ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿದ್ದರೀ ಕೊಂಪೆ ಎನಗೆ ನಂಬಿಕೆಯಿಲ್ಲ ಪ ಮುಂದರಿತು ಶ್ರೀಹರಿಯ ಭಜಿಸುವುದು ಲೇಸುಅ ಎಲುವುಗಳು ತೊಲೆಜಂತೆ ನರಗಳವು ಬಿಗಿದಂತೆಬಲಿದ ಚರ್ಮವು ಮೇಲು ಹೊದಿಕೆಯಂತೆಗಳಗಳನೆ ನುಡಿವ ನಾಲಗೆ ಗಂಟೆಯುಲಿಯಂತೆಕೆಲಕಾಲಕೀ ಕೊಂಪೆ ಕಡೆಗಾಹುದಂತೆ 1 ಕಂಡಿಗಳು ಒಂಬತ್ತು ಕಳಬಂಟರೈವರುಅಂಡಲೆವುದೊತ್ತಿನಲಿ ಷಡುವರ್ಗವುಮಂಡಲಕೆ ಹೊಸಪರಿಯ ಮನ್ಮಥನ ಠಾಣ್ಯವಿದುಮಂಡೆ ಹೋಗುವುದನ್ನು ಅರಿಯದೀ ಕೊಂಪೆ2 ಕೊಂಪೆಯಲಿ ಶೃಂಗಾರ ಕೊಂಡಾಡಲಳವಲ್ಲಕೆಂಪು ಬಣ್ಣಗಳಿಂದ ಚೆನ್ನಾಯಿತುಇಂಪಿನಲಿ ಕಾಗಿನೆಲೆಯಾದಿಕೇಶವನನ್ನುಸೊಂಪಿನಲಿ ನೆನೆನೆನೆದು ಸುಖಿಯಾಗು ಮನುಜಾ 3
--------------
ಕನಕದಾಸ
ಪೊರೆಯಮ್ಮ ವಾಣಿ ತರುಣಿ ವಿಧಿರಾಣಿ ರಮಣಿ ಪ. ಸರಸ್ವತಿ ನಿನ್ನನೇ ನೆರೆ ಭಜಿಸುತ್ತಿಹ ಅರಿಯದೀ ತರಳರಂ ಕರುಣದೊಳೀಕ್ಷಿಸು 1 ದೇವಿ ನಿನ್ನಿಂದ ಲೇ ಜೀವಕೋಟಿಗಳಿಂತು ಜೀವಿಪುದಾರೆಯೆ ದೇವಿ ಸಂಜೀವಿನಿ 2 ಜ್ಞಾನಾಧಿದೇವತೆ ಆನಂದಪ್ರದಾತೆ ಮುನಿಜನ ಸಂಸ್ತುತೆ ವನಜಜದಯಿತೇ 3 ಸದಯ ನೀಂ ದಯೆಗೈಯೆ ಸದಸದ್ವಿಚಾರಮಂ ಹೃದಯ ಸಂಶುದ್ಧಿಯಂ ಪದುಳಮಂ ಧೈರ್ಯಮಂ4 ದೇಶಸೇವೆಗೆಂದು ಆಶಿಪರೊಳಿಂದು ಶೇಷಗಿರೀಶನ ದಾಸರೆನಿಸೆಂದು 5
--------------
ನಂಜನಗೂಡು ತಿರುಮಲಾಂಬಾ