ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿದು ಗುರುವಿನ ನೀ ಅರಿಯೊ ಸುಹಿತಾರ್ಥಿಯ ನೆರೆಯೊ ದೀರ್ಘದಂಡಹಾಕಿ ತರಣೋಪಾಯ ಮೂರ್ತಿಯ ಬೆರಿಯೋ ಕುರುವ್ಹ ತಿಳಿವ ಪರಮಭಕ್ತಿ ಮನೆಮೂರ್ತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 1 ಕರೆವ ಮಳೆಯು ಕರುಣಿಸಿನ್ನು ಪರಮದಯ ವೃತ್ತಿಯ ಶರಣ್ಹೋಕ್ಕಾಶ್ರೈಸೊ ನೀನು ತ್ವರಿತ ಶ್ರೀಪತಿಯ ಮರಿಯದೆ ಕೊಂಡಾಡಬೇಕು ಧರೆಯೊಳಿದೆ ಕೀರ್ತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ 2 ಯರಕವಾಗಿ ಸರಕನಿನ್ನು ನೀನು ಕರಕೊ ದೃಢಭಕ್ತಿಯಾ ಅರಕಕೋಟಿ ತೇಜನಂಘ್ರಿ ಹರಿಕಿಸೊ ನೀ ಪೂರ್ತಿಯಾ ಗರಕನೆವೆ ಅರಿಕೆಮಾಡಿಕೊಂಡು ಸುಸಂಗತಿಯ ತರಕೈಸಿಕೊಳ್ಳು ಶ್ರೀಪಾದ ಪೂರ್ಣಗುರುಮೂರ್ತಿಯ 3 ಏರು ಅರು ಚಕ್ರ ನೋಡಿ ತಾರಿಸುವ ಸ್ಥಿತಿಯ ಅರವೆ ಅರವೆ ಆಗಿ ದೋರುತದೆ ಸುಜಾಗ್ರತಿಯ ಎರಗಿ ಹರುಷದಿಂದ ಪಡೆಯೊ ಪರಮ ವಿಶ್ರಾಂತಿಯ ಸ್ಮರಿಸೊಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ 4 ಸುರರ ವಂದ್ಯ ಪರಮಭೇದ್ಯ ಅರಿಯಾ ಪರಗತಿಯ ಸಾರತಿಹ ಶ್ರುತಿವಾಕ್ಯ ಕೇಳೊ ಇಟ್ಟು ಪ್ರೀತಿಯ ತ್ಯರನೆ ತಿಳುಹಿಸಿಕೊಟ್ಟ ಗುರುವಿಗೆ ನಿತ್ಯಪ್ರತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 5 ಗುರುಮೂತ್ರ್ಯಾಭೇದ್ಯವೆಂಬ ಗುರುತಕೇಳೋ ಅರ್ಥಿಯ ಕುರಹು ದೋರಿಕೊಟ್ಟ ಗುರುವಿಗೆ ನೀ ಮಾಡೊ ಸ್ತುತಿಯ ಮರೆದುಬಿಡೊ ತರಳತನದ ಹರುವಾ ನಿನ್ನಭ್ರಾಂತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ6 ತರತರದಿ ಸಾಂದ್ರವಾಗಿ ದೋರುತಿಹ ದೀಪ್ತಿಯ ಪ್ರಾರ್ಥಿಸಬೇಕೊಂದೆ ಸರ್ವಕಾಲ ವಸ್ತುಗತಿಯ ಪರಿಪರಿಸುಖ ದೋರುವ ಕರುಣಾನಂದ ಯತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 7 ಸರ್ವಸುಖದೋರ್ವದೊಂದೆ ಸರ್ವಫÀಲ ಶ್ರುತಿಯ ಸರ್ವದಾವೆಂಬುವದು ನವರತ್ನಮಾಲೆ ಸ್ತುತಿಯ ಪೂರ್ವಕರ್ಮ ಹರಿಸುವ ಸದ್ಗುರು ಸಾಮಥ್ರ್ಯಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 8 ಶರಣಜನರಾಭರಣವಿದೆ ಅರಿಯಬೇಕೀವಾರ್ತೆಯ ತರಳ ಮಹಿಪತಿ ನೀ ಮಾಡೊ ಇರುಳ ಹಗಲ ಆರ್ಥಿಯ ಕರವ ಪಿಡಿದು ಪಾರಗೆಲಿಸುವ ನಿನ್ನ ಸಾರ್ಥಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿಯಲ್ಲಿ ಕೇಳು ಶ್ರವಣದಲ್ಲಿ ಪೇಳು ಹರಿಯೇ ದೈವವೆಂದು ಪ ನಿಲ್ಲಿಸು ಹರಿಯ ವೊಲಿಸುವಳಿಗೆ ಗಳಿಸು ಜ್ಞಾನ ವಳಿಸು ಪಾಪಕಲಿಯಾ ಬೆಳಿಸು ಘಳಿಸು ತಾಮಸ ಸುಳಿಸು ಮಾರ್ಗ ಬೆಳಿಸು ಚೆನ್ನಾಗಿ ಗೆಲಿಸು ವ್ರತವ ಚಲಿಸು ಯಾತ್ರೆಯ ಇಳಿಸು ಮಮತೆ ಕಲಿಸು ಮಿಥ್ಯವ ಥಳಿಸುವಂತೆ ಕೇಳು ಮನವೆ 1 ಕೀರ್ತನೆ ಕಾಡು ರಂಗನ ಬೇಡು ದೈನದಿ ನೀಡು ಹಸ್ತವ ಬಾಡು ನಿನ್ನೊಳಗಾಡು ತಾಡುತಾ ಕೇಡು ಒದೆದು ಬಿಡು ನೆಚ್ಚ ದೀಡ್ಯಾಡ್ಯೋ ಕಾಯವ ಗೂಢದ ಮಾತಾಡು ಕಲಾಪ ಬೇಡರಟ್ಟಲು ಮೋಡು ನಿಲ್ಲದೆ ಪಾಡು ಪಂಥವಾ 2 ನೆರಿಯೊ ವೊಡನೆ ಸುರಿಯೊ ನಾಮವ ಅರಿಯೊ ಮಹಿಮೆ ಮರಿಯೊ ವ್ಯಾಕುಲ ಮೆರಿಯೊ ಗುಪ್ತದಿ ಜರಿಯೊ ಹೀನರಾ ಸರಿಯೊ ಮಿರಲು ಗುರಿಯೊ ತಮಕ್ಕೆ ಸರಿಯೆ ಲಾಲಿಸು ಧರಿಯೊಳಗೆ ನೀ ವಿಜಯವಿಠ್ಠಲನೆಂದು 3
--------------
ವಿಜಯದಾಸ
ಥಳ ಗುಟ್ಟೊಳುತೊಬ್ಬಳೆವಾಗೆದ ತಾ ವಳಗುಟ್ಟಲೆ ದಟ್ಟದ ಬೆಳಗು ತಾಂ ತಿಳಿಗೊಟ್ಟರೆ ಸದ್ಗುರು ಭಾಸುದು ತಾ ಕಳೆಮುಟ್ಟಿದು ನೋಡಲು ಶಾಶ್ವತ 1 ಅರಿಯೊ ಸುರಿಯೊ ಪರಮಾಮೃತ ಬೆರಿಯೊ ಗುರುವೆಂದು ನೀ ಸುಗುರುತಾ ಜರಿಯೊ ಮರಿಯೊ ಮದಗರ್ವನೆ ತಾ ನೆರಿಯೊ ಗುರುಪಾದಕೆ ನೀ ತ್ವರಿತ 2 ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ ಅಳಿ ತರ್ಕದ ಮಾತಿನ ಗರ್ವನೆ ತಾ ತೊಳಿ ನರ್ಕಕೆ ಬೀಳುವ ತಾಮಸ ತಾ ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3 ಬಿಡು ಮರ್ಕಟ ಬುದ್ಧಿಯ ಭಾವನೆ ತಾ ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ ಸುಡು ನರ್ಕಕೆ ಬೀಳುವ ಪಾಶÀವ ತಾ ತೊಡು ಮರ್ಕಟವಾದ ಸದ್ಗುಣ ತಾ 4 ಹಿಡಿಯೊ ಪಡಿಯೊ ದೃಢಭಾವನೆ ತಾ ಜಡಿಯೊ ಒಡನೆ ಗುರುಪಾದನಿ ತಾ ಕಡಿಯೊ ಬಿಡದೆ ಭವಬಂಧನ ತಾ ಅಮೃತ 5 ನಡಿಯೊ ನುಡಿದಂತೆನೆ ಸನ್ನಮತ ಹಿಡಿಯೊ ಪಡೆದಂತೆನೆ ಪಾದವ ತಾ ಇಡದಂತೆನೆ ತುಂಬೆದ ಸದ್ಘನ ತಾ ಕಡೆಗಾಂಬುದು ನೋಡಿದು ಶಾಶ್ವತಾ 6 ತಿಳಿಯೊ ಬಳಿಯೊ ಒಳಗುಟ್ಟನೆ ತಾ ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ ಕಳಿಯೊ ಅಳಿಯೊ ಅನುಮಾನವ ತಾ ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7 ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ ಥಳಗುಟ್ಟುದು ಸಾಸಿರ ಪದ್ಮ ದಳ ನೆಲೆಗೊಂಡರೆ ವಾಗುವ ತಾ ಸಫಲಾ ತಿಳಕೊಂಬುದು ಸದ್ಗುರು ಸ್ವಾಮಿ ಬಲ 8 ಬಿಡಬಾರದು ಸಂಗತಿ ಸಜ್ಜನರ ಹಿಡಿಬೇಕಿದು ಒಂದೇ ನೋಡಿ ಸ್ಥರ ಅಡಿ ಇಟ್ಟನೆ ಬಾಹುದು ಪುಣ್ಣಿದರಾ ಪಡಕೊಂಡರೆ ಅಹುದು ಇಹಪರ 9 ತಡಮಾಡದೆ ನೋಡುವುದೀ ಸುಪಥ ಪಡಿಬೇಕಿದು ಒಂದೇ ಸುಸ್ವಹಿತ ಒಡಗೂಡದೆ ಬಾರದು ಕೈಗೂಡಿ ತಾ ಎಡಬಲಕೆ ತುಂಬಿದೆ ತುಳುಕುತ 10 ಜಾಗರ ತಾ ಎಡಿಎಡಿಗೆ ಸಂದಿಸಿ ತುಂಬಿದೆ ತಾ ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾನು ನೀನೆಂಬುದಕಾಗುವದಿದೆ ಉದಯಮಾನ ಧ್ರುವ ಅರಹು ನಿನ್ನೊಳರಿಯಾ ಅರುವ್ಹಿನೊಳು ಬೆರಿಯಾ ಅರಹು ಅರಿಯಲಿಕ್ಕೆ ಗುರುಕುರುಹು ನಿಜವರಿಯಾ 1 ಮರೆಸುವದರ ಅರಿಯಾ ಅರಿಸುವದರ ಜರಿಯಾ ಅರಸಿ ಮರಿಸಗುಡದರನುಭವದ ನಿಜಪರಿಯಾ 2 ಅರುವಿಲಹ ಖೂನ ಗುರುಕೃಪ ಜ್ಞಾನ ತರಳ ಮಹಿಪತಿ ಅರಿಯೊ ಪರಮ ಸುನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೇಗ ತಿಳಿಯೈ ಶುದ್ಧ ಮನದಿ ಶ್ರೀಗುರು ಪೇಳ್ದ ಬೋಧಾ ನೀಗುವಿ ಭವದಾ ಭಾಧಾ ಸ್ವರೂಪಾ ನಂದ ಪಡೆಯುವಿ ನೀ ಸ್ವರೂಪಾ ಪ ಪರಮಸತ್ಯದ ತತ್ವವರಿಯಲು ಮರಣಭಯವಾ ನೀಗುವೀ ಕರುಣಿ ಗುರುವಿನ ಚರಣಕಮಲದಿ ಬೆರೆತು ಸುಖಿಸುವಿ ನೀ ಸ್ವರೂಪಾ 1 ಅರಿಯೊನೀ ಪರಮಾತ್ಮನೆಂಬುದ ಪರಮ ಶಾಂತಿಯ ದೊರಕಿಸೀ ಗುರುಶಂಕರನಾ ಬೋಧದಾ ಸವಿಯುಂಡು ತಣಿಯುವಿ ನೀ 2
--------------
ಶಂಕರಭಟ್ಟ ಅಗ್ನಿಹೋತ್ರಿ