಿಶುವ ತವ | ಚರಣ ಕಮಲಂಗಳಿಗೆಅರ್ಪಿಸುತ ಭಿನ್ನವಿಪೆ | ನಿರುತ ಪೊರೆಯೆಂದು 1 ಗುರು ಹಿರಿಯರ ಸೇವೆ | ನಿರುತ ಗೈಯ್ಯುವ ಮನವಕರುಣಿಸುತ ಧರೆಯೊಳಗೆ | ಮೆರೆಸೊ ಕೀರ್ತಿಯಲೀಬರ ಬರುತ ವೈರಾಗ್ಯ | ಹರಿ ಗುರೂ ಸದ್ಭಕ್ತಿಉರುತರದ ಸುಜ್ಞಾನ | ಪರಿಪಾಲಿಸಿವಗೇ 2 ಭೃತ್ಯ ವತ್ಸಲನೇ 3 ಸರ್ವಗುಣ ಸಂಪೂರ್ಣ | ಸರ್ವವ್ಯಾಪ್ತ ಸ್ವಾಮಿನಿರ್ವಿಕಾರನೆ ದೇವ | ಶರ್ವ ವಂದ್ಯಾಸರ್ವದಾ ಸರ್ವತ್ರ | ದುರ್ವಿಭಾವ್ಯನೆ ಹರಿಯೆಪ್ರವರ ತವ ಸಂಸ್ಮರಣೆ | ಸರ್ವದಾ ಈಯೋ 4 ಜೀವ ಪರತಂತ್ರತೆಯ | ಭಾವುಕಗೆ ಅರಿವಿತ್ತುಭಾವದೊಳು ಮೈದೋರೊ | ದೇವದೇವೇಶಾಈ ವಿಧದ ಭಿನ್ನಪವ | ನೀ ವೊಲಿದು ಸಲಿಸುವುದುಮಾವಿನೋದಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀನಿವಾಸಾದ್ರಿ ವಿಠಲ | ನೀನೆ ಪೊರೆ ಇವಳಾ ಪ ಗಾನಲೋಲನೆ ಕೃಷ್ಣ | ದೀನಮಂದಾರಅ.ಪ. ಕಲುಷ ಕರ್ಮದಿನೊಂದು ಇಳೆಯೊಳಗೆ ಮಧ್ವಮತಜಲಧಿಯಲ್ಲುದಿಸಿಹಳೊ | ಜಲಜಾಕ್ಷ ಹರಿಯೇಒಲವಿನಿಂದಿವಳನ್ನು | ಸಲಹಲ್ಕೆ ಪ್ರಾರ್ಥಿಸುವೆಕಲಿಮಲಾಪಹ ಕೃಷ್ಣ | ಚೆಲುವ ಮಾರುತಿಯೇ 1 ಮೂರ್ತಿ | ಪಾರ್ಥ ಸಾರಥಿಯೇ 2 ಪತಿ ಸೇವೆಯಲಿ | ಎರಗಲೀಕೆಯ ಮನಸುದುರಿತ ದುಷ್ಕøತ ಹರವು | ಗುರು ಸೇವೆ ಎಂದೆಂಬಅರಿವಿತ್ತು ಈಕೆಯನು | ಸಾಧನದಲಿರಿಸೋ 3 ಜಿಹ್ವೆ | ಶ್ರೀ ಪುರುಷೋತ್ತಮಾನಿರುಪಾದಿಕ ಹಿರಿಯರ | ಚರಣ ಸೇವೆಗೆ ಮನವುತ್ವರೆಗೊಳ್ಳುವಂತೆಸಗೂ | ಶಿರಿ ವೆಂಕಟೇಶಾ 4 ಕರಿವರದ ಧ್ರುವವರದ | ತರಳೆ ದ್ರೌಪದಿವರದಕರುಣಾಳು ನೀನೆಂದು | ಮೊರೆ ಬಿದ್ದು ಪೇಳ್ವೆಕರುಣೆಯನು ಪೊರೆ ಎಂಬ | ಬಿನ್ನಪವ ಸಲಿಸಯ್ಯಶಿರಿಯಿಂದ ವಂದ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು