ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ನಾನು | ಸಾಧುರಾ ಮಹಿಮೆಯನು | ಮನವ ವುನ್ಮನಮಾಡೀ | ಘನಸುಖದೊಳುಕೂಡಿ | ಆನಂದದೊಳಗಿಹನು ಪ ಬಹುಮಾತವನಾಡಾ | ಮೌನವಹಿಡಿದುಕೂಡಾ | ಸಹಜದಿ ನುಡಿವಂದಾ | ನಾಡಿದ ರದರಿಂದಾ | ಸ್ವಹಿತದ ಸುಖನೋಡಾ 1 ಅರಿಯಾನಂತಿಹನಲ್ಲಾ | ಅರಿವನು ಉಳಿದಿಲ್ಲಾ | ಅರಹು ಮರಹು ಮೀರಿ | ಕುರ್ಹುವಿನ ಮನೆಸೇರಿ | ಅರಿಸುಖ ಸಮವೆಲ್ಲಾ 2 ಸಾಧುರ ನಿಜವೆಲ್ಲಾ | ಸಾಧು ಆದವ ಬಲ್ಲಾ ಸಾಧುರ ವೇಷದಿ | ಉದರವ ಹೊರೆಯುತಾ | ಬೋಧಿಸುವದಲ್ಲಾ 3 ಆಶೆಯಂಬುದು ಬಿಟ್ಟು ವೇಷವ ಕಳೆದಿಟ್ಟು | ಲೇಸಾಗಿ ಗುರುವರ | ಮಹಿಪತಿಸ್ವಾಮಿಯಾ | ಧ್ಯಾಸದಿ ಬೆರೆತಿಹನು 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಲಂ ಗುರುರಾಜಗೆ ಮಂಗಲ ಪರಮಾನಂದಸ್ವರೂಪಗೆ ಪ ಜೀವÀಪರಮರೈಕ್ಯವ ತಿಳುಹಿಸುವಾ ದೇವನೆ ನೀನೆನ್ನುತ ಬೋಧಿಸುವಾ ಸಾವು ಸಂಕಟಗಳ ಮೂಲವ ಕಡಿಯುವಾ ಪಾವನಾತ್ಮ ಘನಜ್ಞಾನರೂಪಗೆ 1 ಶೋಧಿಸಿ ದೇಹತ್ರಯಗಳ ಕಳಹಿ ಬಾಧರಹಿತ ಪರಮಾತ್ಮನ ಅರಿವನು ಬೋಧಿಸಿ ಅನುಭವದಲಿ ನೆಲೆಸಿದಗೆ 2 ತೋರಿಕೆ ಅನಿಸಿಕೆ ಎನಿಸುವ ದ್ವೈತವ ಧೀರತನದಿ ಸುಳ್ಳೆಂದು ತಿಳಿಸುವಾ ನಾರಾಯಣಗುರುವರನ ಕೃಪಾಪ್ರಿಯ ಪೂರಣಬ್ರಹ್ಮಸ್ವರೂಪ ಶಂಕರಗೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ವಂದಿಪೆ ಶ್ರೀಮನ್ನಾರಾಯಣಗೆ ವಂದಿಪೆ ಅಮ್ಮ ಲಕ್ಷ್ಮೀದೇವಿಗೆ ಪ ವಂದಿಪೆ ವಿಶ್ವಕ್ಸೇನರಿಗೆ ಕುಂದದಿರಲಿ ಎನ್ನ ಸನ್ಮತಿ ಎಂದು ಅ.ಪ ವಂದಿಪೆ ನಾ ಮೊದಲಾಳ್ವಾರರಿಗೆ ಅಂದದಿ ಹರಿಯ ತೋರಿಕೊಟ್ಟರಿಗೆ ಕಂದಮಿಳಲಿ ಸೊಲ್ವ ನುಡಿಗಳಿಗೆ ಪ್ರ- ಬಂಧದಿವ್ಯಗಳ ಬೆಳಗಿಸಿದವರಿಗೆ 1 ವಂದಿಪೆ ವಂದಿಪೆ ಆಚಾರ್ಯರಿಗೆ ಚಂದದಾ ಯತಿತ್ರಯರುಗಳಿಗೆ ಸುಂದರ ಶ್ರೀವೈಷ್ಣವ ತತ್ವಗಳನು ಹೊಂದಿಸಿ ಬಂಧಿಸಿ ಸ್ಥಾಪಿಸಿದವರಿಗೆ 2 ಇನ್ನು ವಂದಿಪೆ ಗುರುಪೀಠಕ್ಕೆ ಚೆನ್ನ ತಿರುನಾರಾಯಣಪುರಕೆ ಉನ್ನತ ರಂಗದಾಸಯತಿವರ್ಯಗೆ ಸನ್ನುತ ಪಿತಾನುಜ ಶಾಮದಾಸರಿಗೆ 3 ಸಾಜದಲೆನ್ನಲಿ ಅರಿವನು ಮೂಡಿಸಿ ಓಜನನಾಗಿಸೆ ಕೇಶವ ನಾಮದಿ ಆರ್ಜಿಸಿ ಉಪಾದಾನದಿ ಬಳಲಿದ ಪೂಜ್ಯಪಿತ ವೆಂಕಟರಂಗಾರ್ಯರಿಗೆ 4 ವಂದಿಪೆ ಕೊನೆ ಮೊದಲಿಲ್ಲದೆ ವಂದಿ- ಪೆಂ ದಾಸನ ಮಾಡಿದ ದೇವನಿಗೆ ತಂದೆ ಜಾಜಿಪುರಾಧೀಶನಿಗೆ ಮುದ- ದಿಂದ ಶ್ರೀ ಚೆನ್ನಕೇಶವಗೆ 5
--------------
ನಾರಾಯಣಶರ್ಮರು
ವಾಗೀಶವಂದಿತ ಸಲಹೈ ವರದಾತ ಪೊರೆಯೈ ಪ. ಕರಿ ಮಕರಿಗೆ ಸಿಕ್ಕಿ ಕರೆಕರೆ ಪಡುತಲಿ ಹರಿಹರಿ ಪೊರೆಯೆನೆ ಭರದಿ ನೀ ಪೊರೆದೆಯೈ 1 ತರುಣಿಯು ಮೊರೆಯಿಡೆ ತ್ವರಿತದಿಂ ವರವಿತ್ತೈ 2 ಕಂದನು ಕೂಗಲು ಕಂಬದಿಂ ಬಂದೆಯೈ ತಂದೆ ನೀನೆಂದೆನೆ ಬಂದು ಕೈಪಿಡಿ ದೊರೆ 3 ಅರಿಗಳಟ್ಟುಳಿಯಿಂದೆ ಪರಿಪರಿಯಿಂ ನೊಂದೆ ಅರಿವನು ಕರುಣಿಸಿ ನರಹರಿ ಸಲಹೆಂದೆ 4 ಶೇಷಭೂಷಣವಿನುತ ಶೇಷಶಯನ ಮಹಿತ ಶೇಷಶೈಲೇಶನೆ ಪೋಷಿಸೈ ಶ್ರೀಶನೆ 5
--------------
ನಂಜನಗೂಡು ತಿರುಮಲಾಂಬಾ
ಹಾಸ್ಯದ ಮಾತಿದು ಮಾನವಗೆ ವಿಷಯೇಚ್ಛೆಯ ಜೀವನವೆಂಬುದು ಶಾಶ್ವತ ಶಾಂತಿಯ ನೀಡುವ ನಿನ್ನಯ ಪದವನೆ ಮೆರೆತಿಹದು ಗುರುವೇ ಈಶ್ವರನೀತನೆಂದು ಸಾರಿತು ಶೃತಿ ಇದ ಕೇಳುತ ನಾ ಕರುಣಾ ನಿಧಿಯೇ ನಿನ್ನ ಹೊರತಿ ನ್ನನ್ಯರು ಗತಿಯಿಲ್ಲೆನ್ನುತ ನಾ ಚರಣಕಮಲಕೆ ಮೊರೆಹೊಕ್ಕೆ ಪರಮಾನಂದಾತ್ಮ ಸ್ವರೂಪದಾ ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ
--------------
ಶಂಕರಭಟ್ಟ ಅಗ್ನಿಹೋತ್ರಿ