ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನ ದಯವಾಗಬೇಕು | ತನ್ನ | ಸದ್ಗತಿಗೆ ಅನ್ಯ ಸಾಧನ ಹೋಕು ಪ ಕನ್ನಡಿಯ ಕಿಲುಬು ಹತ್ತಿ ಮುನ್ನ | ಮಾಸಿರಲು ಮತ್ತ | ದನ್ನೆ | ಜಾಣ ಬಂದು ಬೆಳಗಲಾಗಿರುಹು | ತನ್ನ ತೋರುವಂತೆ ನಿಜವಾಗಿ | ಮನಸ್ಸಿನ ಕದಡುಗಳಿಸುವನು ಯೋಗಿ1 ಸಾಧಿಸಿ ಬಯಲಗಂಬಾರನಲಿ | ಮುತ್ತುವಿದ್ದರೇನು ಯಙ್ಞವಾಗದಲ್ಲಿ | ಅದಕ ಸಾದು ಜೋಹರೆನೆವೆ ಬುದ್ಧಿಯಲ್ಲಿ 2 ಗರಡಿಯಲಿಟ್ಟು ಹುಳವ ತನ್ನ | ಗುರುತು ತೋರುವುದು ಭೃಂಗೀ | ಅರಿಯದೇನು ಜನ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದ ಸಾರಿದನು ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನ ಚಿತ್ತ ನಿನ್ನ ಚಿತ್ತ ನಿನ್ನ ಚಿತ್ತವೋ ಪ. ಬನ್ನ ಬಡಿಸಬೇಡವಿನ್ನು ಭಯವ ಬಿಡಿಸಿ ಕಾಯೊ ಎನ್ನ ಅ.ಪ. ಘನ್ನ ಮನಸು ಮಾಡಿ ಈಗ ಎನ್ನ ಸಲಹಿದರೆ ಜಗದಿ ನಿನ್ನ ಕೀರ್ತಿಯು ಉನ್ನತದಲಿ ಮೆರೆವುದಿದೆಕೊ ಬನ್ನ ಬಡಿಸಬೇಡವಿನ್ನು ಘನ್ನಮಹಿಮ ಕೇಳು ಸೊಲ್ಲ ಇನ್ನು ಸುಮ್ಮನಿರಲು ಸಲ್ಲ ಘನಮಹಿಮನೆ 1 ಬುದ್ಧಿ ಭ್ರಮೆಯಿಂದ ನಾನು ಪೊದ್ದಿರುವ ಭಯವ ಬಿಡಿಸಿ ನಿದ್ದೆಯಲಿ ತಿಳಿಸಿದ್ವಾರ್ತೆ ಶುದ್ಧಗೊಳಿಸುತ ಮುದ್ದುಕೃಷ್ಣ ಅಭಯ ತೋರಿ ಉದ್ಧರಿಸಿದರೆ ಎನ್ನ ಶ್ರದ್ಧೆಯಿಂದ ನಿನ್ನ ಕೀರ್ತಿ ಮಧ್ವಮತದಿ ಸಾರುವೆನು2 ಬೆದರಿಸುವ ಪರಿಯದೇನು ಬದಿಗನಾಗಿ ಅರಿಯದೇನು ಹೃದಯದಲ್ಲಿ ನಿಂತ ಮೇಲೆ ಎನ್ನದಿನ್ನೇನು ಪದುಮನಾಭ ನಿನ್ನ ನಂಬಿ ಪದೋಪದಿಗೆ ನೆನೆಸುತಿರಲು ವಿಧ ವಿಧದಿ ಪರಿಕಿಸುವ ವಿಧವನರಿಯೆ ಪದುಮೆಯರಸ3 ಉಡಲು ಉಣಲು ಆಸೆಯಿಲ್ಲ ತೊಡಲು ಇಡಲು ಮಮತೆಯಿಲ್ಲ ಎಡದ ಬಲದ ನೆಂಟರಭಿಮಾನವಿಲ್ಲವು ಎಡರು ಬರಲು ಭಯವು ಇಲ್ಲ ಬಿಡಲು ದೇಹ ಅಂಜಿಕಿಲ್ಲ ನಡುವೆ ಕರೆವುದುಚಿತವಲ್ಲ ಮೃಡನ ಸಖನೆ ಕೇಳೊ ಸೊಲ್ಲ 4 ನಿರ್ದಯವನು ಮಾಡಲಿಕ್ಕೆ ಮಧ್ಯಮಧಮಳಲ್ಲವಿನ್ನು ಮಧ್ವಮುನಿಯ ಮತದಿ ಜನಿಸಿ ಶುದ್ಧ ಭಾವದಿ ಶುದ್ಧ ಸಾತ್ವಿಕರು ತಂದೆ ಮುದ್ದುಮೋಹನ ಗುರುಗಳಿಂದ ಪೊದ್ದಿ ದಾಸ್ಯರೀಗ ಜಗದಿ ಬದ್ಧ ಕಂಕಣಧರಿಸಿ ಮೆರೆವೆ 5 ಒಡೆಯ ನೀನು ಎನ್ನ ಧರೆಗೆ ಬಿಡದೆ ತಂದು ಜನ್ಮವಿತ್ತು ಬಿಡದೆ ಕಾಯ್ವ ಗುರುಗಳನ್ನು ಅಗಲಿಸುತ್ತಲಿ ಅಡಿಗಡಿಗಭಯವ ತೋರಿ ಪಿಡಿದು ಕೈಯ್ಯ ಸಲಹದಿರಲು ಅಡಿಗಳಾರದಿನ್ನು ನಾನು ಪಿಡಿಯೆ ಕಡಲಶಯನ 6 ನಾಥರಾರು ಎನಗೆ ಇಲ್ಲ |ಅ- ನಾಥಗಳನ್ನು ಮಾಡಿ ನಿನ್ನ ಮೂತಿ ತಿರುಹಿ ಸಲಹದಿರಲು ಪಾತಕಲ್ಲವೆ ಪಾತಕಾದಿ ದೂರನೆಂಬೊ ಖ್ಯಾತಿ ಸಟೆಯದಾಯ್ತು ಈಗ ನೀತಿಯರಿತು ಪೊರೆಯದಿರಲು ಜಾತರಹಿತ ಜಗದಿ ಸಲಹು 7 ದಾಸತನದಿ ಮೆರೆವೊದೊಂದು ಆಸೆಯಿಲ್ಲದಿನ್ನು ಬೇರೆ ಆಸೆಯೊಂದು ಇಲ್ಲ ಕೇಳು ನಾಶರಹಿತನೆ ಪಾಶಕರ್ಮ ಹರಿಸಿ ನಿನ್ನ ದಾಸಳೆಂದು ಮೆರೆಸೆ ಜಗಕೆ ಈಶನೆಂದು ನಿನ್ನ ಮೆರೆಸಿ ಆಸೆ ಪೂರೈಸಿಕೊಂಬೆ 8 ಮೃತ್ಯುವಿಗೆ ಮೃತ್ಯುವಾಗಿ ತುತ್ತುಮಾಡಿ ಜಗವ ನುಂಗಿ ಮತ್ತೆ ಬ್ರಹ್ಮಾಂಡ ಸೃಜಿಸಿ ಪೆತ್ತು ಜೀವರ ಭಕ್ತ ಜನಕೆ ಬಂದ ಎಡರು ಮೃತ್ಯುಗಳನು ಕಾಯ್ದ ದೇವ ಮೃತ್ಯು ಮೃತ್ಯು ಶರಣು ನೃಹರಿ ಮೃತ್ಯು ಹರಿಸಿ ಕಾಯೊ ಶೌರಿ9 ಬಿಡಲಿಬೇಡ ಕೈಯ್ಯ ಇನ್ನು ಬಿಡದೆ ಕಾಯೊ ಶರಣು ಶರಣು ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲಾತ್ಮಕ ಕಡೆಗೆ ನಿನ್ನ ಪಾದಸೇವೆ ಬಿಡದೆ ಕೊಡುವ ದೃಢವ ಬಲ್ಲೆ ಕರವ ಪಿಡಿಯೊ 10
--------------
ಅಂಬಾಬಾಯಿ
ಸದ್ಗತಿಗೆ ಅನ್ಯ ಸಾಧನ ಹೋಕು ಪ ತನ್ನ ತೋರುವಂತೆ ನಿಜವಾಗೀ | ಮನಸಿನ್ನ ಕದಡು ಗಳಸುವನು ಯೋಗೀ 1 ಓದಿ ಕೇಳಿ ತಿಳಿದರೇನು ಭೇದಿಸದು ನಿಜ ಸುಖ | ಸಾಧಿಸಿ ಬಯಲ ಗಂಬಾರನಲ್ಲಿ | ಮುತ್ತು ಇದ್ದರೇನು ಯಜ್ಞವಾಗದಲ್ಲಿ | ಅದಕ ಸಾಧು | ಜೋಹರೆನೆವೆ ಬುದ್ಧಿಯಲ್ಲಿ 2 ಗರಡಿಲಿಟ್ಟು ಹುಳುವ ತನ್ನ ಗುರುತ ತೋರುವದು ಭ್ರಂಗೀ | ಅರಿಯದೇನು ಜನಾ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದು ಸಾರಿದನು ಮಹಿಪತಿ ಸೊಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು